ಕ್ರೀಡೆ

ಈ ದೇಶವೇ ಒಂದು ದೊಡ್ಡ ಜೋಕ್: ಅರ್ಜುನ ಪ್ರಶಸ್ತಿ ಅವ್ಯವಸ್ಥೆ ಬಗ್ಗೆ ಎಚ್ಎಸ್ ಪ್ರಣೋಯ್ ಆಕ್ರೋಶ

Lingaraj Badiger

ನವದೆಹಲಿ: ಸತತ ಎರಡನೇ ವರ್ಷವೂ ಅರ್ಜುನ ಪ್ರಶಸ್ತಿಗೆ ತಮ್ಮ ಹೆಸರು ಶಿಫಾರಸು ಮಾಡದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ ಎಚ್‌ ಎಸ್‌ ಪ್ರಣೋಯ್‌ ಅವರು, ಈ ದೇಶವೇ ಒಂದು ದೊಡ್ಡ ಜೋಕ್ ಎಂದು ಟ್ವೀಟ್ ಮಾಡಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ನಿನ್ನೆಯಷ್ಟೇ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಗೂ ಪುರುಷರ ಸಿಂಗಲ್ಸ್ ಆಟಗಾರ ಸಮೀರ್ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಣೋಯ್, ಅರ್ಜುನ ಪ್ರಶಸ್ತಿ ಅದೇ ಹಳೆಯ ಕಥೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದಿರುವವರನ್ನು ಸಹ ಬಿಐಎ ಶಿಫಾರಸು ಮಾಡಿಲ್ಲ. ಆದರೆ ಯಾವುದೇ ಪ್ರಮುಖ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಈ ದೇಶ ತಮಾಷೆಯಾಗಿದೆ"ಎಂದು ಬರೆದಿದ್ದಾರೆ.

ಬಿಐಎ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವ ಮೂವರು ಆಟಗಾರರ ಪೈಕಿ ಸಾತ್ವಿಕ್, ಚಿರಾಗ್ 2018ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆದರೆ ಸಮೀರ್ ಅವರು ಯಾವುದೇ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಿಲ್ಲ. ಇದು ಪ್ರಣೋಯ್ ಆಕ್ರೋಶಕ್ಕೆ ಕಾರಣವಾಗಿದೆ.

SCROLL FOR NEXT