ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಹಿರಿಯ ಮಹಿಳಾ ಹಾಕಿ ತಂಡಕ್ಕೆ ಜಯ

Srinivas Rao BV

ಜೋಹಾನ್ಸ್ ಬರ್ಗ್: ಭಾರತದ ಕಿರಿಯ ಮಹಿಳಾ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿದೆ. 

ದಕ್ಷಿಣ ಆಫ್ರಿಕಾ ಪ್ರವಾಸದ ಅಂತಿಮ ಪಂದ್ಯ ಇದಾಗಿದ್ದು, ಸೋಲೇ ಇಲ್ಲದೆ ಟೂರ್ನಿಯನ್ನು ಭಾರತ ಗೆದ್ದಿದೆ. ಎಲ್ಲಾ ಮೂರು ಪಂದ್ಯಗಳಲ್ಲೂ ಭಾರತ ತಂಡ ದಕ್ಷಿಣ ಆಫ್ರಿಕಾದ ಯು-21 ತಂಡವನ್ನು ಮಣಿಸಿದ್ದು, ಕಳೆದ ಪಂದ್ಯದ 4-4 ಸಮಬಲದಲ್ಲಿ ಅಂತ್ಯಗೊಂಡಿತ್ತು.
 
ದಕ್ಷಿಣ ಆಫ್ರಿಕಾ ಪೆನಾಲ್ಟಿ ಸ್ಟ್ರೋಕ್ ಅನ್ನು ಬಿಟ್ಟುಕೊಟ್ಟ ಬಳಿಕ ದೀಪಿಕಾ 13 ನೇ ನಿಮಿಷದಲ್ಲಿ ಪಂದ್ಯದ ದಿಕ್ಕನ್ನು ಬದಲಿಸಿದರು. 

ನೀಲಮ್ (15) ಪೆನಾಲ್ಟಿ ಕಾರ್ನರ್ ನ್ನು ಗೋಲ್ ನ್ನಾಗಿ ಪರಿವರ್ತಿಸುವ ಮೂಲಕ ಭಾರತದ ಮುನ್ನಡೆಯನ್ನು ಕೆಲವೇ ಕ್ಷಣಗಳಲ್ಲಿ ದ್ವಿಗುಣಗೊಳಿಸಿದರು. ದ್ವಿತೀಯಾರ್ಧದಲ್ಲಿ  ಅನು ಹಾಗೂ ಸುನ್ಲಿತಾ ಟೊಪ್ಪೊ (50') ಗೋಲು ಬಾರಿಸಿ ಗೆಲುವಿನ ರೂವಾರಿಯಾದರು. 

ಏಷ್ಯಾ ಕಪ್ ಯು-21 ತಯಾರಿ ದೃಷ್ಟಿಯಿಂದ ಈಗ ನಡೆದ ದಕ್ಷಿಣ ಆಫ್ರಿಕಾ ಟೂರ್ನಿ ಮಹತ್ವ ಪಡೆದುಕೊಂಡಿತ್ತು. ಎಫ್ಐ ಹೆಚ್ ಮಹಿಳಾ ಹಾಕಿ ಜೂನಿಯರ್ ವಿಶ್ವಕಪ್ ಗೆ ಇದು ಅರ್ಹತಾ ಸುತ್ತು ಎಂದೇ ಪರಿಗಣಿಸಲಾಗಿದೆ. 

SCROLL FOR NEXT