ಒಡಿಶಾ ಸರ್ಕಾರದಿಂದ 10 ವರ್ಷ ಹಾಕಿ ಪ್ರಾಯೋಜಕತ್ವ 
ಕ್ರೀಡೆ

ಟೋಕಿಯೊ ಒಲಂಪಿಕ್ಸ್ ಯಶಸ್ಸು: ಭಾರತ ಹಾಕಿ ತಂಡಕ್ಕೆ ಮತ್ತೆ 10 ವರ್ಷಗಳ ಕಾಲ ಒಡಿಶಾ ಸರ್ಕಾರ ಪ್ರಾಯೋಜಕತ್ವ

ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಯಶಸ್ಸು ಸಾಧಿಸಿದ್ದು, ಈ ಯಶಸ್ಸಿನ ಬೆನ್ನಲ್ಲೇ ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ.

ಭುವನೇಶ್ವರ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಯಶಸ್ಸು ಸಾಧಿಸಿದ್ದು, ಈ ಯಶಸ್ಸಿನ ಬೆನ್ನಲ್ಲೇ ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ.

ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ ಘೋಷಣೆ ಮಾಡಿದ್ದು, ಸದ್ಯ ಪ್ರಾಯೋಜಕತ್ವದ ಅವಧಿ 2023ರವರೆಗೂ ಇದ್ದು, ಅಲ್ಲಿಂದ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಹಾಕಿ ಇಂಡಿಯಾ ಜತೆಗಿನ ಒಪ್ಪಂದವನ್ನು ಮುಂದುವರಿಸಲಿದ್ದು,  ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳ ಆಟಗಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ಹಾಕಿಯಲ್ಲಿ ಗತವೈಭವ ಮರುಕಳಿಸಬೇಕು ಎಂದು ಹಾರೈಸಿದರು.

ಸನ್ಮಾನ ಸಮಾರಂಭಕ್ಕೂ ಮುನ್ನ ಮೊದಲು ಎರಡು ತಂಡಗಳಿಗೂ ಭರ್ಜರಿ ಸ್ವಾಗತ ನೀಡಲಾಯಿತು. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೋಟೆಲ್‌ವರೆಗೂ ಆಟಗಾರರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಒಡಿಶಾ ಸರ್ಕಾರ 2018ರ ಫೆಬ್ರವರಿಯಿಂದ ಎರಡು ತಂಡಗಳಿಗೆ  ಪ್ರಾಯೋಜಕತ್ವ ವಹಿಸಿಕೊಂಡಿದೆ. ಐದು ವರ್ಷಗಳಿಗೆ ಅವಧಿಗೆ 140 ಕೋಟಿ ರೂಪಾಯಿಗೆ ಹಾಕಿ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಮಹಿಳಾ ತಂಡ 4ನೇ ಸ್ಥಾನ  ಪಡೆದಿತ್ತು.

ಇದರ ಬೆನ್ನಲ್ಲೇ ಎರಡು ತಂಡಗಳ ಆಟಗಾರರಿಗೆ ನವೀನ್ ಪಟ್ನಾಯಕ್ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದರೆ, ತಂಡದ ಸಹಾಯಕ ಸಿಬ್ಬಂದಿಗೆ ತಲಾ 5 ಲಕ್ಷ ರೂಪಾಯಿ ನೀಡಿದರು. ಅಲ್ಲದೆ, ಹಾಕಿ ಇಂಡಿಯಾಗೆ 50 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದರು. ಭಾರತ ತಂಡ ಕಂಚಿನ ಪದಕ ಜಯಿಸಿರುವುದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಉಡುಗೊರೆ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಇದೇ ವೇಳೆ ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT