ಅಂಕಿತಾ ರೈನಾ ಮತ್ತು ದಿವಿಜ್ ಶರಣ್ 
ಕ್ರೀಡೆ

ಅರ್ಜುನ ಪ್ರಶಸ್ತಿಗೆ ಏಷ್ಯನ್ ಗೇಮ್ಸ್ ಪದಕ ವಿಜೇತ ಜೋಡಿ ಅಂಕಿತಾ, ಶರಣ್ ನಾಮನಿರ್ದೇಶನ

ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಸಿದ್ಧತೆ ನಡೆಸಿದೆ. ಹಾಗೆಯೇ ಧ್ಯಾನ್ ಚಂದ್ ಗೌರವಕ್ಕಾಗಿ ಮಾಜಿ ಡೇವಿಸ್ ಕಪ್ ಕೋಚ್ ನಂದನ್ ಬಾಲ್ ಅವರ ಹೆಸರನ್ನು ಕಳುಹಿಸಲು ಯೋಜಿಸಿದೆ.

ನವದೆಹಲಿ: ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಸಿದ್ಧತೆ ನಡೆಸಿದೆ. ಹಾಗೆಯೇ ಧ್ಯಾನ್ ಚಂದ್ ಗೌರವಕ್ಕಾಗಿ ಮಾಜಿ ಡೇವಿಸ್ ಕಪ್ ಕೋಚ್ ನಂದನ್ ಬಾಲ್ ಅವರ ಹೆಸರನ್ನು ಕಳುಹಿಸಲು ಯೋಜಿಸಿದೆ.

2018ರ ಏಷ್ಯನ್ ಗೇಮ್ಸ್ ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ 27 ವರ್ಷದ ಅಂಕಿತಾ, ಫೆಡ್ ಕಪ್ ನಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. ಇದಲ್ಲದೆ ಮೊದಲ ಬಾರಿ ವಿಶ್ವ ಗ್ರೂಪ್ ಪ್ಲೇ ಆಫ್ ಗೆ ಭಾರತ ಅರ್ಹತೆ ಗಳಿಸುವಲ್ಲಿ ಅಂಕಿತಾ ನಿರ್ಣಾಯಕ ಪಾತ್ರ ವಹಿಸಿದ್ದರು.

ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಡೆಲ್ಲಿ ಮೂಲದ ಶರಣ್ ಜತೆಗಾರ ರೋಹನ್ ಬೋಪಣ್ಣ ಜತೆ ಬಂಗಾರ ಪದಕ ಗೆದ್ದಿದ್ದರು. ಇಷ್ಟು ಮಾತ್ರವಲ್ಲದೆ ಬೋಪಣ್ಣ ಅವರ ರಾಂಕಿಂಗ್ ಕುಸಿತವಾದ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ ನಿಂದೀಚಿಗೆ ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ ಎನಿಸಿದ್ದಾರೆ. 34 ವರ್ಷದ ಶರಣ್, 2019ರ ಋತುವಿನಲ್ಲಿ ಎರಡು ಎಟಿಪಿ ಕಿರೀಟ ಗೆದ್ದಿದ್ದಾರೆ.

'' ಈ ವರ್ಷದ ಅರ್ಜುನ ಪ್ರಶಸ್ತಿಗೆ ಅವರು (ಅಂಕಿತಾ, ಶರಣ್) ಅರ್ಹರಿ ಮತ್ತು ಅತ್ಯಂತ ಅರ್ಹರಾಗಿದ್ದಾರೆ. ಹೀಗಾಗಿ ಅವರ ಹೆಸರನ್ನು ನಾವು ಶಿಫಾರಸು ಮಾಡುತ್ತೇವೆ,'' ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೋಣ್ಮೋಯಿ ಚಟರ್ಜಿ ತಿಳಿಸಿದ್ದಾರೆ. 2018ರಲ್ಲಿ ರೋಹನ್  ಬೋಪಣ್ಣ ಅರ್ಜುನ ಪ್ರಶಸ್ತಿ ಪಡೆದ ಕೊನೆಯ ಟೆನಿಸ್ ಆಟಗಾರ ಎನಿಸಿದ್ದಾರೆ.

ಜೀವಮಾನ ಸಾಧನೆಗಾಗಿ ಬಾಲ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿ ಅಥವಾ ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲು ಎಐಟಿಎ ಚರ್ಚಿಸುತ್ತಿದೆ ಎನ್ನಲಾಗಿದ್ದರೂ ಮೂಲಗಳ ಪ್ರಕಾರ,  ಬಾಲ್ ಅವರ ಹೆರಸನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.

60 ವರ್ಷದ ಬಾಲ್, 1980-83ರ ನಡುವೆ ಡೇವಿಸ್ ಕಪ್ ಆಡಿದ ನಂತರ ಹಲವು ವರ್ಷಗಳ ಕಾಲ ಭಾರತ ಡೇವಿಸ್ ಕಪ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈವರೆಗೆ ಟೆನಿಸ್ ವಿಭಾಗದಲ್ಲಿ ಜೀಸನ್ ಅಲಿ (2014), ಎಸ್.ಪಿ. ಮಿಶ್ರ (2015) ಮತ್ತು ನಿತಿನ್ ಕೀರ್ತನೆ (2019) ಮಾತ್ರ ಧ್ಯಾನ್ ಚಂದ್ ಗೌರವಕ್ಕೆ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT