ಕ್ರೀಡೆ

ಮಿಶ್ರ ಡಬಲ್ಸ್ ಸೆಮಿಫೈನಲ್ಸ್ ನಲ್ಲಿ  ಸೋಲು; ವಿಂಬಲ್ಡನ್ ಗೆ ಸಾನಿಯಾ ಮಿರ್ಜಾ ವಿದಾಯ

Nagaraja AB

ವಿಂಬಲ್ಡನ್:  ಇಲ್ಲಿ ನಡೆದ ವಿಂಬಲ್ಡನ್  ಮಿಶ್ರ ಡಬಲ್ಸ್ ನಲ್ಲಿ ನೀಲ್ ಸ್ಕುಪ್ಸ್ಕಿ ಮತ್ತು ದೇಸಿರೇ ಕ್ರಾವ್ಜಿಕ್ ವಿರುದ್ಧದ  ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಟೆನ್ನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಜೋಡಿ ಸೋಲಿಗೆ ಶರಣಾಯಿತು.

ಬುಧವಾರ ಮಧ್ಯರಾತ್ರಿ  ಎರಡು ಗಂಟೆ 16 ನಿಮಿಷ ಹೋರಾಟ ನಡಸಿದ ಮಿರ್ಜಾ ಮತ್ತು ಕ್ರೊಯೇಶಿಯನ್ ಆಟಗಾರ್ತಿ ಮಾಟೆ ಪಾವಿಕ್ ಜೋಡಿ 6-4, 5-7, 4-6 ಅಂತರದಿಂದ ಗ್ರೇಟ್ ಬ್ರಿಟನ್  ಮತ್ತು ಅಮೆರಿಕದ  ಕ್ರಾವ್ಜಿಕ್ ವಿರುದ್ಧ ಪರಾಭವಗೊಂಡಿತು.

35 ವರ್ಷದ ಸಾನಿಯಾ ಮಿರ್ಜಾ ದೇಶದ ಪ್ರಖ್ಯಾತ ಮಹಿಳಾ ಟೆನ್ನಿಸ್ ಆಟಗಾರ್ತಿಯಾಗಿದ್ದು, ಮೂರು ಮಿಶ್ರ ಡಬಲ್ಸ್ ಟ್ರೋಫಿ ಸೇರಿದಂತೆ  ಆರು ಗ್ರ್ಯಾಂಡ್ ಸ್ಲಾಮ್  ಪ್ರಶಸ್ತಿ ಗೆದಿದ್ದಾರೆ. 

ಮೊದಲ ಸೆಟ್ ನಲ್ಲಿ ಬಲವಾದ ಸರ್ವ್ ಗಳೊಂದಿಗೆ ಪ್ರಾಬಲ್ಯ ಸಾಧಿಸಿದ ಸಾನಿಯಾ ಮಿರ್ಜಾ ಮತ್ತು ಪಾವಿಕ್  ಎರಡನೇ ಸೆಟ್ ನಲ್ಲಿ 4-2 ಅಂತರದಿಂದ ಮುನ್ನಡೆ ಸಾಧಿಸಿದ್ದರು ಆದರೆ, ಎದುರಾಳಿಗಳ ಪ್ರಾಬಲ್ಯದಿಂದ ಮುಂದಿನ ಆರು ಗೇಮ್ಸ್ ಗಳಲ್ಲಿ ಐದರಲ್ಲಿ ಸೋಲಿಗೆ ಶರಣಾದರು.

12ನೇ ಗೇಮ್ ನಲ್ಲಿ ಸಾನಿಯಾ ಮಿರ್ಜಾ ಗೆಲ್ಲಲು ಬೇಕಾದ ಅಂಕ ಪಡೆಯುವಲ್ಲಿ ವಿಫಲವಾಯಿತು.  ಈ ಹಿಂದೆ 2011, 2013 ಮತ್ತು 2015ರಲ್ಲಿ ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್ ವರೆಗೂ ತಲುಪಿದ್ದರು. 2015ರಲ್ಲಿ ಮಹಿಳಾ ಡಬಲ್ಸ್ ನಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದಿದ್ದ  35 ವರ್ಷದ ಸಾನಿಯಾ ಮಿರ್ಜಾ ಇದೀಗ ವಿಂಬಲ್ಡನ್ ಗೆ ವಿದಾಯ ಹೇಳಿದ್ದಾರೆ.

SCROLL FOR NEXT