ಕ್ರೀಡೆ

ದೆಹಲಿಯಲ್ಲಿ ಘರ್ಷಣೆ; ಒಬ್ಬನ ಸಾವು: ಪ್ರಸಿದ್ಧ ಕುಸ್ತಿ ಪಟು ಸುಶಿಲ್‌ಕುಮಾರ್‌ ಕೈವಾಡ?

Shilpa D

ನವದೆಹಲಿ: ದೆಹಲಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯೊಂದರಲ್ಲಿ 24 ವರ್ಷದ ಕುಸ್ತಿಪಟುವೊಬ್ಬರು ಸಾವನ್ನಪ್ಪಿದ್ದಾನೆ. ಆದರೆ, ಆತನ ಸಾವಿನಲ್ಲಿ ಭಾರತೀಯ ತಾರಾ ಕುಸ್ತಿಪಟು ಸುಶೀಲ್ ಕುಮಾರ್ ಕೈವಾಡ ಇದೆ ಎಂಬ ಅನುಮಾನ ವ್ಯಕ್ತವಾಗಿವೆ.

ಈ ಘಟನೆ ಬಗ್ಗೆ ದೆಹಲಿ ಉಪ ಪೊಲೀಸ್ ಆಯುಕ್ತ ಗುರುಕ್ಬಾಲ್ ಸಿಂಗ್ ಸಿಧು ಮಾತನಾಡಿ ಮಾಡೆಲ್ ಟೌನ್‌ಪ್ರದೇಶದ ಛತ್ರಪಾಲ್ ಕ್ರೀಡಾಂಗಣದ ಬಳಿ ಕುಸ್ತಿಪಟು ಸುಶೀಲ್ ಕುಮಾರ್ ಅವರ ಮನೆಯಲ್ಲಿ ಸಾಗರ್ ಹಾಗೂ ಅವರ ಸ್ನೇಹಿತರು ಬಾಡಿಗೆಗೆ ವಾಸವಾಗಿದ್ದರು. ಮನೆಖಾಲಿ ಮಾಡುವಂತೆ ಅವರಿಗೆ ಸೂಚಿಸಲಾಗಿತ್ತು. ಈ ವಿಷಯದಲ್ಲಿ ಎರಡು ಗುಂಪಿನ ನಡುವೆ ಜಗಳ ನಡೆದಿರುವುದಕ್ಕೆ ಪುರಾವೆಗಳು ದೊರೆತಿವೆ ಎಂದು ಹೇಳಿದ್ದಾರೆ.

ಮುಂಜಾನೆ 2 ಗಂಟೆ ಸುಮಾರಿಗೆ ಛತ್ರಾಸಲ್ ಕ್ರೀಡಾಂಗಣದ ಬಳಿ ಇಬ್ಬರು ವ್ಯಕ್ತಿಗಳು ಬಂದೂಕುಗಳ ಮೂಲಕ ಗುಂಡು ಹಾರಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಘಟನಾ ಸ್ಥಳದಲ್ಲಿ ದೆಹಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಪುತ್ರ ಸಾಗರ್ ಕುಮಾರ್ ಮೃತಪಟ್ಟಿದ್ದು, ಸೋನು ಮಹಲ್( 35) ಅಮಿತ್ ಕುಮಾರ್ (27) ಎಂಬವರು ಅವರನ್ನು ಗುರುತಿಸಿದ್ದಾರೆ.

ಈ ಸಂಬಂಧ ದಲಾಲ್ (24) ಎಂಬ ಯುವಕನನ್ನು ಬಂಧಿಸಲಾಗಿದ್ದು, ಪಾರ್ಕ್‌ಮಾಡಿದ ವಾಹನದಿಂದ ಗುಂಡು ತುಂಬಿದ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಸುಶೀಲ್ ಕುಮಾರ್ ಕೈವಾಡ ಇರುವುದು ತಿಳಿಯುತ್ತಿದ್ದಂತೆಯೇ ಆತನ ವಿರುದ್ಧ ಎಫ್‌ ಐಆರ್ ದಾಖಲಿಸಲಾಗಿದೆ ಪ್ರಕರಣದ ತನಿಖೆಯ ಭಾಗವಾಗಿ ಸುಶೀಲ್ ಕುಮಾರ್ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. 

ಸುಶೀಲ್ ಕುಮಾರ್ ತಲೆ ಮರೆಸಿಕೊಂಡಿದ್ದು. ಆತನ ಪತ್ತೆಗೆ ಪೊಲೀಸ್‌ ವಿಶೇಷ ತಂಡಗಳನ್ನು ರಚಿಸಿ ಶೋಧನಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಿಧು ಹೇಳಿದ್ದಾರೆ.

SCROLL FOR NEXT