ಕ್ರೀಡೆ

ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಗಾಲ್ಫ್ ಆಟಗಾರ ಉದಯನ್ ಮಾನೆ

Vishwanath S

ನವದೆಹಲಿ: ಭಾರತದ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರ ಉದಯನ್ ಮಾನೆ ಜುಲೈ 23 ರಿಂದ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

30 ವರ್ಷದ ಮಾನೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

ವಿಶ್ವ ಶ್ರೇಯಾಂಕದಲ್ಲಿ 356 ನೇ ಸ್ಥಾನ ಪಡೆದ ಮಾನೆ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ. ಅರ್ಜೆಂಟೀನಾದ ಎಮಿಲಿಯಾನೊ ಗ್ರಿಲ್ಲೊ ಗುರುವಾರ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ನಂತರ, ಗ್ರಿಲ್ಲೊ ಬದಲು ಮೀಸಲು ಆಟಗಾರ ಎಂಬ ಆಧಾರದ ಮೇಲೆ ಮಾನೆಗೆ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಸಿಕ್ಕಿತು. ಮಾನೆ ಅವರ ಒಲಿಂಪಿಕ್ ಅರ್ಹತೆಯನ್ನು ಮಂಗಳವಾರ ಸಂಜೆ ಅಂತಾರಾಷ್ಟ್ರೀಯ ಗಾಲ್ಫ್ ಫೆಡರೇಶನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರಲ್ಲಿ ಒಲಿಂಪಿಕ್ ಗಾಲ್ಫ್ ಶ್ರೇಯಾಂಕಿತ ಆಧಾರದ ಮೇಲೆ ಮಾನೆ 60 ನೇ ಸ್ಥಾನದಲ್ಲಿದ್ದರೆ. ಲಹಿರಿ ಒಂದು ಸ್ಥಾನ ಕುಸಿದು 59 ನೇ ಸ್ಥಾನಕ್ಕೆ ತಲುಪಿದ್ದಾರೆ.

ಎರಡು ವಾರಗಳ ಹಿಂದೆ, ಕೆಲವು ಅರ್ಹ ಆಟಗಾರರು ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ನಂತರ ಲಹಿರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಲಹಿರಿ ಅವರ ಸತತ ಎರಡನೇ ಒಲಿಂಪಿಕ್ಸ್ ಆಗಲಿದೆ. ಈ ಹಿಂದೆ ಅವರು 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಎಸ್‌ಎಸ್‌ಪಿ ಚೌರಾಸಿಯಾ ಅವರೊಂದಿಗೆ ಆಡಿದ್ದರು.

ಟೋಕಿಯೊದಲ್ಲಿ ನಡೆಯುವ ಗಾಲ್ಫ್ ಪಂದ್ಯಾವಳಿ ಜುಲೈ 29 ರಿಂದ ಆಗಸ್ಟ್ 1 ರವರೆಗೆ ಕಸುಮಿಗಾಸೆಕಿ ಕಂಟ್ರಿ ಕ್ಲಬ್‌ನಲ್ಲಿ ನಡೆಯಲಿದೆ.

SCROLL FOR NEXT