ಇಶಾ ಸಿಂಗ್, ವರುಣ್ ತೋಮರ್ 
ಕ್ರೀಡೆ

ಶೂಟಿಂಗ್: ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆದ ಇಶಾ ಸಿಂಗ್, ವರುಣ್ ತೋಮರ್

ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ.

ಜಕಾರ್ತ: ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ.

ಇವರಿಬ್ಬರ ಅರ್ಹತೆಯೊಂದಿಗೆ ಪ್ಯಾರಿಸ್‌ಗೆ ಒಲಿಪಿಂಕ್ ಗೆ ತೆರಳುವ ಒಟ್ಟು ಭಾರತೀಯ ಶೂಟರ್‌ಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದು ಈ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅತ್ಯಧಿಕ ಸಂಖ್ಯೆಗೆ ಸಮನಾಗಿದೆ.

ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಉಳಿದ ಅರ್ಹತಾ ಪಂದ್ಯಗಳು ನಡೆದಾಗ ಭಾರತದ ಇನ್ನಷ್ಟು ಕ್ರೀಡಾಪಟುಗಳು ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆಯಬಹುದು.

20ರ ಹರೆಯದ ತೋಮರ್ ಫೈನಲ್‌ನಲ್ಲಿ 239.6 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರೆ, ಅರ್ಜುನ್ ಚೀಮಾ ಅವರು 237.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಂಗೋಲಿಯಾದ ದವಾಖು ಎಂಖ್ತೈವಾನ್ (217.2) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಇನ್ನು 18ರ ಹರೆಯದ ಇಶಾ ಸಿಂಗ್ ಅವರು ಮಹಿಳೆಯರ ವಿಭಾಗದಲ್ಲಿ 243.1 ಅಂಕ ಗಳಿಸಿ ಚಿನ್ನ ಗೆದ್ದಿದ್ದಾರೆ.

ಪಾಕಿಸ್ಥಾನದ ಕಿಶ್ಮಲಾ ತಲಾತ್(236.3) ಬೆಳ್ಳಿ ಪದಕ ಗೆದ್ದರೆ, ಭಾರತದ ರಿದಮ್ ಸಾಂಗ್ವಾನ್(214.5) ಅವರು ಕಂಚಿನ ಪದಕ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ಟೆಹ್ರಾನ್'ನಲ್ಲಿ ಭಾರೀ ಸ್ಫೋಟ, ಬಾಂಬ್ ದಾಳಿ ಮತ್ತಷ್ಟು ಹೆಚ್ಚಲಿದೆ ಎಂದು ಅಮೆರಿಕಾ ಎಚ್ಚರಿಕೆ

ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

T20 ವಿಶ್ವಕಪ್ 2026: 4 ಓವರ್ ನಲ್ಲಿ 53 ರನ್.. ಸೈಲೆಂಟ್ ಮಾಡಲು ಬಂದು ತಮ್ಮ ತಂಡವೇ ಸೈಲೆಂಟ್ ಆಗುವಂತೆ ಮಾಡಿದ Sam Curran

ಡಾಗ್ ಸತೀಶ್ ಗೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR, 2 ಪ್ರಕರಣ

SCROLL FOR NEXT