ಕ್ರೀಡೆ

ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

Nagaraja AB

ಟೋಕಿಯೊ: ಕೋವಿಡ್-19 ನಡುವೆ 32ನೇ ಒಲಿಂಪಿಕ್ಸ್ ಕ್ರೀಡಾಕೂಟ 2020ಕ್ಕೆ ಶುಕ್ರವಾರ ವರ್ಣರಂಜಿತ ಸಮಾರಂಭದೊಂದಿಗೆ ಚಾಲನೆ ದೊರೆಯಿತು. ಇದು ಸಾಂಕ್ರಾಮಿಕದಿಂದ ಉಂಟಾಗಿದ್ದ ಕತ್ತಲೆಯನ್ನು ಬದಿಗೆ ಸರಿಸುವ ಪ್ರಯತ್ನ ಮಾಡಿತು.

ಸಾಂಕ್ರಾಮಿಕದಿಂದ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಕ್ರೀಡಾಕೂಟ ಆಯೋಜನೆಗೆ 2013ರಲ್ಲಿ ಟೋಕಿಯೊ ಬಿಡ್ ಗೆದ್ದ ಸಮಯದ ಹಿಂದಿನ ವೀಡಿಯೊದೊಂದಿಗೆ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ನಂತರ 20 ಸೆಕೆಂಡುಗಳ ಇಂಡಿಗೊ ಮತ್ತು ಬಿಳಿ ಪಟಾಕಿಗಳೊಂದಿಗೆ ಪ್ರದರ್ಶಿಸಲಾದ ಬಣ್ಣಗಳು ಜಪಾನಿನ ಸಂಸ್ಕೃತಿಯನ್ನು ತೋರ್ಪಡಿಸಿದವು.

ಜಪಾನ್ ಚಕ್ರವರ್ತಿ ನರುಹಿಟೊ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್ ಅವರೊಂದಿಗೆ ಸಾಗಿದರು. ಸ ಒಲಿಂಪಿಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ವಾರಗಳ ಹಿಂದೆ ನಿರ್ಧರಿಸಿದಂತೆ, ಯುಎಸ್ ಪ್ರಥಮ ಮಹಿಳೆ ಜಿಲ್ ಬಿಡೆನ್ ಸೇರಿದಂತೆ ಸುಮಾರು 1,000 ಗಣ್ಯರು ವೀಕ್ಷಿಸಿದ ಈ ವರ್ಣರಂಜಿತ ಸಮಾರಂಭಕ್ಕೆ ಸಾಕ್ಷಿಯಾಗಲು ಯಾವುದೇ ಪ್ರೇಕ್ಷಕರು ಇರಲಿಲ್ಲ. 

ಪಥ ಸಂಚಲನದಲ್ಲಿ ಭಾರತದ ಧ್ವಜಧಾರಿಗಳಾಗಿ ಬಾಕ್ಸರ್ ಮೇರಿ ಕೋಮ್ ಹಾಗೂ ಹಾಕಿ ಆಟಗಾರ ಮನ್ ಪ್ರೀತ್ ಸಿಂಗ್ ಭಾಗವಹಿಸಿದ್ದರು.

SCROLL FOR NEXT