ಸಾನಿಯಾ ಮಿರ್ಜಾ 
ಕ್ರೀಡೆ

ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ ಆದರೆ ತೃಪ್ತಿಕರವೂ ಹೌದು: ಸಾನಿಯಾ ಮಿರ್ಜಾ

ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ, ಆದರೆ ಸಂತೋಷದಾಯಕವೂ ಹೌದು ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.

ನವದೆಹಲಿ: ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ, ಆದರೆ ಸಂತೋಷದಾಯಕವೂ ಹೌದು ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಆದರೆ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುವವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಮನಸ್ಸು ಮಾಡಿದಲ್ಲಿ ಆಕಾಶವೇ ಮಿತಿ ಎಂದು ಸಾನಿಯಾ ಮಿರ್ಜಾ ಅಭಿಪ್ರಾಯಪಟ್ಟಿದ್ದಾರೆ.

ಎಎನ್ಐ ಜೊತೆ ಸಂವಹನ ನಡೆಸಿದ ಸಾನಿಯಾ ಮಿರ್ಜಾ, 2021 ತಮಗೆ ಹೇಗಿರಲಿದೆ, ಅಂಕಿತ ರೈನಾ ಬಗೆಗಿನ ನಿರೀಕ್ಷೆಗಳು, ಮುಂದಿನ ವರ್ಷದಲ್ಲಿ ಟೆನ್ನಿಸ್ ಸೀಸನ್ ಗಳ ಬಗ್ಗೆ ಮಾತನಾಡಿದೆ.

"ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ, ಆದರೆ ಅದು ಅತ್ಯಂತ ಸಂತೋಷದಾಯಕವೂ" ಹೌದು, ನಾನು ಉನ್ನತ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವುದಕ್ಕೆ ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ನಾನು ಟೀಕೆ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಾಯಿಯಾಗುವ ಅಥವಾ ಈಗಾಗಲೇ ಆಗಿರುವ ಯುವ ಮಹಿಳೆಯರಿಗೆ ನಾನು ಹೇಳುವುದು ಇಷ್ಟೇ, ನೀವು ಮನಸ್ಸು ಮಾಡಿದರೆ ಯಾವುದೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದು ಸಾನಿಯಾ ಕಿವಿ ಮಾತು ಹೇಳಿದ್ದಾರೆ.

"ನೀವು ಕಷ್ಟಪಟ್ಟು ಕೆಲಸ ಮಾಡಿ, ಸಾಕಷ್ಟು ಶ್ರಮ ಹಾಕಿದರೆ ಆಕಾಶವೇ ಮಿತಿ, ಮಗುವಿದೆ ಎಂಬ ಒಂದೇ ಕಾರಣಕ್ಕೆ ನಿಮ್ಮ ಕನಸುಗಳನ್ನು ಕೊಲ್ಲಬೇಡಿ, ಶ್ರೇಷ್ಠ ತಾಯಿಯಾಗಿದ್ದುಕೊಂಡೂ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು" ಎಂದು ಸಾನಿಯಾ ಅಭಿಪ್ರಾಯಪಟ್ಟಿದ್ದಾರೆ.

2021 ರಲ್ಲಿ ತಾವು ಟೋಕಿಯೋ ಒಲಂಪಿಕ್ಸ್ ನಲ್ಲಿ ಅಂಕಿತಾ ರೈನಾ ಜೊತೆ ಭಾರತವನ್ನು ಪ್ರತಿನಿಧಿಸಿದ್ದರ ಬಗ್ಗೆಯೂ ಸಾನಿಯಾ ಮಿರ್ಜಾ ಮಾತನಾಡಿದ್ದು "2021 ಚೆನ್ನಾಗಿತ್ತು ಎಂದೆನಿಸುತ್ತದೆ. ನನ್ನ ನಾಲ್ಕನೇ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ. ಟೂರ್ನಮೆಂಟ್ ನ ಫೈನಲ್ಸ್ ಹಾಗೂ ಸೆಮಿ ಫೈನಲ್ಸ್ ಗೆ ತಲುಪಿದೆ. ಈ ವರ್ಷ ನಾನು 5-6 ಟೂರ್ನಮೆಂಟ್ ಗಳನ್ನು ಆಡಿದ್ದೇನೆ. ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿತ್ತು. ಕ್ಲೀವ್ಲ್ಯಾಂಡ್ ನಲ್ಲಿ ಫೈನಲ್ ಆಡಿದ್ದರ ಬಳಿಕ ಏರಿಳಿತಗಳು ಇವೆ" ಎನ್ನುತ್ತಾರೆ ಸಾನಿಯಾ ಮಿರ್ಜಾ.

ಒಲಂಪಿಕ್ಸ್ ಎಂದಿಗೂ ವಿಶೇಷವಾಗಿದೆ. ಒಲಂಪಿಕ್ಸ್ ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶ ಅದ್ಭುತವಾದ ಸಂಗತಿ. ಇದನ್ನು ನಾನು ಹಲವು ವರ್ಷಗಳಿಂದ ಮಾಡುತ್ತಿದ್ದು, ಈ ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಭಾವಿಸುತ್ತೇನೆ ಹಾಗೂ ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT