ಕ್ರೀಡೆ

'ಟಿಕ್‌ಟಾಕ್’ಬ್ಯಾನ್ ಆಯ್ತು ಎಂದು ಸಂಭ್ರಮಿಸಿದ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ!

Raghavendra Adiga

ನವದೆಹಲಿ: ಎರಡು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟ ಚಿನ್ನದ ಪದಕ ವಿಜೇತರಾಗಿದ್ದ ಹೀನಾ ಸಿಧು ಚೀನಾ ಮೂಲದ ಪ್ರಸಿದ್ಧ ಟಿಕ್ ಟಾಕ್ ಆ್ಯಪ್  ನಿಷೇಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಭದ್ರತಾ ಕಾಳಜಿಯಿಂದಾಗಿ ಭಾರತ ಸರ್ಕಾರ ಸೋಮವಾರ ನಿಷೇಧಿಸಿದ 59 ಚೀನೀ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್ ಸಹ ಸೇರಿದೆ. 

"ಟಿಕ್‌ಟಾಕ್  ಕಾಲ ಮುಗಿದಿದೆ,  ನನಗೆ ತುಂಬಾ ಸಂತಸವಾಗಿದೆ. ದ್ವೇಷದ ವೀಡಿಯೊಗಳು ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯದ ವೀಡಿಯೊಗಳೇ ಹೆಚ್ಚುರುತ್ತಿದ್ದ ಟಿಕ್‌ಟಾಕ್  ಬ್ಯಾನ್ ಆಗಿದ್ದು ನನಗೆ ಖುಷಿಯಾಗಿದೆ, ಟಿಕ್‌ಟಾಕ್  ಇಲ್ಲದೆ ಇಂಟರ್ನೆಟ್ ಸಂತೋಷ ತರುತ್ತಿದೆ!!!"" ಸಿಧು ಟ್ವೀಟ್ ಮಾಡಿದ್ದಾರೆ.

ಪೂರ್ವ ಲಡಾಕ್‌ನಲ್ಲಿ ಚೀನಾದ  ಸೈನಿಕರೊಂದಿಗೆ ನಡೆದ ಘರ್ಷಣೆ ವೇಳೆ  20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳು ಬಿಗಡಾಯಿಸುತ್ತಿರುವುದರಿಂದ ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ 59 ಚೀನೀ ಆ್ಯಪ್‌ಗಳನ್ನು ಸರ್ಕಾರ ಸೋಮವಾರ ನಿಷೇಧಿಸಿದೆ.

SCROLL FOR NEXT