ಕಬಡ್ಡಿ
ಕಬಡ್ಡಿ 
ಕ್ರೀಡೆ

ಪ್ರೊ ಕಬಡ್ಡಿ ಲೀಗ್‌ : 10 ವರ್ಷಗಳ ಪಯಣ ಹಂಚಿಕೊಂಡ ಚಾರು ಶರ್ಮಾ

Sumana Upadhyaya

ಕ್ರೀಡೆ ಮತ್ತು ಮನರಂಜನೆಯ ಕ್ರಿಯಾತ್ಮಕ ಜಗತ್ತಿನಲ್ಲಿ, ಕೆಲವು ವ್ಯಕ್ತಿಗಳು ಅಪ್ರತಿಮ ಸಾಧಕರಾಗುತ್ತಾರೆ. ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಹಾಕುತ್ತಾರೆ. ಈ ದಿಗ್ಗಜರ ಪೈಕಿ ಚಾರು ಶರ್ಮಾ ಒಬ್ಬ ದಾರ್ಶನಿಕ, ಅವರ ಬಹುಮುಖಿ ಸಾಧನೆಗಳು, ಪ್ರತಿಭೆ ಕ್ರೀಡೆಯ ಬಗ್ಗೆ ಇರುವ ವ್ಯಾಖ್ಯಾನ ಮತ್ತು ಉದ್ಯಮಶೀಲತೆಯನ್ನು ಮರುರೂಪಿಸಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 10ನ ಪ್ಲೇಆಫ್‌ಗಳಲ್ಲಿ, ಪ್ರೊ ಕಬಡ್ಡಿ ಲೀಗ್‌ನ ನಿರ್ದೇಶಕ ಚಾರು ಶರ್ಮಾ ಅವರು ಲೀಗ್‌ನೊಂದಿಗೆ ತಮ್ಮ ಹತ್ತು ವರ್ಷಗಳ ಪಯಣದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಪ್ರೊ ಕಬಡ್ಡಿ ಲೀಗ್(PKL) ಆರಂಭಿಸಲು ನಿಮಗೆ ಸ್ಫೂರ್ತಿ ಏನು?

2006 ರ ಏಷ್ಯನ್ ಗೇಮ್ಸ್‌ನೊಂದಿಗೆ ಪ್ರಾರಂಭವಾಯಿತು, ಆಗ ನನ್ನನ್ನು ಕಮೆಂಟರಿಗೆ ಕರೆಯಲಾಗಿತ್ತು. ಅದು ನನ್ನನ್ನು ಕ್ರೀಡೆಯೊಂದಿಗೆ ಮರುಸಂಪರ್ಕಿಸುವಂತೆ ಮಾಡಿತು. ಆಟವು ಎಷ್ಟು ಪ್ರಬಲ, ಶಕ್ತಿಯುತ ಮತ್ತು ಅಸಾಧಾರಣವಾಗಿದೆ ಎಂಬುದನ್ನು ಅಲ್ಲಿ ಅರಿತುಕೊಂಡೆ. ನಾವು ಭಾರತದಲ್ಲಿ ನಮ್ಮ ಆಟಕ್ಕೆ ಅರ್ಹವಾದ ಗೌರವ, ಸ್ಥಾನಮಾನ ನೀಡದೆ ದೊಡ್ಡ ಅಪಚಾರವನ್ನು ಮಾಡುತ್ತಿದ್ದೇವೆ. ಕ್ರೀಡೆಯನ್ನು ಮತ್ತೊಮ್ಮೆ ಎಲ್ಲರಿಗೂ ಪ್ರದರ್ಶಿಸುವ ಮೂಲಕ ಗೌರವವನ್ನು ಮರಳಿ ತರಲು ನಾನು ಬಯಸುತ್ತೇನೆ.

ಪಿಕೆಎಲ್ ನ್ನು ಸ್ಥಾಪಿಸುವಾಗ ನೀವು ಸವಾಲುಗಳನ್ನು ಎದುರಿಸಿದ್ದೀರಾ?

ಆನಂದ್ ಮಹೀಂದ್ರಾ ಮೊದಲು ನನಗೆ ಆರಂಭಿಸುವಂತೆ ಪ್ರೋತ್ಸಾಹ ನೀಡಿದ ನಂತರ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ನಾನು ಬಹಳಷ್ಟು ಬೇರೆ ಕೆಲಸವನ್ನು ತ್ಯಜಿಸಬೇಕಾಗಿತ್ತು.

10ನೇ ಸೀಸನ್‌ನಲ್ಲಿ PKL ಜೊತೆಗಿನ ಪ್ರಯಾಣ ಹೇಗಿದೆ?

ಸಾಕಷ್ಟು ಆತಂಕ ಮತ್ತು ಉತ್ಸಾಹಗಳೊಂದಿಗೆ ಇಷ್ಟು ವರ್ಷ ಸಾಗಿ ಬಂದಿದ್ದೇನೆ. ಹಲವು ವರ್ಷಗಳ ಕಾಲ ಶಾಂತವಾಗಿ ಸಾಗಿತು. ಇದರಲ್ಲಿ ಯಾವಾಗಲೂ ಒತ್ತಡವಿರುತ್ತದೆ, ವಿಶೇಷವಾಗಿ ನೀವು 10 ನೇ ಸೀಸನ್‌ನಂತಹ ಹೆಗ್ಗುರುತನ್ನು ಹೊಂದಿರುವಾಗ, ತಾಜಾ ಮತ್ತು ಹೊಸದನ್ನು ನೀಡಬೇಕಾಗುತ್ತದೆ. ಇತರ ಅನೇಕ ಲೀಗ್‌ಗಳಿಗಿಂತ ಭಿನ್ನವಾಗಿ ಭವ್ಯವಾಗಿ ಉಳಿಸಿಕೊಂಡಿದೆ. ಆದ್ದರಿಂದ ನಾವು ಮುಂದುವರಿಯಲು ತಳಮಟ್ಟದಲ್ಲಿ ಉತ್ತಮವಾಗಿ ಮಾಡಿದ್ದೇವೆ ಎಂಬ ತೃಪ್ತಿ ಇದೆ.

ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿರುವುದರಿಂದ, ಮಹಿಳಾ ಪಿಕೆಎಲ್ ಆರಂಭಿಸಬಹುದೆಂದು ನಿರೀಕ್ಷಿಸಿದ್ದೀರಾ?

ಭಾರತದಲ್ಲಿ ಉತ್ತಮ ಪದ್ಧತಿ ಹೊಂದಿರುವ ಅನೇಕ ಮಹಿಳಾ ಅಥ್ಲಿಟ್ ಗಳಿದ್ದಾರೆ. ಮಹಿಳಾ ಲೀಗ್‌ಗೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಮೊದಲು ನಾವು ಮೊದಲು ಸಮರ್ಥರಾಗಿರಬೇಕು. ಅಂದಹಾಗೆ, ಕ್ರಿಕೆಟ್ ಕೂಡ 14 ವರ್ಷಗಳ ನಂತರ ಮಹಿಳಾ ಲೀಗ್ ನ್ನು ಪಡೆದುಕೊಂಡಿದೆ. PKL ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಮಾನದಂಡವು ಒಂದು ಅಥವಾ ಎರಡು ಹಂತಗಳ ಮೇಲೆ ಹೋಗಬೇಕಾಗಿದೆ. ಆದ್ದರಿಂದ ಮಹಿಳಾ ಲೀಗ್ ಕೂಡ ಅಂತರರಾಷ್ಟ್ರೀಯವಾಗಿರುತ್ತದೆ. ಬಹುಶಃ ಇನ್ನೊಂದು ವರ್ಷ ಅಥವಾ ಎರಡು ವರ್ಷಗಳು, ಮಹಿಳಾ ಲೀಗ್ ಆರಂಭಿಸಬಹುದು.

ನೀವು ಕ್ರಿಕೆಟ್ ಕಾಮೆಂಟರಿ ಮಾಡುತ್ತಿರುವುದನ್ನು ನಾವು ನೋಡಿ ವರ್ಷಗಳೇ ಕಳೆದಿವೆ?.

ನನ್ನಲ್ಲಿ ಇನ್ನೂ ಕಾಮೆಂಟರಿ ಮಾಡುವ ಆಸಕ್ತಿ ಇದೆ. ನಾನು ಪ್ರೊ ಕಬಡ್ಡಿ ಲೀಗ್ ಯೋಜಿಸುವಾಗ ಸಾಕಷ್ಟು ಕೆಲಸ ಕಳೆದುಕೊಂಡಿದ್ದೆ.

ನಿಮ್ಮ ಪ್ರಕಾರ, ಉತ್ತಮ ನಿರೂಪಕ ಎಂದರೇನು?

ಒಂದು ಸೂತ್ರವಿದೆ - ಆದರ್ಶ ನಿರೂಪಕರಾಗಲು 100 ಅಂಕಗಳಿದ್ದರೆ, ಅದರಲ್ಲಿ 50 ಅಂಕಗಳು ವಿಷಯದ ಜ್ಞಾನಕ್ಕೆ ಸೇರಿವೆ, 45 ಅಂಕಗಳು ಸಂವಹನಕ್ಕಾಗಿ ಮತ್ತು ಕೊನೆಯ 5 ಅಂಕಗಳು ಉಳಿದ ವಿಷಯಗಳು - ನಿಮ್ಮ ವ್ಯಕ್ತಿತ್ವ, ವರ್ತನೆ, ಹಾಸ್ಯ ಪ್ರಜ್ಞೆ ಮತ್ತು ನಿಮ್ಮ ಧ್ವನಿಯ ಗುಣಮಟ್ಟದ್ದಾಗಿರುತ್ತದೆ.

SCROLL FOR NEXT