ಕ್ರೀಡೆ

ಸರ್ಜರಿ ನಂತರವೂ ತುರ್ತು ನಿಗಾ ಘಟಕದಲ್ಲಿ ಫುಟ್ ಬಾಲ್ ಲಿಜೆಂಡ್ ಪೀಲೆ

Nagaraja AB

ವ್ ಪಾಲೊ: ಬಲಭಾಗದ ಕರುಳಿನ ಮೇಲಿನ ಗಡ್ಡೆ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬ್ರೆಜಿಲ್ ನ ಮಾಜಿ ಫುಟ್ಬಾಲ್ ಆಟಗಾರ ಚೇತರಿಸಿಕೊಂಡಿದ್ದರೂ ಇನ್ನೂ ತುರ್ತು ನಿಗಾ ಘಟಕದಲ್ಲಿದ್ದಾರೆ.

80 ವರ್ಷದ ಎಡ್ಸನ್ ಅರಾಂಟೆಸ್ ಡೋ ನಾಸ್ಸಿಮೆಂಟೊ ತೃಪ್ತಿದಾಯಕ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ ಆದಾಗ್ಯೂ, ಇನ್ನೂ ತುರ್ತು ನಿಗಾ ಘಟಕದಲ್ಲಿದ್ದಾರೆ ಎಂದು ಸಾವ್ ಪಾಲೊನ ಅಲ್ಟರ್ಬ್ ಐನ್ ಸ್ಟೈನ್ ಆಸ್ಪತ್ರೆ ಹೇಳಿಯಲ್ಲಿ ತಿಳಿಸಿದೆ. ಪೀಲೆ, ಎದ್ದು ಚುರುಕಾಗಿ ಮಾತನಾಡುತ್ತಿದ್ದು, ಅವರ ಆರೋಗ್ಯದ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆ ಹೇಳಿದೆ. 

ಪ್ರತಿದಿನ ಸ್ಪಲ್ಪ ಸುಧಾರಣೆಯಾಗಿರುವುದಾಗಿ ಅನಿಸುತ್ತಿರುವುದಾಗಿ ಮೂರು ಬಾರಿ ವಿಶ್ವ ಕಪ್ ಚಾಂಪಿಯನ್ ಪೀಲೆ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹೇಳಿದ್ದಾರೆ. 

ಮೂರು ವಿಶ್ವಕಪ್ ಗೆದ್ದ ಏಕೈಕ ಪುರುಷ ಆಟಗಾರರಾಗಿರುವ ಪೀಲೆ 2012 ರಲ್ಲಿ  ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಓಡಾಟದ ಸಮಸ್ಯೆಯಿಂದ ನರಳುತ್ತಿದ್ದಾರೆ.  ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡ ಮತ್ತಿತರ ಸಮಸ್ಯೆಗಳಿಂದ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಪೀಲೆ 1958, 1962 ಮತ್ತು 1970 ವಿಶ್ವಕಪ್‌ಗಳನ್ನು ಗೆದ್ದರು, ಮತ್ತು 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಬ್ರೆಜಿಲ್‌ನ ಸಾರ್ವಕಾಲಿಕ ಅಗ್ರಗಣ್ಯ ಸ್ಕೋರರ್ ಆಗಿದ್ದಾರೆ.

SCROLL FOR NEXT