ಜರ್ಮನ್ ಆಟಗಾರರು 
ಕ್ರೀಡೆ

ಕತಾರ್ ಗೆ ತೀವ್ರ ಮುಜುಗರ: ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದ ಜರ್ಮನ್ ಆಟಗಾರರು

ಇದೇ ಮೊದಲ ಬಾರಿಗೆ ಕತಾರ್ ಫೀಫಾ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಇಸ್ಲಾಮಿಕ್ ರಾಷ್ಟ್ರ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ.

ದೋಹಾ: ಇದೇ ಮೊದಲ ಬಾರಿಗೆ ಕತಾರ್ ಫೀಫಾ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಇಸ್ಲಾಮಿಕ್ ರಾಷ್ಟ್ರ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ.

ಆತಿಥೇಯ ಕತಾರ್ ನಲ್ಲಿ ತಂಡದ ಆರ್ಮ್‌ಬ್ಯಾಂಡ್‌ಗಳನ್ನು ಧರಿಸುವ ಯೋಜನೆಗೆ ಫೀಫಾ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಕತಾರ್ ನಲ್ಲಿನ ತಾರತಮ್ಯವನ್ನು ವಿರೋಧಿಸಿ ಜರ್ಮನಿ ಆಟಗಾರರು ತಮ್ಮ ಆರಂಭಿಕ ವಿಶ್ವಕಪ್ ಪಂದ್ಯಕ್ಕೂ ಮುನ್ನ ತಮ್ಮ ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಫೋಸ್ ನೀಡಿದರು.

ಜರ್ಮನ್ ತಂಡ ಇಂದು ಜಪಾನ್ ವಿರುದ್ಧ ಸೆಣೆಸಲಿದ್ದು ಇದಕ್ಕೂ ಮುನ್ನ ಸಾಲಾಗಿ ನಿಂತಿದ್ದ ಪ್ರತಿಯೊಬ್ಬ ಆಟಗಾರನು ತಮ್ಮ ಬಲಗೈಯಿಂದ ತಮ್ಮ ಬಾಯಿಯನ್ನು ಮುಚ್ಚಿಕೊಂಡು ಪೋಸ್ ನೀಡಿದರು.

ವೈವಿಧ್ಯತೆಯ ಸಂಕೇತವಾಗಿರುವ ವರ್ಣರಂಜಿತ 'ಒನ್ ಲವ್' ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿದರೆ ಆಟಗಾರರಿಗೆ ದಂಡ ವಿಧಿಸಲಾಗುತ್ತದೆ ಎಂದು ಜರ್ಮನಿ ಸೇರಿದಂತೆ ಏಳು ಯುರೋಪಿಯನ್ ಫೆಡರೇಶನ್‌ಗಳಿಗೆ FIFA ಎಚ್ಚರಿಕೆ ನೀಡಿತ್ತು. ಏಳು ತಂಡದ ನಾಯಕರು ಆರ್ಮ್‌ಬ್ಯಾಂಡ್‌ಗಳನ್ನು ಧರಿಸಲು ಯೋಜಿಸಿದ್ದರು.

ಜರ್ಮನಿಯ ತರಬೇತುದಾರ ಹ್ಯಾನ್ಸಿ ಫ್ಲಿಕ್ ಮತ್ತು ಸಾಕರ್ ಫೆಡರೇಶನ್ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಫಿಫಾ ನಿರ್ಧಾರವನ್ನು ಟೀಕಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಫೀಫಾ ವಿಶ್ವಕಪ್ ಆಯೋಜಿಸುತ್ತಿರುವ ಕತಾರ್ ಹಲವು ನಿರ್ಬಂಧಗಳನ್ನು ಹೇರಿರುವುದು ಆಟಗಾರರು ಹಾಗೂ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT