ಕ್ರೀಡೆ

ಟೋಕಿಯೊ ಒಲಂಪಿಕ್ಸ್: ನೇದರ್ ಲ್ಯಾಂಡ್ಸ್ ವಿರುದ್ಧ 1-5 ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

Nagaraja AB

ಟೋಕಿಯೊ: ಶನಿವಾರ ನಡೆದ ಟೋಕಿಯೊ ಒಲಂಪಿಕ್ಸ್ ನ ಎ ಗುಂಪಿನ ಹಣಾಹಣಿಯಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕದ ನೆದರ್ ಲ್ಯಾಂಡ್ಸ್ ವಿರುದ್ಧ ಭಾರತದ ಮಹಿಳಾ ಹಾಕಿ ತಂಡ ಸೋಲು ಕಂಡಿದೆ.

ಪಂದ್ಯ ಆರಂಭವಾದ ಆರನೇ ನಿಮಿಷದಲ್ಲಿ ಫೆಲಿಸ್ ಅಲ್ಬರ್ಸ್ ಗೋಲು ಬಾರಿಸುವ ಮೂಲಕ ನೆದರ್ ಲ್ಯಾಂಡ್ಸ್ ತಂಡಕ್ಕೆ ಲೀಡ್ ತಂದುಕೊಟ್ಟರು. ಇದರ ಬೆನ್ನಲ್ಲೇ 10ನೇ ನಿಮಿಷದಲ್ಲಿ ಭಾರತದ ನಾಯಕಿ ರಾಣಿ ರಂಪಾಲ್ 10 ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಮೊದಲ ಎರಡು ಕ್ವಾರ್ಟರ್ ಗಳಲ್ಲಿ ದಿಟ್ಟ ಸಾಮರ್ಥ್ಯ ತೋರಿದ ಭಾರತದ ವನಿತೆಯರು ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಮಂಕಾಯಿತು. ವಿರಾಮದ ಬಳಿಕ ನೆದರ್ ಲ್ಯಾಂಡ್ಸ್ ಆಟಗಾರ್ತಿಯರು ಪ್ರಾಬಲ್ಯ ಮೆರೆದರು. 

ಮಾರ್ಗಟ್ ವಾನ್ ಗೆಫೆನ್ (33) ಫೆಲಿಸ್ ಅಲ್ಬರ್ಸ್ (43) ಫ್ರೆಡೆರಿಕ್ ಮಟ್ಲಾ (45) ಹಾಗೂ ಸಿಯಾ ಜಾಕ್ವೆಲಿನ್ ವಾನ್ ಮಾಸ್ ಕ್ಕರ್ 52ನೇ ನಿಮಿಷದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಹೀನಗೊಳಿಸಿದರು. ಜುಲೈ 26 ರಂದು ಜರ್ಮನಿ ವಿರುದ್ಧ ಭಾರತದ ವನಿತೆಯರು ಸೆಣಸಾಟ ನಡೆಸಲಿದೆ.I

SCROLL FOR NEXT