ಕಾಮನ್‌ವೆಲ್ತ್ ಗೇಮ್ಸ್ 2022 ರ ಸಮಾರೋಪ ಸಮಾರಂಭದಲ್ಲಿ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಪಟಾಕಿಗಳೊಂದಿಗೆ ವರ್ಣರಂಜಿತ ತೆರೆ 
ಕ್ರೀಡೆ

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಇಂಗ್ಲೆಂಡ್ ನ  ಬರ್ಮಿಂಗ್ ಹ್ಯಾಮ್ ನಲ್ಲಿ  ಜುಲೈ 28ರಿಂದ ನಿನ್ನೆ ಅಂದರೆ ಆಗಸ್ಟ್ 9ರವರೆಗೆ 12 ದಿನಗಳ ಕಾಲ ನಡೆದ 22ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ನಿನ್ನೆ ವಿದ್ಯುಕ್ತವಾಗಿ ವರ್ಣ ರಂಜಿತ ತೆರೆ ಬಿದ್ದಿತು.

ಬರ್ಮಿಂಗ್ ಹ್ಯಾಮ್​: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ  ಜುಲೈ 28ರಿಂದ ನಿನ್ನೆ ಅಂದರೆ ಆಗಸ್ಟ್ 9ರವರೆಗೆ 12 ದಿನಗಳ ಕಾಲ ನಡೆದ 22ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ನಿನ್ನೆ ವಿದ್ಯುಕ್ತವಾಗಿ ವರ್ಣರಂಜಿತ ತೆರೆ ಬಿದ್ದಿತು.

ಬಾಂಗ್ರಾದ ಬೀಟ್‌ಗಳಿಂದ ಹಿಡಿದು 'ಅಪಾಚೆ ಇಂಡಿಯನ್' ನ ಪವರ್-ಪ್ಯಾಕ್ಡ್ ಪ್ರದರ್ಶನದವರೆಗೆ, ಬರ್ಮಿಂಗ್ ಹ್ಯಾಮ್ ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. 12 ದಿನಗಳ ಕಾಮನ್ ವೆಲ್ತ್ ಗೇಮ್ ಗೆ ಪರದೆ ಎಳೆಯಲಾಗಿದ್ದು ಬೆರಗುಗೊಳಿಸುವ ರೀತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4,500ಕ್ಕೂ ಹೆಚ್ಚು ಅಥ್ಲೆಟ್ ಗಳು 72 ದೇಶಗಳಿಂದ ಭಾಗವಹಿಸಿದ್ದವು. 215 ಕ್ರೀಡಾಪಟುಗಳ ಭಾರತ ತಂಡ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟಾರೆ 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ತನ್ನ ಅಭಿಯಾನವನ್ನು ಕೊನೆಗೊಳಿಸಿತು. 

ನಿನ್ನೆ ಅಂತಿಮ ದಿನ ಭಾರತ ಬ್ಯಾಡ್ಮಿಂಟನ್ ವಿಭಾಗದಲ್ಲಿ 3, ಟೇಬಲ್ ಟೆನ್ನಿಸ್ ನಲ್ಲಿ 1 ಚಿನ್ನ ಸೇರಿ 4 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಕಾಮನ್ ವೆಲ್ತ್ ಇತಿಹಾಸದಲ್ಲಿ ಈ ಬಾರಿಯ ಪದಕ ಗಳಿಕ ಭಾರತದ 5ನೆಯ ಗರಿಷ್ಟ ಸಾಧನೆಯಾಗಿದೆ. 

ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್ ಮತ್ತು ಕೆನಡಾ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. 72 ದೇಶಗಳ ಕ್ರೀಡಾಪಟುಗಳು ನಿನ್ನೆ ಸಮಾರೋಪ ಸಮಾರಂಭದಲ್ಲಿ ಕೂಟದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿದರು. 

ಸಾಂಪ್ರದಾಯಿಕವಾಗಿ ಕಾಮನ್ ವೆಲ್ತ್ ಗೇಮ್ಸ್ ಫೆಡರೇಶನ್ ನಿನ್ನೆ ಬರ್ಮಿಂಗ್ಯಾಮ್ ನಲ್ಲಿ ಧ್ವಜವನ್ನು ಇಳಿಸಿ ಮುಂದಿನ ಸಲ 2026ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ನ ಆತಿಥ್ಯ ವಹಿಸಿಕೊಂಡಿರುವ ದೇಶವಾದ ಆಸ್ಟ್ರೇಲಿಯಾಕ್ಕೆ ಧ್ವಜವನ್ನು ನೀಡಬೇಕು. ಪ್ರಿನ್ಸ್ ಅಡ್ವರ್ಡ್ ಅವರು ಧ್ವಜವನ್ನು ಆಸ್ಟ್ರೇಲಿಯಾ ಸ್ಟೇಟ್ ಆಫ್ ವಿಕ್ಟೋರಿಯಾಗೆ ನೀಡಿ ಮುಂದಿನ ಕಾಮನ್ ವೆಲ್ತ್ ನಡೆಸಿಕೊಡುವಂತೆ ಆಹ್ವಾನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT