ನಿಶಾಂತ್ ದೇವ್ (ಸಂಗ್ರಹ ಚಿತ್ರ) online desk
ಕ್ರೀಡೆ

Olympics 2024: 71 ಕೆಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ನಿಶಾಂತ್ ದೇವ್ ಗೆ ನಿರಾಸೆ

ಒಂದು ವೇಳೆ ನಿಶಾಂತ್ ದೇವ್ ಗೆದ್ದಿದ್ದರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ನಾಲ್ಕನೆ ಪದಕ ಖಾತ್ರಿಯಾಗಿರುತ್ತಿತ್ತು.

ಪ್ಯಾರಿಸ್: ಒಲಿಂಪಿಕ್ಸ್ 2024 ರಲ್ಲಿ 8 ನೇ ದಿನದಂದು 71 ಕೆ.ಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ವಿಭಾಗದಲ್ಲಿ ಭಾರತದ ಬಾಕ್ಸರ್ ನಿಶಾಂತ್ ದೇವ್ ಗೆ ನಿರಾಸೆ ಉಂಟಾಗಿದೆ. ಮೆಕ್ಸಿಕೋದ ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ ವಿರುದ್ಧ ನಿಶಾಂತ್ ದೇವ್ ಪರಾಭವಗೊಂಡಿದ್ದಾರೆ.

ಒಂದು ವೇಳೆ ನಿಶಾಂತ್ ದೇವ್ ಗೆದ್ದಿದ್ದರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ನಾಲ್ಕನೆ ಪದಕ ಖಾತ್ರಿಯಾಗಿರುತ್ತಿತ್ತು. ಏತನ್ಮಧ್ಯೆ, ಮಹಿಳೆಯರ 66 ಕೆಜಿ ಬಾಕ್ಸಿಂಗ್ ಕ್ವಾರ್ಟರ್-ಫೈನಲ್‌ನಲ್ಲಿ ಅನ್ನಾ ಲುಕಾ ಹಮೊರಿ (ಹಂಗೇರಿ) ಅವರನ್ನು ಸೋಲಿಸಿದ ನಂತರ ಲಿಂಗಕ್ಕೆ ಸಂಬಂಧಿಸಿದ ವಿವಾದಕ್ಕೆ ಗುರಿಯಾಗಿರುವ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ಪದಕದ ಭರವಸೆ ಹೊಂದಿದ್ದಾರೆ.

ಇದಕ್ಕೂ ಮುನ್ನ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ ಸೋಲು ಕಂಡಿದ್ದರು.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ 4 ನೇ ಸ್ಥಾನ ಗಳಿಸಿ ಭಾರತದ ಶೂಟರ್ ಮನು ಭಾಕರ್ ಅವರು ಪದಕದಿಂದ ವಂಚಿತರಾದರು. ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ ಅವರು ಒಲಿಂಪಿಕ್ ಮಹಿಳೆಯರ 100 ಮೀ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಶಾ'ಕ್ಯಾರಿ ರಿಚರ್ಡ್ಸನ್ ಅವರನ್ನು ದಂಗುಬಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT