ಕ್ರೀಡೆ

ಗ್ಲೋಬ್ ಸಾಕರ್ ಪ್ರಶಸ್ತಿ: ಕ್ರಿಸ್ಟಿಯಾನೊ ರೊನಾಲ್ಡೊಗೆ 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವ

Raghavendra Adiga

ದುಬೈ: ಪೋರ್ಚುಗಲ್ ಫುಟ್ಬಾಲ್ ಕ್ರೀಡಾತಾರೆ ಕ್ರಿಸ್ಟಿಯಾನೊ ರೊನಾಲ್ಡೊ 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವಕ್ಕೆ ಪಾತ್ರವಾಗಿದ್ದಾರೆ.

ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ, ಲಿವರ್‌ಪೂಲ್‌ನ ಮೊಹಮ್ಮದ್ ಸಲಾಹ್ ಮತ್ತು ಮಾಜಿ ಆಟಗಾರ ರೊನಾಲ್ಡಿನೊ ಅವರೂ ಸಹ ಈ ಗೌರವ ಪಡೆಯುವವರ ಪಟ್ಟಿಯಲ್ಲಿದ್ದರು. ಆದರೆ ರೊನಾಲ್ಡೊ ಈ ಎಲ್ಲರನ್ನೂ ಹಿಂದಿಕ್ಕಿ ಮಹತ್ವದ ಪುರಸ್ಕಾರಕ್ಕೆ ಭಾಜನವಾಗಿದ್ದಾರೆ.

ಈ ಬಗೆಗೆ ಗ್ಲೋಬ್ ಸಾಕರ್ ಅವಾರ್ಡ್ಸ್ ತನ್ನ ಟ್ವೀಟ್ ನಲ್ಲಿ ಪ್ರಕಟಿಸಿದೆ.

ಈ ಸಮಯದಲ್ಲಿ ಮಾತನಾಡಿದ ರೊನಾಲ್ಡೊ "ತುಂಬಾ ಸಂತೋಷ ಮತ್ತು ಹೆಮ್ಮೆಯಿಂದ ತಾನು ಪ್ರಶಸ್ತಿ ಸ್ವೀಕರಿಸಿದ್ದೇನೆ" ಎಂದರು.

"ಪ್ರಶಸ್ತಿ ಸಿಕ್ಕ ಸಂತೋಷ ವರ್ಣಿಸಲು ಸಾಧ್ಯವಿಲ್ಲ, ! ನಾನು ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ನನ್ನ 20 ನೇ ವರ್ಷವನ್ನು ಆಚರಿಸಲಿದ್ದೇನೆ, ಗ್ಲೋಬ್ ಸಾಕರ್ ಪ್ಲೇಯರ್ ಆಫ್ ದಿ ಸೆಂಚುರಿ ಗೌರವವನ್ನು ನಾನು ತುಂಬಾ ಸಂತೋಷ ಮತ್ತು ಹೆಮ್ಮೆಯಿಂದ ಸ್ವೀಕರಿಸುವೆ. 

"ಹೆಚ್ಚು ಅದ್ಭುತ ಆಟಗಾರರೊಂದಿಗೆ ಈ ಪ್ರಶಸ್ತಿಗೆ ನಾನು ನಾಮನಿರ್ದೇಶಗೊಂಡಿರುವುದು ನನಗೆ ಹೆಮ್ಮೆಯ ಸಂಗತಿ. ಮುಂದಿನ ವರ್ಷ ಸಾಂಕ್ರಾಮಿಕ ಕೊನೆಯಾಗಲಿದೆ.ಎಂದು ನಾನು ಭಾವಿಸುವೆ. ಆಗ ನೀವು ನಿಮ್ಮ ಕುಟುಂಬದೊಡನೆ ಹೆಚ್ಚು ಆನಂದಿಸಬಹುದು" ರೊನಾಲ್ಡೊ ಹೇಳಿದ್ದಾರೆ.

ಇದಲ್ಲದೆ ಬೇಯ್‌ರ್ನ್ ಮ್ಯೂನಿಚ್ ನ ರಾಬರ್ಟ್ ಲೆವಾಂಡೋವ್ಸ್ಕಿವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದರು. ಕ್ಲಬ್‌ನ ಕೋಚ್ ಹನ್ಸಿ ಫ್ಲಿಕ್ ಅವರು ವರ್ಷದ ಕೋಚ್ ಪ್ರಶಸ್ತಿಯನ್ನು ಪಡೆದರು. ಮಾತ್ರವಲ್ಲದೆ ಬೇಯರ್ನ್ ಮ್ಯೂನಿಚ್ ಕ್ಲಬ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯೊಲಾ ಕೋಚ್ ಆಫ್ ದಿ ಸೆಂಚುರಿ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಸ್ಪ್ಯಾನಿಷ್ ದೈತ್ಯ ಆಟಗಾರ ರಿಯಲ್ ಮ್ಯಾಡ್ರಿಡ್ ಕ್ಲಬ್ ಆಫ್ ದಿ ಸೆಂಚುರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

SCROLL FOR NEXT