ಕ್ರೀಡೆ

ಫುಟ್ಬಾಲ್ ಆಟಗಾರ ಮರಡೋನಾ ನಿಧನ: ಎರಡು ದಿನ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರ

Shilpa D

ತಿರುವನಂತಪುರ: ಹಿರಿಯ ಫುಟ್ಬಾಲ್ ದಂತಕತೆ ಮರಡೋನಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ.

ಹಿರಿಯ ಆಟಗಾರ ಮರಡೋನಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರ ಪ್ರಕಟಿಸಿದೆ, ಇದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ ಗೌರವ ಸೂಚಕವಾಗಿದೆ. ಮರಡೋನಾ ಸಮಾಜವಾದಿಗಳ ಜೊತೆ ನಿಂತ ಅತ್ಯುತ್ತಮ ಕ್ರೀಡಾಪಟು ಎಂದು ಸಿಎಂ ಪಿಣರಾಯ್ ವಿಜಯನ್ ಸ್ಮರಿಸಿದ್ದಾರೆ.

ಕೇರಳ ಸೇರಿದಂತೆ ಪ್ರಪಂಚಾದ್ಯಂತ ಅಭಿಮಾನಿಗಳು ಮರಡೋನಾ ಸಾವಿನಿಂದ ತೀವ್ರ ನೊಂದಿದ್ದಾರೆ ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಫುಟ್ಬಾಲ್ ತುಂಬಾ ಸುಂದರವಾದ ಆಟ, ಮರಡೋನಾ ಪ್ರಸಿದ್ಧ ಆಟಗಾರ, 1986ರಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದ ನಂತರ ಕೇರಳ ಫುಟ್ಬಾಲ್ ಅಭಿಮಾನಿಗಳ ಹೃದಯದಲ್ಲಿ ಮರಡೋನಾ ಜಾಗ ಪಡೆದಿದ್ದರು. ಯಾವುದೇ ವಿಶ್ವಕಪ್ ಫುಟ್ಬಾಲ್  ಪಂದ್ಯದ ವೇಳೆ ಕೇರಳದಲ್ಲಿ ಮರಡೋನಾ ಫೋಟೋಗಳು ಹೆಚ್ಚಿನ ಪ್ರಮಾಣದಲ್ಲಿ ರಾರಾಜಿಸುತ್ತಿದ್ದವು ಎಂದು ಪಿಣರಾಯ್ ವಿಜಯನ್ ತಿಳಿಸಿದ್ದಾರೆ.

ಫುಟ್ಬಾಲ್ ನಲ್ಲಿ ಮರಡೋನಾ ಅತ್ಯಂತ ಪ್ರಸಿದ್ಧರಾಗಿದ್ದು, ಅವರಿಂದಾಗಿ ಅರ್ಜೆಂಟಿನಾ ಜಗತ್ತಿನಲ್ಲಿ ಉತ್ತಮ ಸ್ಥಾನ ಪಡೆದಿದೆ, ಕ್ಯೂಬ್ ಮತ್ತು ಪೀಡೆಲ್ ಕ್ಯಾಸ್ಟ್ರೆಲ್ ಜೊತೆ ಅವರು ಅತ್ಯುತ್ತಮ ಸಂಬಂಧ ಹೊಂದಿದ್ದರು. ನವೆಂಬರ್ 26 ಮತ್ತು 27 ರಂದು ರಾಜ್ಯಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದೆ ಎಂದು ಕೇರಳ ಕ್ರೀಡಾ ಸಚಿವ ಇಪಿ ಜಯರಾಜನ್ ತಿಳಿಸಿದ್ದಾರೆ.

SCROLL FOR NEXT