ಕ್ರೀಡೆ

ಏಷ್ಯನ್ ಕುಸ್ತಿ: ನಾಲ್ಕನೇ ದಿನ  ಭಾರತಕ್ಕೆ 1 ಬೆಳ್ಳಿ, 3 ಕಂಚು ತಂದ ಮಹಿಳೆಯರು

Raghavendra Adiga

ನವದೆಹಲಿ:  ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಜಪಾನ್‌ನ ನವೋಮಿ ರ್ಯೂಕ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಈ ಚಾಂಪಿಯನ್‌ಶಿಪ್‌ನ ನಾಲ್ಕನೇ ದಿನದಂದು ಭಾರತ ಶುಕ್ರವಾರ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದಿದೆ.

ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ 65 ಕೆಜಿ ವಿಭಾಗದ ಪಂದ್ಯದಲ್ಲಿ ನ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ 2-0 ರಿಂದ ಸೋಲನುಭವಿಸಿದರು. ಸೆಮಿಫೈನಲ್ಸ್ ನಲ್ಲಿ ಪಂದ್ಯದಲ್ಲಿ ಉಜ್ಬೇಕಿಸ್ತಾನದ ನಬೀರಾ ಅಸೆನ್ಬ್ವಾ ಅವರನ್ನು 5-4 ಗೋಲುಗಳಿಂದ ಸೋಲಿಸಿದ ನಂತರ ಸಾಕ್ಷಿ ಫೈನಲ್‌ಗೆ ಪ್ರವೇಶಿಸಿದ್ದರು. 

ಭಾರತದ ಇನ್ನೋರ್ವ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಟ್ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.ಇದಲ್ಲದೆ 57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್‌, 72 ಕೆ.ಜಿ. ವಿಭಾಗದಲ್ಲಿ ಗುರುಶರಣ್‌ಪ್ರೀತ್‌ ಕೌರ್‌ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಕೂಟದಲ್ಲಿ ಇದುವರೆಗೆ ಭಾರತ ಒಟ್ತಾರೆ 13 ಪದಕ ಗಳಿಸಿಕೊಂಡು ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಮಹಿಳಾ ವಿಭಾಗದಲ್ಲಿ ಭಾರತ 3 ಚಿನ್ನ, 2 ಬೆಳ್ಳಿ, 3 ಕಂಚು ಜಯಿಸಿದೆ. ಒಟ್ಟಾರೆ 4 ಚಿನ್ನ, 2 ಬೆಳ್ಳಿ 7 ಕಂಚು ಸೇರಿದೆ.
 

SCROLL FOR NEXT