ಕ್ರೀಡೆ

ಟೋಕಿಯೊ ಒಲಿಂಪಿಕ್ಸ್: ಭಾರತದ 19 ಅಥ್ಲೀಟ್ ಗಳು, ಆರು ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿ

Nagaraja AB

ಟೋಕಿಯೊ: ಕೋವಿಡ್-19 ಸಾಂಕ್ರಾಮಿಕದ ನಡುವೆ ಜಪಾನಿನ ರಾಜಧಾನಿ ಟೋಕಿಯೊದ ರಾಷ್ಟ್ರೀಯ ಮೈದಾನದಲ್ಲಿ ಇಂದು ಸಂಜೆ ನಡೆಯಲಿರುವ ಒಲಿಂಪಿಕ್ಸ್ 2020 ಉದ್ಘಾಟನಾ ಸಮಾರಂಭದಲ್ಲಿ ಭಾರತದಿಂದ 25 ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಅಂಕಿತಾ ರೈನಾ ಸೇರ್ಪಡೆಯಾಗುತ್ತಿದ್ದಾರೆ. ಟೆಬಲ್ ಟೆನ್ನಿಸ್ ತಂಡದ ಮಾನಿಕಾ ಬಾತ್ರಾ ಮತ್ತು ಶರತ್ ಕಮಲ್ ಪಾಲ್ಗೊಳ್ಳುತ್ತಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಟ್ವಿಟರ್ ನಲ್ಲಿ ಖಚಿತಪಡಿಸಿದ್ದಾರೆ.

ಆರು ಭಾರತೀಯ ಅಧಿಕಾರಿಗಳೊಂದಿಗೆ ಅಮಿತ್, ಅಶಿಶ್ ಕುಮಾರ್, ಮೆರಿ ಕೋಮ್ ಸೇರಿದಂತೆ 8 ಬಾಕ್ಸರ್ ಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಟೆಬಲ್ ಟೆನ್ನಿಸ್ ಆಟಗಾರರಾದ ಶರತ್ ಕಮಲ್ ಮತ್ತು ಮಾನಿಕಾ ಬಾತ್ರಾ ಅವರು ಪಾಲ್ಗೊಳ್ಳುತ್ತಿಲ್ಲ, ಟೆನ್ನಿಸ್ ನಿಂದ ಅಂಕಿತಾ ಅವರನ್ನು ಸೇರ್ಪಡೆ ಮಾಡಲಾಗಿದೆ ಎಂದು ರಾಜೀವ್ ಮೆಹ್ತಾ ಟ್ವೀಟ್ ಮಾಡುವ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಭಾರತದ ಪ್ರತಿನಿಧಿಗಳ ಪಟ್ಟಿಯನ್ನು ತಿಳಿಸಿದ್ದಾರೆ.

ಈ ಮಧ್ಯೆ ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್, ಮೇರಿಕೋಮ್, ಅರ್ಚರ್, ಶೂಟರ್ಸ್ ಮತ್ತು ಶಟ್ಲರ್ ಗಳೊಂದಿಗೆ ಧ್ವಜ ಹಿಡಿಯಲಿದ್ದಾರೆ. ಮನ್ ಪ್ರೀತ್ ಸಿಂಗ್ ಹೊರತುಪಡಿಸಿದಂತೆ ಇತರ ಭಾರತದ ಹಾಕಿ ಆಟಗಾರರು ಟೋಕಿಯೊ 2020 ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ಗೈರಾಗುವವರು ತಮ್ಮ ಕ್ರೀಡೆಗಳು ನಡೆಯುವ ದಿನದಂದು ಪಾಲ್ಗೊಳ್ಳಲಿದ್ದಾರೆ.

18 ಕ್ರೀಡೆಗಳಿಂದ ಒಟ್ಟಾರೇ 127 ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಭಾರತದಿಂದ ಅತ್ಯಂತ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. 

SCROLL FOR NEXT