ಕ್ರೀಡೆ

ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ನನ್ನ ತಂದೆ ನನಗೆ 2 ವರ್ಷ ಟೈಂ ಕೊಟ್ಟಿದ್ದರು: ರೋಜರ್ ಫೆಡರರ್

Raghavendra Adiga

ಜ್ಯೂರಿಚ್: ಟೆನ್ನಿಸ್ ಅಗ್ರ ಶ್ರೇಯಾಂಕಿತರಲ್ಲಿ ಒಬ್ಬರಾದ ರೋಜರ್ ಫೆಡರರ್ ಗೆ ಅವರ ತಂದೆ ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಎರಡು ವರ್ಷಗಳ ಸಮಯ ನೀಡಿದ್ದರಂತೆ! ಹೀಗೆಂದು ಸ್ವತಃ ದಾಖಲೆಗಳ ವೀರ ಫೆಡರರ್ ಹೇಳಿಕೊಂಡಿದ್ದಾರೆ. ಫೆಡರರ್ ಅವರ ಬಾಲ್ಯದ ದಿನಗಳಲ್ಲಿ ವೃತ್ತಿಪರ ಟೆನ್ನಿಸ್ ಆಟಗಾರನಾಗಲು ಅವರ ಪೋಷಕರು ಸಾಕಷ್ಟು ಆರ್ಥಿಕ ಬೆಂಬಲ ನೀಡಿದ್ದರೂ ತಮ್ಮ ಮಗ ತೀವ್ರ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಅವರಿಗಿರಲಿಲ್ಲ.

"ನನ್ನ ಪೋಷಕರು ನನ್ನ ಟೆನ್ನಿಸ್ ತರಬೇತಿಗಾಗಿ ವರ್ಷಕ್ಕೆ ಸುಮಾರು 30,000 ಸ್ವಿಸ್ ಫ್ರಾಂಕ್‌ಗಳನ್ನು ((ಸುಮಾರು 28,000 ಯುರೋಗಳು) ವೆಚ್ಚ ಮಾಡಿದ್ದರು. ಆದರೆ ವೃತ್ತಿಪರ ಆಟಗಾರನಾಗುವ ನನ್ನ ಸಾಮರ್ಥ್ಯದ ಬಗ್ಗೆ ಅವರಿಗೆ ಸಂದೇಹವಿತ್ತು. " ಸಂದರ್ಶನವೊಂದರಲ್ಲಿ ಫೆಡರರ್ ಹೇಳಿದ್ದಾರೆ.

"ನಾನು 16 ವರ್ಷದವನಿದ್ದಾಗ, ನಾನು 100% ಟೆನಿಸ್‌ನಲ್ಲಿ ತೊಡಗಿಸಿಕೊಳ್ಳಲು ಶಾಲೆ ಬಿಡಬೇಕಾಗುತ್ತದೆ ಎಂದು ಹೇಳಿದ್ದೆ. ಆಗ ನಾನು ಕ್ರೀಡೆಯಲ್ಲಿ ಯಶಸ್ಸು ಗಳಿಸಿಕೊಳ್ಳಲು  ನನ್ನ ತಂದೆ ನನಗೆ ಎರಡು ವರ್ಷದ ಕಾಲಮಿತಿ ನೀಡಿದ್ದರು. ಒಂದೊಮ್ಮೆ ನಾನು ಆ ಅವಧಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗದೆ ಹೋದಲ್ಲಿ  ನಾನು ಮತ್ತೆ ಶಾಲೆಗೆ ಹೋಗಬೇಕಾಗಿತ್ತು ನಾನು ಅವರಿಗೆ ನನ್ನ ಮೇಲೆ ಭರವಸೆ ಇಡಲು ಕೇಳಿದೆ. ಮತ್ತು ಅದೃಷ್ಟವಶಾತ್ ನಾನು ಕಿರಿಯರ ವಿಶ್ವ ನಂ .1 ಸ್ಥಾನಪಡೆಯಲು ಸಫಲನಾದೆ"

ಫೆಡರರ್ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್  ಆಟಗಾರರಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟಿದ್ದಾರೆ. ಅವರು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವುದು ಟೆನ್ನಿಸ್  ಇತಿಹಾಸದಲ್ಲಿ ಯಾವುದೇ ಪುರುಷ ಆಟಗಾರನೊಬ್ಬ ಅತ್ಯಂತ ಹೆಚ್ಚು ಸಮಯ ಎಟಿಪಿ ವಿಶ್ವ ನಂ .1 ಪಟ್ಟ ಅಲಂಕರಿಸಿದ್ದರೆ ಅದು ಸಹ ಫೆಡರರ್ ಆಗಿದ್ದಾರೆ. 

ಜಿಮ್ಮಿ ಕಾನರ್ಸ್ ನಂತರ 100 ಅಥವಾ ಹೆಚ್ಚಿನ ವೃತ್ತಿಜೀವನದ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ ಫೆಡರರ್ ಅವರಾಗಿದ್ದು ಓಪನ್ ಎರಾದಲ್ಲಿ  1,200 ಗೆಲುವುಗಳನ್ನು ಗಳಿಸಿದ ಏಕೈಕ ಆಟಗಾರ ಸಹ ಅವರಾಗಿದ್ದಾರೆ.

SCROLL FOR NEXT