ಕ್ರೀಡೆ

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾಧಿಕಾರಿ ಆರ್.ಕೆ. ಸಚೇತಿ ಕೊರೋನಾಗೆ ಬಲಿ

Vishwanath S

ನವದೆಹಲಿ: ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಾಜ್ ಕುಮಾರ್ ಸಚೇತಿ ಕೊರೋನಾಗೆ ಬಲಿಯಾಗಿದ್ದಾರೆ.

55 ವರ್ಷದ ರಾಜ್ ಕುಮಾರ್ ಸಚೇತಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ವೆಂಟಿಲೇಟರ್ ಕೂಡ ಅಳವಡಿಸಲಾಗಿತ್ತು.

ಈ ದೇಶ ಕಂಡ ಎಲ್ಲಾ ಕ್ರೀಡಾ ನಿರ್ವಾಹಕರಲ್ಲಿ ಸಚೇತಿ ಅತ್ಯುತ್ತಮ ನಿರ್ವಾಹಕರಾಗಿದ್ದರು. ಸಚೇತಿ ಅವರು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಜೀವನಾಡಿ ಆಗಿದ್ದರು. ಭಾರತೀಯ ಕ್ರೀಡಾ ಜಗತ್ತು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ ಬಿಎಫ್ಐ ಹೇಳಿಕೆ ಬಿಡುಗಡೆ ಮಾಡಿದೆ. 

ಬಾಕ್ಸಿಂಗ್ ಫೆಡರೇಶನ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ನಮ್ಮ ಪ್ರೀತಿಯ ಆರ್ ಕೆ ಸಚೇತಿ ಅವರು ಕೊರೋನಾ ವಿರುದ್ಧದ ಯುದ್ಧದಲ್ಲಿ ಸೋತು ಹೋಗಿದ್ದಾರೆ. ಬಾಕ್ಸಿಂಗ್ ಆಟದಲ್ಲಿ ಭಾರತವನ್ನು ಅಗ್ರ ದೇಶಗಳಲ್ಲಿ ಸೇರಿಸಲು ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಸಂತಾಪ ಸೂಚಿಸಿದ್ದಾರೆ. 

2016ರಲ್ಲಿ ಮೊದಲ ಬಾರಿ ಬಿಎಫ್ಐಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆರ್.ಕೆ. ಸಚೇತಿ ಆಯ್ಕೆಯಾಗಿದ್ದರು. 
 

SCROLL FOR NEXT