ಕ್ರೀಡೆ

ಆಲ್ ಇಂಗ್ಲೆಂಡ್ ಚಾಂಪಿಯನ್ ಷಿಪ್: ಕ್ವಾರ್ಟರ್ ಫೈನಲ್ಸ್ ಗೆ ಸಿಂಧೂ

Raghavendra Adiga

ಲಂಡನ್: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

ಭಾರತೀಯ ಕಾಲಮಾನ ಗುರುವಾರ ತಡರಾತ್ರಿ ನಡೆದ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ವಿಶ್ವದ 6ನೇ ರಾಂಕಿನ ಸಿಂಧೂ, ಕೊರಿಯಾ ಸುಂಗ್ ಜಿ ಹ್ಯುನ್ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ತೇರ್ಗಡೆ ಹೊಂದಿದ್ದಾರೆ.

ಆದರೆ 18 ವರ್ಷದ ಯುವ ಆಟಗಾರ ಲಕ್ಷ್ಯ ಸೇನ್ ಮಾಜಿ ನಂ.1 ವಿಕ್ಟೋರ್ ಅಕ್ಸೆಲ್ಸೆನ್ ವಿರುದ್ಧ ಪರಾಭವಗೊಂಡು ನಿರಾಸೆ ಕಂಡಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್ ಸಿಂಧೂ ವಿಶ್ವದ 12ನೇ ರಾಂಕಿನ ಸುಂಗ್ ಜಿ ಹ್ಯುನ್ ಅವರನ್ನು 21-19-21-15 ನೇರ ಗೇಮ್ ಗಳಿಂದ ಕೇವಲ 49 ನಿಮಿಷಗಳಲ್ಲಿ ಮಣಿಸಿದರು.

ಸಿಂಧೂ ಮುಂದಿನ ಸುತ್ತಿನಲ್ಲಿ ಜಪಾನಿನ ಆರನೇ ಶ್ರೇಯಾಂಕಿತೆ ನೊಜೋಮಿ ಓಕುಹರ ಅಥವಾ ಡೆನ್ಮಾರ್ಕ್ ನ ಲೈನ್ ಹಾಜ್ಮಾರ್ಕ್ ಜೀರ್ಸ್ ಫೀಡ್ತ್ ಅವರಲ್ಲೊಬ್ಬರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ದ್ವಿತೀಯ ಸುತ್ತಿನಲ್ಲಿ 17-21, 18-21 ನೇರ ಗೇಮ್ ಗಳಿಂದ ಅಕ್ಸೆಲ್ಸೆನ್ ವಿರುದ್ಧ ನಿರಾಸೆ ಕಂಡಿದ್ದಾರೆ. 

ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಿಂದ ಹೊರನಡೆದರು.ಗುರುವಾರ ರಾತ್ರಿ 38 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 29 ನೇ ಕ್ರಮಾಂಕದ ಅಶ್ವಿನಿ ಮತ್ತು ಸಿಕ್ಕಿ 13-21, 14-21ರಲ್ಲಿ ಏಳನೇ ಶ್ರೇಯಾಂಕದ ಜಪಾನಿನ ಮಿಸಾಕಿ ಮಾಟ್ಸುಟೊಮೊ ಮತ್ತು ಅಯಕಾ ಟಕಹಾಶಿ ವಿರುದ್ಧ ಸೋತರು.
 

SCROLL FOR NEXT