ಕ್ರೀಡೆ

ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ಬ್ಯಾನ್: ಫಿಫಾ ಅತ್ಯಂತ ಕಠಿಣ ನಿರ್ಧಾರ- ಬೈಚುಂಗ್ ಭುಟಿಯಾ

Nagaraja AB

ನವದೆಹಲಿ: ಭಾರತೀಯ ಫುಟ್ ಬಾಲ್ ಫೆಡರೇಶನ್ ನಿಷೇಧಿಸಿರುವ ಫಿಫಾ ನಿರ್ಧಾರ ಅತ್ಯಂತ ಕಠಿಣವಾದದ್ದು ಎಂದು ಮಾಜಿ ನಾಯಕ ಬೈಚುಂಗ್ ಭುಟಿಯಾ ಮಂಗಳವಾರ ಹೇಳಿದ್ದಾರೆ.

ಭಾರತ ಫುಟ್ಬಾಲ್ ಫೆಡರೇಶನ್ ನಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ ಹಾಗೂ ಫಿಫಾ ನಿಯಮಗಳ ಉಲ್ಲಂಘನೆ ಆದ ಕಾರಣ ಈ ನಿರ್ಧಾರವನ್ನು ಫಿಫಾ ತೆಗೆದುಕೊಂಡಿದೆ. ಫಿಫಾದ ಈ ನಿರ್ಧಾರ ಇದೀಗ ಭಾರತ ಫುಟ್ಬಾಲ್ ಫೆಡರೇಶನ್ ಗೆ ಭಾರಿ ಮುಖಭಂಗವನ್ನು ಉಂಟು ಮಾಡಿದೆ. ಇದರಿಂದಾಗಿ ಅಕ್ಟೋಬರ್ 11-30 ರವರೆಗೆ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯೂ ಅಡ್ಡ ಕತ್ತರಿಯಲ್ಲಿ ಸಿಲುಕಿದೆ. 

ಭಾರತೀಯ ಫುಟ್ ಬಾಲ್ ಪೆಢರೇಶನ್ ನಿಷೇಧಿಸಿರುವುದು ದುರಾದೃಷ್ಟಕರವಾಗಿದೆ. ಇದೊಂದು ಅತ್ಯಂತ ಕ್ರೂರ ನಿರ್ಧಾರವಾಗಿದೆ ಎಂದು ದೇಶದ ಖ್ಯಾತ ಫುಟ್ ಬಾಲ್ ಆಟಗಾರ ಬೈಚುಂಗ್ ಬಾಟಿಯಾ ಹೇಳಿದ್ದಾರೆ. 

ಇದೇ ವೇಳೆ ನಮ್ಮ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಎಲ್ಲಾ ಪಾಲುದಾರರು, ಫೆಡರೇಶನ್ ಮತ್ತು ರಾಜ್ಯ ಒಕ್ಕೂಟಗಳು ಒಗಟ್ಟಾಗಿ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಭಾರತೀಯ ಫುಟ್ ಬಾಲ್ ಸುಧಾರಿಸಲು ಪ್ರತಿಯೊಬ್ಬರು ಕಾರ್ಯೋನ್ಮುಖವಾಗಬೇಕಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT