ಕ್ರೀಡೆ

ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್: ಬೆಳ್ಳಿ ಗೆದ್ದ ರಿಲೇ ತಂಡ, ರಾಜ್ಯದ ಪ್ರಿಯಾ ಮೋಹನ್ ಗೆ 5 ಲಕ್ಷ ನಗದು ಪುರಸ್ಕಾರ

Nagaraja AB

ಬೆಂಗಳೂರು: ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಬೆಳ್ಳಿ ಗೆದ್ದ ಕರ್ನಾಟಕದ ಪ್ರಿಯಾ ಮೋಹನ್ ಒಳಗೊಂಡ ಭಾರತೀಯ ರಿಲೇ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ  ಡಾ. ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಪ್ರಿಯಾ ಮೋಹನ್ , ಭರತ್, ಶ್ರೀಧರ್, ರೂಪಾಲ್ ಚೌಧರಿ ಮತ್ತು ಕಪಿಲ್ ಅವರನ್ನೊಳಗೊಂಡ  ಮಿಶ್ರ ರಿಲೇ ತಂಡ ಉತ್ತಮ ಪ್ರದರ್ಶನ ತೋರಿಸಿದ್ದು, ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ಕೈ ತಪ್ಪಿದೆ.  ಕಳೆದ ವರ್ಷ ಕಂಚಿನ ಪದಕದ ಸಾಧನೆ ಮಾಡಿದ್ದ ಭಾರತದ ರಿಲೇ ತಂಡ ಈ ಬಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದೆ. ಸ್ವಲ್ಪದರಲ್ಲಿ  ಚಿನ್ನದ ಪದಕ ಕೈ ತಪ್ಪಿದ್ದು, ಮುಂದಿನ ಸಲ ಚಿನ್ನದ  ಪದಕ ಗೆಲ್ಲುವ ವಿಶ್ವಾಸವಿದ್ದು,  ಅತ್ಯುತ್ತಮ ಸಾಧನೆ ಮಾಡಿರುವ ರಿಲೇ ತಂಡಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

 ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರಿಯಾ ಮೋಹನ್  ಅವರಿಗೆ 5 ಲಕ್ಷ ರೂ. ನಗದು ಪುರಸ್ಕಾರ ನೀಡುವುದಾಗಿ ಸಚಿವ ಡಾ. ಕೆ. ಸಿ. ನಾರಾಯಣಗೌಡ ಅವರು ಘೋಷಿಸಿದ್ದಾರೆ.

SCROLL FOR NEXT