ಕ್ರೀಡೆ

ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಒಲಂಪಿಕ್ಸ್ ಅರ್ಹತೆಯ ಕುಸ್ತಿಪಟು ಸುಮಿತ್ ಮಲಿಕ್ ಗೆ 2 ವರ್ಷ ನಿಷೇಧ

Raghavendra Adiga

ಚೆನ್ನೈ: ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದಿದ್ದ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ಗೆ ದೊಡ್ದ ಹಿನ್ನಡೆಯಾಗಿದೆ.ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು)ಅವರ ‘ಬಿ’ ಮಾದರಿ ವರದಿ ಪಾಸಿಟಿವ್ ಆಗಿ ಬಂದ ಹಿನ್ನೆಲೆ ಎರಡು ವರ್ಷಗಳ ನಿಷೇಧ ವಿಧಿಸಿದೆ. ಹರಿಯಾಣ ಕುಸ್ತಿಪಟು  ಮಲಿಕ್ ತಮ್ಮ ನಿಷೇಧ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಯಸುತ್ತಾರೆಯೇ ಎಂದು ನಿರ್ಧರಿಸಲು ಈಗ ಒಂದು ವಾರದ ಕಾಲಾವಕಾಶವಿದೆ.

ಮೇ ತಿಂಗಳಲ್ಲಿ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯದ ಸಂದರ್ಭದಲ್ಲಿ ನಡೆಸಿದ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಬೆಳ್ಳಿ ಪದಕದೊಂದಿಗೆ ಒಲಿಂಪಿಕ್ ಅರ್ಹತೆ ಪಡೆದಿದ್ದರು. ಮೊಣಕಾಲಿನ ಗಾಯದಿಂದಾಗಿ ಅವರು ತಮ್ಮ ಅಂತಿಮ ಪಂದ್ಯದಿಂದ ಹಿಂದೆ ಸರಿದಿದ್ದರು, ಇದು  ಅವರಿಗೆ ಕಳೆದ ವರ್ಷದಿಂದ ತೊಂದರೆಯಾಗಿ ಕಾಡುತ್ತಿದೆ. ಏಪ್ರಿಲ್ ನಲ್ಲಿ ಕಝಕಿಸ್ತಾನದ ದ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ ಪಂದ್ಯದ ಮೊದಲು ಅವರು ಗಾಯದಿಂದ ಚೇತರಿಸಿಕೊಂಡಿದ್ದರು

ಮೊಣಕಾಲಿನ ಗಾಯಕ್ಕೆ ತಾನು ಔಷಧಿ (ನೋವು ನಿವಾರಕಗಳನ್ನು) ತೆಗೆದುಕೊಂಡಿದ್ದೇನೆ ಮತ್ತು ಅವರ ಪಿಸಿಷಿಯನ್ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆಎಂದು ಅವರು ಒಪ್ಪಿಕೊಂಡಿದ್ದರು.

"ಅವರು 'ಬಿ' ಮಾದರಿಯನ್ನು  ಆಯ್ಕೆ ಮಾಡಿಕೊಂಡಿದ್ದು ಜೂನ್ 30 ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿ ಪಾಸಿಟಿವ್ ಆಗಿ ಬಂದ ನಂತರ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಈಗ ಅವರು ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾರೆಯೆ ಅಥವಾ ಇಲ್ಲವೆ ಎಂದು ನಿರ್ಧರಿಸಬೇಕು” ಎಂದು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ (ಡಬ್ಲ್ಯುಎಫ್‌ಐ) ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು. 

ಪರಿಸ್ಥಿತಿಯನ್ನು ಗಮನಿಸಿದರೆ, ಮುಂಬರುವ ಕ್ರೀಡಾಕೂಟದಲ್ಲಿ ಭಾರತದಿಂದ ಕೇವಲ ಏಳು ಕುಸ್ತಿಪಟುಗಳನ್ನು (ಫ್ರೀಸ್ಟೈಲ್‌ನಲ್ಲಿ ಮೂರು ಪುರುಷರು ಮತ್ತು ನಾಲ್ಕು ಮಹಿಳೆಯರು) ಮಾತ್ರ ಕಣಕ್ಕಿಳಿಯಲಿದ್ದಾರೆ.

SCROLL FOR NEXT