ಕ್ರೀಡೆ

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಗೆ ಕೊರೋನಾ, ಮೊಹಾಲಿ ಆಸ್ಪತ್ರೆಗೆ ದಾಖಲು

Raghavendra Adiga

ಚಂಡೀಘರ್: ಪ್ರಸಿದ್ಧ ಭಾರತೀಯ ಅಥ್ಲೀಟ್, ಓಟಗಾರ ಮಿಲ್ಖಾ ಸಿಂಗ್ ಅವರಿಗೆ ಕೊರೋನಾ ದೃಢವಾಗಿದೆ. ಅವರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮಗ ಮತ್ತು ಪ್ರಸಿದ್ದ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಈ ಬಗ್ಗೆ ಖಚಿತಪಡಿಸಿದ್ದಾರೆ. 91 ವರ್ಷದ ಮಿಲ್ಖಾ ಅವರು ಬುಧವಾರ ವೈರಸ್‌ ಗೆ ಪಾಸಿಟಿವ್ ವರದಿ ಪಡೆದರು. ಅದಾಗ ಅವರು ಚಂಡೀಘರ್ ನ ತಮ್ಮ ನಿವಾಸದಲ್ಲಿದ್ದರು.

ಇದೀಗ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಲ್ಖಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ

"ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಬಹಳ ನಿರ್ಬಲವಾಗಿದ್ದರು. ನಿನ್ನೆಯಿಂದ ಊಟ ಮಾಡುತ್ತಿರಲಿಲ್ಲ, ಆದ್ದರಿಂದ ನಾವು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಅವರ ಸದ್ಯ ಸ್ಥಿತಿ ಸ್ಥಿರವಾಗಿದೆ. ಆದರೂ ಅವರು ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ" ಎಂದು ಜೀವ್ ಹೇಳಿದರು 

ಭಾರತದ ವಾಲಿಬಾಲ್ ತಂಡದ ಮಾಜಿ ನಾಯಕಿ ಮಿಲ್ಖಾ ಅವರ ಪತ್ನಿ ನಿರ್ಮಲ್ ಕೌರ್ ಸೇರಿದಂತೆ ಇತರ ಕುಟುಂಬ ಸದಸ್ಯರು ಯಾರೂ ಕೊರೊನಾ ಸೋಂಕಿಗೆ ತುತ್ತಾಗಿಲ್ಲ.

ಹೆಸರಾಂತ ಕ್ರೀಡಾತಾರೆ ಮಿಲ್ಖಾ ಸಿಂಗ್ ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ, 1958 ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್, 1960 ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನವಾಗಿದ್ದಾರೆ.

SCROLL FOR NEXT