ಕ್ರೀಡೆ

ಒಲಂಪಿಕ್ಸ್ ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮೀರಾಬಾಯಿ ಚಾನು

Lingaraj Badiger

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆದ್ದ ಮೊದಲ ಬೆಳ್ಳಿ ಪದಕವನ್ನು ದೇಶಕ್ಕೆ ಸಮರ್ಪಿಸಿವುದಾಗಿ ಕ್ರಿಡಾಪಟು ಮೀರಾಬಾಯಿ ಚಾನು ಅವರು ಶನಿವಾರ ಹೇಳಿದ್ದಾರೆ. 

ಬೆಳ್ಳಿ ಪದಕ ಗೆದ್ದ ಖುಷಿಯನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಮೀರಾಬಾಯಿ ಚಾನು ಅವರು, ಪದಕ ಗೆಲ್ಲುವ ನನ್ನ ಕನಸು ನನಸಾಯಿತು. ಈ ಬೆಳ್ಳಿ ಪದಕವನ್ನು ದೇಶಕ್ಕೆ ಅರ್ಪಿಸಲು ಇಷ್ಟಪಡುವುದಾಗಿ ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ, ಈ ಗೆಲುವಿನ ಯಾನದಲ್ಲಿ ಜೊತೆಯಾಗಿ ನಿಂತವರಿಗೆ ಮತ್ತು ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಭಾರತೀಯರಿಗೆ, ವಿಶೇಷವಾಗಿ ನನ್ನಲ್ಲಿ ನಂಬಿಕೆ ಇಟ್ಟುಕೊಂಡಿರುವ ತಾಯಿಗೂ ಅವರು ಧನ್ಯವಾದ ಹೇಳಿದ್ದಾರೆ.

ಇನ್ನು ಟೋಕಿಯೋ ಒಲಂಪಿಕ್ಸ್ ನಲ್ಲಿ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಮಿರಾಬಾಯಿ ಚಾನು ಅವರನ್ನು ಪ್ರಧಾನಿ ನರೇಂದ್ರ ಮೋದಿ  ಕೊಂಡಾಡಿದ್ದಾರೆ. ಮಣಿಪುರದ ವೆಟ್ ಲಿಫ್ಟರ್‌ ಇತರ ಭಾರತೀಯ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿದ್ದಾರೆ ಎಂದು ನುಡಿದಿದ್ದಾರೆ. 

ರಾಷ್ಟ್ರಪತಿ ರಾಮನಾಥ್‌  ಕೋವಿಂದ್‌ ಸಹ  ಮೀರಾ ಬಾಯಿ ಚಾನು ಅವರನ್ನು  ಅಭಿನಂದಿಸಿದ್ದಾರೆ.

SCROLL FOR NEXT