ಕ್ರೀಡೆ

ಪ್ರಕಾಶ್ ಪಡುಕೋಣೆ ಜನ್ಮದಿನ ನಿಮಿತ್ತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವಿನ ನೆನಪು

Raghavendra Adiga

ನವದೆಹಲಿ: ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ ಪ್ರಕಾಶ್ ಪಡುಕೋಣೆ ತಮ್ಮ 65 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ 1980 ರಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಅವರ ಗೆಲುವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ.

ಈ ಗೆಲುವಿನೊಂದಿಗೆ, ಪಡುಕೋಣೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದ ಮೊದಲ ಭಾರತೀಯರೆನಿಸಿದ್ದರು.ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಪಡುಕೋಣೆ ಇಂಡೋನೇಷ್ಯಾದ ಲಿಯೆಮ್ ಸ್ವೀ ಕಿಂಗ್ ಜೊತೆ ಸೆಣೆಸಿದ್ದರು.ಭಾರತೀಯ ಆಟಗಾರ ಈ ಪ್ರಶಸ್ತಿ ಗೆದ್ದಾಗ ಅವರಿಗಿನ್ನೂ  ಕೇವಲ 24 ವರ್ಷ!

ಆ ಸಮಯದಲ್ಲಿ ಪಂದ್ಯಾವಳಿಯ ಮುಂಚಿತವಾಗಿ ಪಡುಕೋಣೆ ಮತ್ತು ಕಿಂಗ್ ಇಬ್ಬರೂ ಒಂದೇ ಒಂದು ಪಂದ್ಯವನ್ನೂ ಸೋಲದ ಕಾರಣ ಫೈನಲ್ ಹಣಾಹಣಿ ಅತ್ಯಂತ ಕುತೂಹಲವನ್ನುಂಟುಮಾಡಿತ್ತು.ಆದಾಗ್ಯೂ, ಪಡುಕೋಣೆ 15-3, 15-10ರಿಂದ ಎದುರಾಳಿಯನ್ನು ಸೋಲಿಸಿ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡರು.

ಪಡುಕೋಣೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದಾಗ, ಅವರು ಮೂರನೇ ಶ್ರೇಯಾಂಕದ ಸ್ಥಾನ ಪಡೆದಿದ್ದರು.ಪಡುಕೋಣೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾರತದ ಪಾಲಿಗೆ ಶ್ರೇಷ್ಠ ಕ್ರೀಡಾಪಟುವಾಗಿದ್ದಾರೆ. 1983 ರ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ದೇಶದ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದವರೆನ್ನಿಸಿದ್ದರು. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು 1971 ರಲ್ಲಿ ಕೇವಲ 16 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಹಿರಿಯ ಚಾಂಪಿಯನ್‌ಶಿಪ್ ಗೆಲುವನ್ನು ಪಡೆದಿದ್ದರು.ಇದರ ಪರಿಣಾಮಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅವರು 1979 ರವರೆಗೆ ಸತತವಾಗಿ ಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುತ್ತಾ ಸಾಗಿದ್ದು . 1978 ರಲ್ಲಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ನ ಚಿನ್ನದ ಪದಕವನ್ನು ಗೆದ್ದರು.ಪಡುಕೋಣೆ 1989 ರಲ್ಲಿ ವೃತ್ತಿನಿರತ ಬ್ಯಾಡ್ಮಿಂಟನ್ ಗೆ ವಿದಾಯ ಹೇಳಿದ್ದರು. 

SCROLL FOR NEXT