ದ್ಯುತಿ ಚಾಂದ್ 
ಕ್ರೀಡೆ

ಒಲಂಪಿಕ್ ತರಬೇತಿಗೆ ಹಣವಿಲ್ಲದೆ ಬಿಎಂಡಬ್ಲ್ಯು ಕಾರ್ ಮಾರಲು ಮುಂದಾದ ದ್ಯುತಿ ಚಾಂದ್!

ಕೊರೋನಾ ಜಾಗತಿಕ ಸಾಂಕ್ರಾಮಿಕದಿಂದಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ, ಕ್ರೀಡಾ ಪ್ರಾಯೋಜಕರು ಕಡಿಮೆಯಾಗಿದ್ದಾರೆ. ಇದರಿಂದಾಗಿ ಭಾರತದ ಮಹತ್ವದ ಅಥ್ಲೀಟ್ ದ್ಯುತಿ ಚಾಂದ್ ತನ್ನ ತರಬೇತಿಗಾಗಿ ಹಣ ಹೊಂದಿಸಲು ತನ್ನ ಅಮೂಲ್ಯವಾದ ಆಸ್ತಿ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಲು ಸಿದ್ದವಾಗಿದ್ದಾರೆ

ಕೊರೋನಾ ಜಾಗತಿಕ ಸಾಂಕ್ರಾಮಿಕದಿಂದಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ, ಕ್ರೀಡಾ ಪ್ರಾಯೋಜಕರು ಕಡಿಮೆಯಾಗಿದ್ದಾರೆ. ಇದರಿಂದಾಗಿ ಭಾರತದ ಮಹತ್ವದ ಅಥ್ಲೀಟ್ ದ್ಯುತಿ ಚಾಂದ್ ತನ್ನ ತರಬೇತಿಗಾಗಿ ಹಣ ಹೊಂದಿಸಲು ತನ್ನ ಅಮೂಲ್ಯವಾದ ಆಸ್ತಿ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಲು ಸಿದ್ದವಾಗಿದ್ದಾರೆ.

ಕಾರ್ ಖರೀದಿಸುವವರ ಹುಡುಕಾಟದಲ್ಲಿರಿವ ದ್ಯುತಿ ತಮ್ಮ ಕಾರಿನ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಅವರು 2015 ಬಿಎನ್‌ಡಬ್ಲ್ಯೂ 3-ಸರಣಿ ಯ ಕಾರನ್ನು  30 ಲಕ್ಷಕ್ಕೆ ಖರೀದಿಸಿದ್ದರು..

"ಈ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಪ್ರಾಯೋಜಕರು ಸಿಗುತ್ತಿಲ್ಲ.  ನನಗೆ ಹಣದ ಅವಶ್ಯಕತೆಯಿದೆ ಮತ್ತು ಟೋಕಿಯೋ ಒಲಿಂಪಿಕ್‌ಗೆ ನಾನು ತಯಾರಿ ನಡೆಸುತ್ತಿರುವಾಗ ನನ್ನ ತರಬೇತಿ ಮತ್ತು ಆಹಾರ ವೆಚ್ಚಗಳನ್ನು ಪೂರೈಸಲು ನನಗೆ ಹಣ ಬೇಕಿದ್ದು ಅದಕ್ಕಾಗಿ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ, 

"ತನ್ನ ಏಷ್ಯನ್ ಕ್ರೀಡಾಕೂಟದ ಸಾಧನೆಯ ನಂತರ ಒಡಿಶಾ ಸಿಎಂನವೀನ್ ಪಟ್ನಾಯಕ್ ಅವರಿಂದ ಪಡೆದ ನಗದು ಬಹುಮಾನದಿಂದ ತಾನು ಕಾರನ್ನು ಖರೀದಿಸಿದ್ದೆ ಎಂದು ಚಾಂದ್ ಹೇಳಿದ್ದಾರೆ. "ಏಷ್ಯನ್ ಕ್ರೀಡಾಕೂಟದಲ್ಲಿ ನನ್ನ ಸಾಧನೆಗಾಗಿ ಒಡಿಶಾ ಎಂ ನವೀನ್ ಪಟ್ನಾಯಕ್ ಅವರಿಂದ 3 ಕೋಟಿ ರೂ.ಗಳ ನಗದು ಬಹುಮಾನವನ್ನು ಪಡೆದ ನಂತರ ನಾನು ಅದನ್ನು ಖರೀದಿಸಿದೆ, ಆ ಹಣದಿಂದ ನಾನು ನನ್ನ ಮನೆ ನಿರ್ಮಿಸಿದ್ದೆ ,  ಬಿಎಂಡಬ್ಲ್ಯು ಕಾರ್ ಖರೀದಿಸಿದೆ."

ಆದರೆ ದ್ಯುತಿ ಚಾಂದ್ ಪೋಸ್ಟ್ ಹಾಕಿದ್ದ ಕೆಲ ಸಮಯದ ನಂತರ ಆ ಪೋಸ್ಟ್ ಅನ್ನು ಅಳಿಸಿದ್ದಾರೆ. ಇದರ ಬಗ್ಗೆ ಪ್ರಶ್ನಿಸಲಾಗಿ ಅವರು "ಅಭಿಮಾನಿಗಳು ಸರ್ಕಾರದ ನೆರವು ಕೇಳಲು ಸೂಚಿಸಿದ್ದಾರೆ" ಎಂದು ಒಪ್ಪಿಕೊಂಡಿದ್ದಾರೆ. "ನನ್ನ ಬಳಿ ಇನ್ನೆರಡು ಕಾರುಗಳು ಇರುವುದರಿಂದ, ನನ್ನ ನಿವಾಸದಲ್ಲಿ 3 ಕಾರುಗಳಿಗೆ ಸಾಕಷ್ಟು ಸ್ಥಳಾವಕಾಶವಿಲ್ಲ, ಆದ್ದರಿಂದ ನಾನು ಒಂದನ್ನು ಮಾರಾಟ ಮಾಡಲು ಬಯಸುತ್ತೇನೆ."ಏತನ್ಮಧ್ಯೆ, ಮುಂದಿನ ವರ್ಷಗಳಲ್ಲಿ ಒಲಿಂಪಿಕ್ಸ್‌ಗೆ ತರಬೇತಿ ನೀಡಲು ಸರ್ಕಾರ ಅವರಿಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು, ಆದರೆ ತರಬೇತುದಾರ, ದೈಹಿಕ ಚಿಕಿತ್ಸಕರು, ಆಹಾರ ತಜ್ಞರು ಮತ್ತು ಇತರರ ವೇತನಕ್ಕಾಗಿ ಆಕೆಗೆ ತಿಂಗಳಿಗೆ 5 ಲಕ್ಷ ರೂ ವೆಚ್ಚ ತಗುಲುತ್ತದೆ.

"ನನ್ನ ಎಲ್ಲ ಹಣವನ್ನು ನಾನು ಖರ್ಚು ಮಾಡಿದ್ದೇನೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ನನ್ನ ತರಬೇತಿಗಾಗಿ ಪ್ರಾಯೋಜಕರು ಸಿಕ್ಕಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇಂತಹಾ ಸ್ಥಿತಿ ಎದುರಾಗಿದೆ. ಪ್ರಾಯೋಜಕರನ್ನು ಪಡೆಯುವುದು ಈಗ ಕಷ್ಟಕರವಾಗಿದೆ, ಅಲ್ಲದೆ ಕೋವಿಡ್ ಕಾರಣ ಕ್ರೀಡಾಕೂಟವನ್ನು ಜುಲೈ 2021 ಕ್ಕೆ ಮುಂದೂಡಲಾಗಿದೆ "ನನ್ನ ಫಿಟ್ನೆಸ್ ವೆಚ್ಚ ಮತ್ತು ಜರ್ಮನಿಯಲ್ಲಿ ತರಬೇತಿಗಾಗಿ ನನಗೆ ಹಣ ಬೇಕು, ನನ್ನ ಐಷಾರಾಮಿ ಕಾರನ್ನು ಮಾರಾಟ ಮಾಡಲು ನಾನು ನಿರ್ಧರಿಸಿದೆ" ಎಂದು ಆಕೆ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT