ಕ್ರೀಡೆ

ಭಾರತವು ಮಹಿಳಾ ಕ್ರೀಡಾಪಟುಗಳನ್ನು ಸ್ವೀಕರಿಸಲು ಕಲಿತಿದೆ, ಆದರೆ ಇನ್ನೂ ಬಹಳ ದೂರ ಸಾಗಬೇಕಿದೆ: ಸಾನಿಯಾ

Vishwanath S

ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಈ ದೇಶದಲ್ಲಿ ಕ್ರಿಕೆಟ್‌ ಹೊರತಾಗಿ ಇನ್ನುಳಿದ ಮಹಿಳಾ ಕ್ರೀಡಾಪಟುಗಳನ್ನು ಗುರುತಿಸುತ್ತಿದ್ದು ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. 

ಆರು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸಾನಿಯಾ ಮಿರ್ಜಾ ಅವರು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಸ್ಎಐ) ಆಯೋಜಿಸಿದ್ದ ವೆಬ್ ನಾರ್ ನಲ್ಲಿ ಪೋಷಕರ ಪಾತ್ರ ಮತ್ತು ಮಹಿಳಾ ಆಟಗಾರರ ಬಗ್ಗೆ ತರಬೇತುದಾರರ ವರ್ತನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. 

ಕ್ರಿಕೆಟ್‌ನ ಹೊರಗೆ, ಅತಿದೊಡ್ಡ ಕ್ರೀಡಾ ತಾರೆಗಳು, ಮಹಿಳಾ ಕ್ರೀಡಾಪಟುಗಳು ಇದ್ದಾರೆ ಎಂಬ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ನೀವು ನಿಯತಕಾಲಿಕೆಗಳು, ಜಾಹೀರಾತು ಫಲಕಗಳನ್ನು ನೋಡಿದರೆ, ಮಹಿಳಾ ಕ್ರೀಡಾ ತಾರೆಗಳನ್ನು ನೀವು ಕಾಣುತ್ತೀರಿ. ಇದು ಒಂದು ದೊಡ್ಡ ಹೆಜ್ಜೆಯಾಗಿದೆ. ಓರ್ವ ಮಹಿಳೆಯಾಗಿ ಕ್ರೀಡೆಯೊಂದನ್ನು ಮುಂದುವರಿಸುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಸಾನಿಯಾ ಹೇಳಿದ್ದಾರೆ. 

ಹುಡುಗಿಯರು ಬಾಕ್ಸಿಂಗ್, ಬ್ಯಾಡ್ಮಿಂಟನ್ ಅಥವಾ ಕುಸ್ತಿಪಟು ಆಗಬೇಕೆಂದು ಬಯಸುತ್ತೇನೆ ಎಂದು ಹೇಳುವ ಹಂತವನ್ನು ತಲುಪುವ ಮೊದಲು ನಮಗೆ ಮೈಲುಗಳಷ್ಟು ದೂರವಿದೆ. ಅದು ಸಾಮಾನ್ಯವಲ್ಲ, ಅದು ನೈಸರ್ಗಿಕ ಪ್ರಗತಿಯಾಗಬೇಕು ಎಂದರು. 

SCROLL FOR NEXT