ಕ್ರಿಸ್ಟಿಯಾನೋ ರೊನಾಲ್ಡೊ 
ಕ್ರೀಡೆ

ರೊನಾಲ್ಡೋ ವಿರುದ್ಧದ ಅತ್ಯಾಚಾರ ಪ್ರಕರಣ ವಜಾಗೊಳಿಸಿದ ನ್ಯಾಯಾಧೀಶ

ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶನಿವಾರ ವಜಾಗೊಳಿಸಿದ್ದಾರೆ.

ವಾಷಿಂಗ್ಟನ್: ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶನಿವಾರ ವಜಾಗೊಳಿಸಿದ್ದಾರೆ.

ಫೆಡರಲ್ ನ್ಯಾಯಾಧೀಶರಾದ ಜೆನ್ನಿಫರ್ ಡೋರ್ಸೆ ಅವರು ಮಹಿಳೆ ಸಲ್ಲಿಸಿದ ಮೊಕದ್ದಮೆಯು ಆಕೆಯ ವಕೀಲರಿಂದ ಪಡೆದ "ಪುರ್ಲೋಯಿನ್ಡ್" ಗೌಪ್ಯ ದಾಖಲೆಗಳನ್ನು ಆಧರಿಸಿ ಈ ಮಹತ್ವದ ಆದೇಶ ನೀಡಿದ್ದಾರೆ. ಅಂತೆಯೇ ಈ ಪ್ರಕರಣವನ್ನು ಫುಟ್ ಬಾಲ್ ತಾರೆ ವರ್ಚಸ್ಸಿಗೆ ಕಳಂಕ ಹಚ್ಚುವ  ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಮಹಿಳೆಯ ಪರ ವಕೀಲ ಲೆಸ್ಲಿ ಮಾರ್ಕ್ ಸ್ಟೊವಾಲ್ ಅವರ ನಡವಳಿಕೆಯಿಂದ ರೊನಾಲ್ಡೊ ಅವರ ಗೌರವಕ್ಕೆ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಧೀಶರು ತಮ್ಮ 42 ಪುಟಗಳ ಆದೇಶದಲ್ಲಿ ಪ್ರಕರಣವನ್ನು ಮತ್ತೆ ಸಲ್ಲಿಸಲು ಯಾವುದೇ ಆಯ್ಕೆಯಿಲ್ಲದೆ ಸಂಪೂರ್ಣವಾಗಿ ವಜಾಗೊಳಿಸಲು ಸೂಚಿಸಿದ್ದಾರೆ. ಈ ಕುರಿತಂತೆ ಗೋಲ್ ಡಾಟ್ ಕಾಮ್ ವರದಿ ಆಧರಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ನ್ಯಾಯಾಧೀಶರ ಲಿಖಿತ  ತೀರ್ಪಿನಲ್ಲಿ, ಈ ಪ್ರಕರಣವನ್ನು ಮುಂದುವರಿಸುವ ಅವಕಾಶವನ್ನು ಅರ್ಜಿದಾರರು ಕಳೆದುಕೊಳ್ಳುತ್ತಾರೆ, ಹೆಚ್ಚು ವೈಯಕ್ತಿಕ ಸ್ವಭಾವದ ಗಂಭೀರ ಆರೋಪಗಳನ್ನು ಸೂಚಿಸುವ ಹಕ್ಕುಗಳ ಇತ್ಯರ್ಥವನ್ನು ಬಿಚ್ಚಿಡಲು ಈ ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
2009 ರಲ್ಲಿ ಲಾಸ್ ವೇಗಾಸ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೊಂಡ ನಂತರ ರೊನಾಲ್ಡೊ ಮಹಿಳೆಗೆ USD 375,000 ಪಾವತಿಸಿದ್ದರು. ಮಹಿಳಾ ಪರ ವಕೀಲರಾದ ಲೆಸ್ಲಿ ಸ್ಟೋವಾಲ್ ಅವರು ಫುಟ್ಬಾಲ್ ಲೀಕ್ಸ್ ಸೃಷ್ಟಿಕರ್ತ ರುಯಿ ಪಿಂಟೊ ಅವರಿಂದ  ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದರು, ನ್ಯಾಯಾಧೀಶರು ಗೌಪ್ಯ ಮತ್ತು ವಿಶೇಷ ಮತ್ತು ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ತೀರ್ಪು ನೀಡಿದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ