ಕ್ರೀಡೆ

ಕೋವಿಡ್ ಉಲ್ಬಣದ ನಡುವೆ ರಾಜ್ಯದಲ್ಲಿ ತರಬೇತಿ ಉದ್ದೇಶಗಳಿಗಾಗಿ ಈಜುಕೊಳ ಬಳಕೆಗೆ ಅನುಮತಿ

Raghavendra Adiga

ಬೆಂಗಳೂರು: ಕರ್ನಾಟಕ ಸರ್ಕಾರವು ಅಂತಿಮವಾಗಿ ಕರ್ನಾಟಕ ಈಜು ಸಂಘ (ಕೆಎಸ್‌ಎ)ಯ ಕೋರಿಕೆಗೆ ಕಿವಿಗೊಟ್ಟಿದ್ದು ಮಂಗಳವಾರ ಸಂಜೆ ಬಿಡುಗಡೆಯಾದಹೊಸ ಮಾರ್ಗಸೂಚಿಗಳಲ್ಲಿ ತರಬೇತಿ ಉದ್ದೇಶಗಳಿಗಾಗಿ ಈಜುಕೊಳಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು.

ಈ ತಿಂಗಳ ಆರಂಭದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈಜುಕೊಳಗಳ ಪ್ರವೇಶ ನಿಷೇಧಿಸಲಾಗಿತ್ತು. ಇದು ಮುಖ್ಯವಾಗಿ ಬೆಂಗಳೂರಿನಲ್ಲಿ ಉನ್ನತ ಸ್ಪರ್ಧೆಗಳಿಗಾಗಿ ತಯಾರಾಗುವ ಈಜುಗಾರರಿಗೆ ಅಡ್ಡಿಯಾಗಿತ್ತು. ಆದರೆ ಇಂತಹಾ ಈಜುಗಾರರಿಗೆ ತರಬೇತಿ ನೀಡುವ ಕೆಎಸ್‌ಎಯ ಅಂಗಸಂಸ್ಥೆ ಈಜುಕೊಳಗಳನ್ನು ಮಾತ್ರ ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳೊಂದಿಗೆ ತೆರೆಯಲಾಗುವುದು ಎಂದು ಇದೀಗ ಸ್ಪಷ್ತಪಡಿಸಿದೆ. “ಕೆಎಸ್‌ಎ ಅಂಗಸಂಸ್ಥೆ ಘಟಕಗಳನ್ನು ಮಾತ್ರ ತೆರೆಯಲು ಅನುಮತಿಸಲಾಗುವುದು. ಇದು ತರಬೇತಿ ಉದ್ದೇಶಗಳಿಗಾಗಿ ಮಾತ್ರವೇ ಇರಲಿದೆ.”ಎಂದು ಕೆಎಸ್‌ಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಜಿನ ಬಗ್ಗೆ ಹೇಳುವಾಗ ಕರ್ನಾಟಕವು ದೇಶದ ಅತ್ಯುತ್ತಮ ಈಜುಪಟುಗಳನ್ನು ಹೊಂದಿದೆ. ಈಜು ಸ್ಪರ್ಧೆಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಈಜುಕೊಳಗಳ ತೆರೆಯಬೇಕೆಂದು ನಾವು ಸರ್ಕಾರವನ್ನು ತುಂಬಾ ವಿನಂತಿಸಿದ್ದೇವೆ ಮತ್ತು ಅವರು ಈಗ ಅನುಮತಿ ನೀಡಿದ್ದಾರೆ, ನಿರ್ಬಂಧಗಳನ್ನು ಘೋಷಿಸುವ ಕೆಲವೇ ದಿನಗಳ ಮೊದಲು ದೇಶದ ಅಗ್ರ ಈಜುಗಾರರಿಗಾಗಿ ರಾಷ್ಟ್ರೀಯ ಶಿಬಿರವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು.

SCROLL FOR NEXT