ಕ್ರೀಡೆ

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಲ್ಲುತ್ತೇನೆ: ಎಂಎಂಎ ಫೈಟರ್ ಕಾನರ್ ಮ್ಯಾಕ್‌ಗ್ರೆಗರ್

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಲ್ಲುವುದಾಗಿ ಐರಿಶ್ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಫೈಟರ್ ಕಾನರ್ ಮ್ಯಾಕ್‌ಗ್ರೆಗರ್ ಹೇಳಿದ್ದಾರೆ. 

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಲ್ಲುವುದಾಗಿ ಐರಿಶ್ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಫೈಟರ್ ಕಾನರ್ ಮ್ಯಾಕ್‌ಗ್ರೆಗರ್ ಹೇಳಿದ್ದಾರೆ. 

ತಾವು ಭಾರತದ ಫೈಟರ್ ರಾಮ್ಸ್ಟನ್ ಎಡ್ವಿನ್ ರೊಡ್ರಿಗಸ್ ಅವರಿಗೆ ತರಬೇತಿ ನೀಡುತ್ತಿರುವ ಫೋಟೋ ಹಾಕಿರುವ ಕಾನರ್ ಮ್ಯಾಕ್‌ಗ್ರೆಗರ್, " ಭಾರತದ ಮುಂದಿನ ಹೆವಿ ವೇಯ್ಟ್ ಚಾಂಪಿಯನ್ ರಾಮ್ಸ್ಟನ್ ಎಡ್ವಿನ್ ರೊಡ್ರಿಗಸ್ ಅವರೊಂದಿಗಿನ ತರಬೇತಿ... ರಾಮ್ಸ್ಟನ್ ಅವರೊಂದಿಗಿನ ತರಬೇತಿಯಿಂದಾಗಿ ಭಾರತ ಹಾಗೂ ಅಲ್ಲಿನ ಜನರು ನಿಜವಾಗಿಯೂ ಬಲಿಷ್ಠರು ಎಂಬುದನ್ನು ಸ್ವತಃ ಕಂಡಿದ್ದೇನೆ. ಭಾರತ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದು, ಅದರ ಹೋರಾಟದಲ್ಲಿ ಜೊತೆಯಾಗಿರುತ್ತೇನೆ, ನಾವು ಭಾರತದೊಂದಿಗೆ ಇದ್ದೇವೆ, ಜಗತ್ತು ಭಾರತದೊಂದಿಗೆ ಇದೆ" ಎಂದು ಹೇಳಿದ್ದಾರೆ.

ರಾಮ್ಸ್ಟನ್ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಕಾನರ್ ಮ್ಯಾಕ್‌ಗ್ರೆಗರ್ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದು, "ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಚಾಂಪ್ ಕಾನರ್ ಮ್ಯಾಕ್‌ಗ್ರೆಗರ್, ನಾವು ಕಲಿತು, ಹಿಂದೆಂದಿಗಿಂತಲೂ ಬಲಿಷ್ಠವಾಗಿ ಭಾರತ ಹೊರಹೊಮ್ಮಲಿದೆ" ಎಂದು ಕಾನರ್ ಮ್ಯಾಕ್‌ಗ್ರೆಗರ್ ಗೆ ಧನ್ಯವಾದ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಣೆ: ಪ್ರಧಾನಿ ಮೋದಿ ‘ಮಹಾನ್ ವ್ಯಕ್ತಿ, ಉತ್ತಮ ಸ್ನೇಹಿತ’ ಎಂದು ಕೊಂಡಾಡಿದ ಡೊನಾಲ್ಡ್ ಟ್ರಂಪ್

Karnataka Weather-ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ವರ್ಷಧಾರೆ, ಅ.29ರವರೆಗೆ ಮಳೆ ಸೂಚನೆ, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಹಾಸನಾಂಬೆ ದರ್ಶನ ಇಂದು ಕೊನೆ: 8 ಕಿ.ಮೀ ವರೆಗೆ ಧರ್ಮ ದರ್ಶನ ಸಾಲು

ಮರಳು ಮಾಫಿಯಾ: ಸಿಎಂಗೆ ರಾಯರೆಡ್ಡಿ ಪತ್ರ ಬೆನ್ನಲ್ಲೇ ಕೌಂಟರ್ ಕೊಟ್ಟ ಅಧಿಕಾರಿಗಳು, ಪತ್ರ ಸಮರ ಆರಂಭ

ಅನುದಾನ ವಿಚಾರದಲ್ಲಿ ತಾರತಮ್ಯವಿಲ್ಲ, ಮೋದಿ "ದೀಪಾವಳಿ ಗಿಫ್ಟ್" ಜಾಹಿರಾತಿನಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರೂ. ನಷ್ಟ; ಸಿಎಂ ಸಿದ್ದರಾಮಯ್ಯ

SCROLL FOR NEXT