ಗುಕೇಶ್  online desk
ಕ್ರೀಡೆ

Chess champion Gukesh ಗೆಲುವಿನ ಬಗ್ಗೆ ರಷ್ಯಾ ಕ್ಯಾತೆ! ತನಿಖೆ ನಡೆಸಲು ಪಟ್ಟು!

18 ವರ್ಷದ ಗುಕೇಶ್ ಇತಿಹಾಸ ನಿರ್ಮಿಸುತ್ತಿದ್ದಂತೆಯೇ ಈ ಬಗ್ಗೆ ರಷ್ಯಾ ಕ್ಯಾತೆ ತೆಗೆದಿದೆ. ಗುಕೇಶ್ ಗೆಲುವು ಅನುಮಾನಾಸ್ಪದವಾಗಿದೆ. ಚೀನಾದ ಹಾಲಿ ಚಾಂಪಿಯನ್ ಲಿರೆನ್ ಉದ್ದೇಶಪೂರ್ವಕವಾಗಿ ಪಂದ್ಯ ಸೋತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಂಗಪೂರ್: ಚೀನಾದ ಚಾಂಪಿಯನ್ ನ್ನು ಮಣಿಸಿ ಚೆಸ್ ಚಾಂಪಿಯನ್ ಶಿಪ್ ನ್ನು ಮುಡಿಗೇರಿಸಿಕೊಂಡ ಗುಕೇಶ್ ಗೆಲುವನ್ನು ಪ್ರಶ್ನಿಸಲಾಗುತ್ತಿದೆ.

18 ವರ್ಷದ ಗುಕೇಶ್ ಇತಿಹಾಸ ನಿರ್ಮಿಸುತ್ತಿದ್ದಂತೆಯೇ ಈ ಬಗ್ಗೆ ರಷ್ಯಾ ಕ್ಯಾತೆ ತೆಗೆದಿದೆ. ಗುಕೇಶ್ ಗೆಲುವು ಅನುಮಾನಾಸ್ಪದವಾಗಿದೆ. ಚೀನಾದ ಹಾಲಿ ಚಾಂಪಿಯನ್ ಲಿರೆನ್ ಉದ್ದೇಶಪೂರ್ವಕವಾಗಿ ಪಂದ್ಯ ಸೋತಿದ್ದಾರೆ ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಷ್ಯಾದ ಚೆಸ್ ಫೆಡರೇಶನ್ ಮುಖ್ಯಸ್ಥ ಆಂಡ್ರೇ ಫಿಲಾಟೊವ್ ಪಟ್ಟು ಹಿಡಿದಿದ್ದಾರೆ.

ಫಲಿತಾಂಶದ ಬಗ್ಗೆ ತನಿಖೆ ಮಾಡಲು ಫಿಲಾಟೊವ್ ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ (FIDE) ನ್ನು ಆಂಡ್ರೇ ಫಿಲಾಟೊವ್ ಕೇಳಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಪ್ರಕಟಿಸಿದೆ.

"ಕೊನೆಯ ಪಂದ್ಯದ ಫಲಿತಾಂಶ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಭ್ರಮೆಯನ್ನು ಉಂಟುಮಾಡಿತು. ನಿರ್ಣಾಯಕ ವಿಭಾಗದಲ್ಲಿ ಚೀನಾದ ಚೆಸ್ ಆಟಗಾರನ ಕ್ರಮಗಳು ಅತ್ಯಂತ ಅನುಮಾನಾಸ್ಪದವಾಗಿದೆ ಈ ಕಾರಣದಿಂದ FIDE ನಿಂದ ಪ್ರತ್ಯೇಕ ತನಿಖೆಯ ಅಗತ್ಯವಿದೆ," ಅವರು ಆಗ್ರಹಿಸಿದ್ದಾರೆ.

"ಡಿಂಗ್ ಲಿರೆನ್ ಇದ್ದ ಸ್ಥಾನವನ್ನು ಕಳೆದುಕೊಳ್ಳುವುದು ಪ್ರಥಮ ದರ್ಜೆ ಆಟಗಾರನಿಗೂ ಕಷ್ಟಕರವಾಗಿದೆ. ಪಂದ್ಯದಲ್ಲಿ ಚೀನಾದ ಚೆಸ್ ಆಟಗಾರನ ಸೋಲು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಉದ್ದೇಶಪೂರ್ವಕವಾಗಿರುವಂತೆ ಕಾಣುತ್ತದೆ" ಎಂದು ಅವರು ಹೇಳಿದ್ದಾರೆ.

ಶ್ರೇಷ್ಠ ವಿಶ್ವನಾಥನ್ ಆನಂದ್ ಅವರ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು, ಗುಕೇಶ್ ಐದು ಬಾರಿ ಚಾಂಪಿಯನ್ ಶಿಪ್ ಗೆದ್ದಿದ್ದ ಐಕಾನಿಕ್ ಆಟಗಾರನ ನಂತರ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ, ಯುಪಿ, ಇತರ ರಾಜ್ಯಗಳಲ್ಲಿ SIR ವಿರುದ್ಧ ಹೊಸ ಅರ್ಜಿ: EC ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

'ಕೈ ಇಟ್ಟಲೆಲ್ಲಾ ದುಡ್ಡೋ ದುಡ್ಡು..': ಕರ್ನಾಟಕದಿಂದ ಕೇರಳಕ್ಕೆ ಹಣ ಕಳ್ಳಸಾಗಣೆ, 3.15 ಕೋಟಿ ರೂ. ನಗದು ಕಸ್ಟಮ್ಸ್ ವಶಕ್ಕೆ! Video

ಕೇರಳ: ಮದುವೆ ದಿನವೇ ಅಪಘಾತ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ!

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ: ಕನಿಷ್ಠ 6 ಸಾವು, ಕೋಲ್ಕತಾ ಸೇರಿ ಭಾರತದ ಹಲವೆಡೆ ಕಂಪಿಸಿದ ಭೂಮಿ, Video

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

SCROLL FOR NEXT