ಕ್ರೀಡೆ

ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮುಡಿಗೆ ಕ್ಯಾಪಿಟಲ್ಸ್ ಫೌಂಡೇಷನ್ ರಾಷ್ಟ್ರೀಯ ಪುರಸ್ಕಾರ

Raghavendra Adiga

ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಭಾನುವಾರ ಕ್ಯಾಪಿಟಲ್ ಫೌಂಡೇಶನ್ ರಾಷ್ಟ್ರೀಯ ಪ್ರಶಸ್ತಿ 2020ಕ್ಕೆ ಭಾಜನರಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ನಾಲ್ಕು ದಶಕಗಳಲ್ಲಿ ಮಾಡಿದ ಕೊಡುಗೆಗಾಗಿ ಬಾತ್ರಾ ಗುರುತಿಸಲ್ಪಟ್ಟಿದ್ದಾರೆ. ಬಾತ್ರಾ ಅವರನ್ನು ಅಭಿನಂದಿಸಿದ ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೊ ನಿಂಗೋಂಬಮ್ ಅವರು, “ಭಾರತದಲ್ಲಿ ಕ್ರೀಡಾ ಆಡಳಿತವನ್ನು ವೃತ್ತಿಪರಗೊಳಿಸುವುದರಲ್ಲಿ ಅವರ ಪಾತ್ರ ಮತ್ತು ಎಲ್ಲಾ ಕ್ರೀಡೆಗಳ ಉನ್ನತಿಗಾಗಿ ಅವರ ಸಮರ್ಪಣೆಯನ್ನು ಗಮನಿಸಿದರೆ, ಇದು ಹೆಚ್ಚು ಅರ್ಹವಾದ ಮನ್ನಣೆಯಾಗಿದೆ,” ಎಂದಿದ್ದಾರೆ.

ಖ್ಯಾತ ನ್ಯಾಯಶಾಸ್ತ್ರಜ್ಞ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 106 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ನಡೆದ ಕ್ಯಾಪಿಟಲ್ ಫೌಂಡೇಶನ್ ವಾರ್ಷಿಕ ಉಪನ್ಯಾಸ ಮತ್ತು ಪ್ರಶಸ್ತಿ -2020 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಾತ್ರಾ ಈ ಹಿಂದೆ ಹಾಕಿ ಆಟಗಾರರಾಗಿದ್ದರು., 1997 ರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಕಿ ಸಂಘದ ಅಧ್ಯಕ್ಷರಾಗುವ ಮೂಲಕ ಆಡಳಿತಾತ್ಮಕ ಕ್ಷೇತ್ರದಲ್ಲಿ ತಮ್ಮ ಪ್ರಯಾಣ ಪ್ರಾರಂಭಿಸಿದ್ದರು. ತರ ಅವರು ಕ್ರೀಡಾಕ್ಷೇತ್ರದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡರು. ಅವರು 2005-2013ರ ನಡುವೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘದ ಖಜಾಂಚಿಯಾಗಿದ್ದರು ಹಾಕಿ ಇಂಡಿಯಾ ಪ್ರಾರಂಭವಾದ ನಂತರ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು 2014 - 2016 ರಿಂದ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು

SCROLL FOR NEXT