ಸುಶೀಲ್ ಕುಮಾರ್ 
ಕ್ರೀಡೆ

ಸುಶೀಲ್ ಕುಮಾರ್ ವಿರುದ್ಧದ ಆರೋಪಗಳಿಂದ ಭಾರತೀಯ ಕುಸ್ತಿಯ ಹೆಸರಿಗೆ ಕಳಂಕ: ಡಬ್ಲ್ಯುಎಫ್ಐ

ಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ವಿರುದ್ಧದ ಆರೋಪಗಳಿಂದ ಭಾರತೀಯ ಕುಸ್ತಿಯ ಹೆಸರಿಗೆ ಕಳಂಕ ಅಂಟಿಕೊಂಡಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಹೇಳಿದೆ. 

ನವದೆಹಲಿ: ಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ವಿರುದ್ಧದ ಆರೋಪಗಳಿಂದ ಭಾರತೀಯ ಕುಸ್ತಿಯ ಹೆಸರಿಗೆ ಕಳಂಕ ಅಂಟಿಕೊಂಡಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಹೇಳಿದೆ. 

"ಸುಶೀಲ್ ಕುಮಾರ್ ತಮ್ಮ ಅಭೂತಪೂರ್ವ ಸಾಧನೆಗಳಿಂದ ಕುಸ್ತಿ ಕ್ಷೇತ್ರದ ಖ್ಯಾತಿಯನ್ನು ಗಗನದೆತ್ತರಕ್ಕೆ ಕೊಂಡೊಯ್ದಿದ್ದರು. ಆದರೆ ಅವರನ್ನು ಪೊಲೀಸರು ಹತ್ಯೆ ಪ್ರಕರಣವೊಂದರಲ್ಲಿ ಹುಡುಕುತ್ತಿದ್ದು, ಕ್ರೀಡೆಯ ಗೌರವಕ್ಕೆ ಕಳಂಕ ಬಂದಂತಾಗಿದೆ" ಎಂದು ಡಬ್ಲ್ಯುಎಫ್ಐ ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.  

ಸುಶೀಲ್ ಅವರ ಅಂತಾರಾಷ್ಟ್ರೀಯ ಮಟ್ಟದ ಸಾಧನೆ, ಯಶಸ್ಸು, ಕುಸ್ತಿಯೆಡೆಗೆ ಪ್ರೇರಣಾದಾಯಿಯಾಗಿತ್ತು. ಈ ಮೂಲಕ ಕುಸ್ತಿ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಿತ್ತು. 

ಒಲಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಕುಸ್ತಿ ಕ್ರೀಡಾಪಟು ಸುಶೀಲ್ ಆಗಿದ್ದಾರೆ. ಸುನಿಲ್ ಅವರು ಬೆಳೆಸಿದ್ದ ಕುಸ್ತಿ ಗೌರವ ಇಂದು ಅವರಿಂದಲೇ ನಾಶವಾಗಿದೆ ಎಂದು ಡಬ್ಲ್ಯುಎಫ್ಐ ಹೇಳಿದೆ. 

ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರನ್ನು ಪೊಲೀಸರು ಹುಡುಕುತ್ತಿರುವುದರಿಂದ ಭಾರತೀಯ ಕುಸ್ತಿಯ ಹೆಸರಿಗೆ ಕಳಂಕ ಅಂಟಿಕೊಂಡಂತಾಗಿದೆ. ಆದರೆ ಇದಕ್ಕೂ ಕುಸ್ತಿಪಟುಗಳಿಗೂ ಸಂಬಂಧವಿಲ್ಲ. ಇದು ವೈಯಕ್ತಿಕ ವಿಚಾರವಾಗಿದ್ದು, ಕುಸ್ತಿ ಪಟುಗಳ ಪ್ರದರ್ಶನದ ಮೇಲೆಯಷ್ಟೇ ನಮ್ಮ ಕಾಳಜಿ ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ. 

2008 ರಲ್ಲಿ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದು ಭಾರತದ 56 ವರ್ಷಗಳ ಸುದೀರ್ಘ ನಿರೀಕ್ಷೆಯನ್ನು ನನಸಾಗಿಸಿದ್ದರು. 

ಇದನ್ನೇ ಸ್ಪೂರ್ತಿಯಾಗಿ ಪಡೆದು, ಯೋಗೇಶ್ವರ್ ದತ್, ಗೀತಾ, ಬಬಿತಾ ಫೋಗಟ್, ವಿನೀಶ್, ರಿಯೋ ಬ್ರಾಂಜ್ ಪದಕ ವಿಜೇತರಾದ ಸಾಕ್ಷಿ ಮಲೀಕ್ ಸೇರಿದಂತೆ ಹಲವರು ಕುಸ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. 

ಮೇ.04 ರಂದು ನಡೆದ ಬಡಿದಾಟ ಅದರ ಪರಿಣಾಮ 23 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದ. ಇದರಲ್ಲಿ ಸುಶೀಲ್ ಕುಮಾರ್ ಅವರ ಕೈವಾಡವೂ ಇದೆ ಎಂದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಶಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

ತುಮಕೂರು ಕ್ರೀಡಾಂಗಣದಿಂದ ಗಾಂಧಿ ಹೆಸರು ತೆರವು- ಬಿಜೆಪಿ ಆರೋಪ; ಜಿ ಪರಮೇಶ್ವರ ಪ್ರತಿಕ್ರಿಯೆ ಏನು? Video

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

SCROLL FOR NEXT