ಕ್ರೀಡೆ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಮೇರಿ ಕೋಮ್ ಗೆ ಬೆಳ್ಳಿ

Raghavendra Adiga

ದುಬೈ: ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಮೇರಿ ಫೈನಲ್ಸ್ ನಲ್ಲಿ ಕಝಕಿಸ್ಥಾನದ ನಾಜಿಮ್ ಕಿಜೈಬೇ ವಿರುದ್ಧ ಸೋಲುಂಡು ರಜತ ಪದಕ ಗಳಿಸಿಕೊಂಡಿದ್ದಾರೆ. ಅವರು 2-3 ತೀರ್ಪಿನಿಂದ ಸೋಲುಂಡರು.

ಇನ್ನುಳಿದಂತೆ ಲಾಲ್ಬುವಾತ್ಸೈಹಿ (64 ಕೆಜಿ), ಪೂಜಾ ರಾಣಿ (75 ಕೆಜಿ) ಮತ್ತು ಅನುಪಮಾ (+ 81 ಕೆಜಿ) ವಿಭಾಗದಲ್ಲಿ ಚಿನ್ನದ ಪದಕಗಳಿಗಾಗಿ ಸೆಣೆಸುತ್ತಿದ್ದಾರೆ. 

ಇದು ಪಂದ್ಯಾವಳಿಯಲ್ಲಿ ಮೇರಿ ಪಾಲಿಗೆ  ಏಳನೇ ಪದಕವಾಗಿದೆ, 2003ರ ಆವೃತ್ತಿಯಲ್ಲಿ ಬಂದ ಚಿನ್ನದ ಪದಕ ಇವರ ಮೊದಲ ಪದಕವಾಗಿತ್ತು.

ತನಗೆ 11 ವರ್ಷ ಚಿಕ್ಕವನಾದ ಎದುರಾಳಿಯ ವಿರುದ್ಧ, 38 ವರ್ಷದ ಮೇರಿ ಉತ್ತಮ ಪ್ರಾರಂಭದೊಂದಿಗೆ ಮೊದಲ ಸುತ್ತನ್ನು ಅನಾಯಾಸವಾಗಿ ಗೆದ್ದಿದ್ದರು. ಆದರೆ ನಂತರದಲ್ಲಿ ಎದುರಾಳಿ ಕೈ ಮೇಲಾಗಿತ್ತು. ಅಂತಿಮ ಮೂರು ನಿಮಿಷಗಳಲ್ಲಿ ಮೇರಿ ಕೋಮ್ ಮತ್ತೆ ಹೋರಾಡಿದರು ಆದರೆ ತೀರ್ಪುಗಾರರ ಒಪ್ಪಿಗೆ ಪಡೆಯಲು ಸಫಲವಾಗಲಿಲ್ಲ.

ಸೋಮವಾರ ಪುರುಷರ ಫೈನಲ್‌ನಲ್ಲಿ ಅಮಿತ್ ಪಂಗಲ್ (52 ಕೆಜಿ), ಶಿವ ಥಾಪಾ (64 ಕೆಜಿ) ಮತ್ತು ಸಂಜೀತ್ (91 ಕೆಜಿ) ಸೆಣೆಸಲಿದ್ದಾರೆ.

ಇತರ ಎಂಟು ಭಾರತೀಯರು - ಒಲಿಂಪಿಕ್ ಅರ್ಹತೆಯ ಮೂವರು ಸಿಮ್ರಾಂಜಿತ್ ಕೌರ್ (60 ಕೆಜಿ), ವಿಕಾಸ್ ಕ್ರಿಶನ್ (69 ಕೆಜಿ), ಮತ್ತು ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಮತ್ತು ಜೈಸ್ಮೈನ್  (57 ಕೆಜಿ), ಸಾಕ್ಷಿ ಚೌಧರಿ (64 ಕೆಜಿ), ಮೋನಿಕಾ (48 ಕೆಜಿ), ಸೌವೆತಿ (81 ಕೆಜಿ) ) ಮತ್ತು ವರಿಂದರ್ ಸಿಂಗ್ (60 ಕೆಜಿ) - ಸೆಮಿಫೈನಲ್ ಸೋಲಿನ ನಂತರ ಕಂಚಿನ ಪದಕಗಳನ್ನು ಜಯಿಸಿದ್ದಾರೆ.

SCROLL FOR NEXT