ಕ್ರೀಡೆ

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾವನಾ ಜತ್‌

Raghavendra Adiga

ರಾಂಚಿ: ಭಾರತದ ಮಹಿಳಾ ರೇಸ್ ವಾಕರ್ ಭಾವನ ಜತ್‌ ಅವರು ಇದೇ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಜಾರ್ಖಡ್‌ನ ರಾಂಚಿನಲ್ಲಿ ಇಂದು ಮುಕ್ತಾಯವಾದ 7ನೇ ನ್ಯಾಷನಲ್ ರೇಸ್ ವಾಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾವನಾ ಜತ್‌ ಅವರು ಒಂದು ಗಂಟೆ 29 ನಿಮಿಷ ಹಾಗೂ 54 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಒಲಿಂಪಿಕ್ಸ್‌ ಟಿಕೆಟ್‌ ಸಂಪಾದಿಸಿದ್ದಾರೆ.

ಏಳನೇ ನ್ಯಾಷನಲ್ ರೇಸ್‌ ವಾಕ್‌ ಚಾಂಪಿಯನ್‌ಶಿಪ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪುರುಷ ಮತ್ತು ಮಹಿಳಾ ಸ್ಪರ್ಧೆಗಳಿಬ್ಬರಿಗೂ ಅವಕಾಶ ಕಲ್ಪಿಸಲಾಗಿತ್ತು. ಪುರುಷರಿಗೆ ಒಂದು ಗಂಟೆ 20 ನಿಮಿಷ ಹಾಗೂ ಮಹಿಳೆಯರಿಗೆ ಒಂದು ಗಂಟೆ 31 ನಿಮಿಷ ಅರ್ಹತಾ ಸಮಯವನ್ನು ನಿಗದಿಪಡಿಸಲಾಗಿತ್ತು.

ಇಂದು ರೇಸ್‌ ವಾಕ್‌ ಚಾಂಪಿಯನ್‌ಶಿಪ್‌ ಮುಕ್ತಾಯವಾಗಿದ್ದು, ಪುರುಷ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ಸಂದೀಪ್‌ ಕುಮಾರ್ ಮತ್ತು ಭಾವನಾ ಜತ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.

20 ಕಿ.ಮೀ ಮುಕ್ತಾಯಗೊಳಿಸಲು ಭಾವನಾ ಅವರು ಒಂದು ಗಂಟೆ 29 ನಿಮಿಷ ಹಾಗೂ 54 ಸೆಕೆಂಡ್‌ಗಳನ್ನು ತೆಗೆದುಕೊಂಡರು. ಆ ಮೂಲಕ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಪ್ರಿಯಾಂಕ ಗೋಸ್ವಾಮಿ ಅವರು ಒಂದು ಗಂಟೆ 31 ನಿಮಿಷ ಹಾಗೂ 36 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಕೇವಲ 36 ಸೆಕೆಂಡ್‌ಗಳ ಅಂತರದಲ್ಲಿ ಟೋಕಿಯೊ ಟಿಕೆಟ್‌ ಕಳೆದುಕೊಂಡರು.

SCROLL FOR NEXT