ನಿಶಾದ್ ಕುಮಾರ್  
ಕ್ರೀಡೆ

Paralympics ಬೆಳ್ಳಿ ಪದಕ ವಿಜೇತ ನಿಶಾದ್ ಕುಮಾರ್: ಹೈ ಜಂಪ್ ಸ್ಟಾರ್ ತರಬೇತಿ ಪಡೆಯುತ್ತಿರುವುದು ಬೆಂಗಳೂರಿನಲ್ಲಿ

ಭಾರತಕ್ಕೆ ಬಂದು ಮೊದಲು ನಾನು ನನ್ನ ತಾಯಿಯನ್ನು ಭೇಟಿಯಾಗಬೇಕು. ಆದರೆ ಅದಕ್ಕೂ ಮುನ್ನ ಐಫೆಲ್ ಟವರ್ ಏರಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

ಬೆಂಗಳೂರು: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ47 ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿರುವ ನಿಶಾದ್ ಕುಮಾರ್, ಸ್ಪರ್ಧೆಗೆ ಮೊದಲು ಶಾಂತವಾಗಿ ಮತ್ತು ಸಂಯೋಜನೆಯಿಂದ ಆಡಿದ್ದು ನೆರವಿಗೆ ಬಂದಿತು ಎಂದು ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆಯಿದ್ದ ಬಗ್ಗೆ ಅರಿವನ್ನು ಹೊಂದಿದ್ದ ನಿಶಾದ್, ಎಲ್ಲ ಅಡೆತಡೆಗಳು, ವಿಚಲಿತವಾಗುವ ವಿಷಯಗಳನ್ನು ಮರೆತು ಶಾಂತವಾಗಿ ಆಟದ ಮೇಲೆ ಗಮನ ಹರಿಸಲು ಪ್ರಯತ್ನಪಟ್ಟರಂತೆ. ಹೆಚ್ಚು ಯೋಚನೆ ಮಾಡುತ್ತಿರಲಿಲ್ಲ, ಶಾಂತವಾಗಿರಲು ಪ್ರಯತ್ನಪಟ್ಟೆ. ನಾವು ಯೋಜನೆ ಮಾಡಿಕೊಂಡದ್ದಕ್ಕೆ ತಕ್ಕಂತೆ ಪೂರಕವಾಗಿ ಹೋಗಲು ನೋಡಿದೆ, ಜಂಪಿಂಗ್ ಮೇಲೆ ಗಮನ ಹರಿಸಿದೆ. ಹೈ ಜಂಪ್ ಮಾಡುವಾಗ ನನ್ನ ಗಮನ ಸಂಪೂರ್ಣವಾಗಿ ಅದರ ಮೇಲೆಯೇ ಇತ್ತು, ಅದನ್ನು ನಾನು ತರಬೇತಿಯಿಂದ ಕಲಿತೆ ಎಂದು ಪ್ಯಾರಿಸ್ ನಿಂದ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದರು.

24 ವರ್ಷದ ನಿಶಾದ್ ಕುಮಾರ್ ತರಬೇತಿ ಪಡೆಯುತ್ತಿರುವುದು ಬೆಂಗಳೂರಿನಲ್ಲಿ. ಅತ್ಯುತ್ತಮ ಜಿಗಿತ 2.04 ಮೀಟರ್‌ಗಳಷ್ಟು ಸಾಧಿಸಿದ್ದಾರೆ. ಯುಎಸ್‌ಎಯ ರೋಡೆರಿಕ್ ಟೌನ್‌ಸೆಂಡ್‌ಗಿಂತ ಒಂದು ಸ್ಥಾನ ಹಿಂದುಳಿದರು.

ನನ್ನ ಸ್ಥಾನ ಎಲ್ಲಿದೆ ಎಂದು ಗೊತ್ತಿತ್ತು. ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದೆ. ಅದಕ್ಕಿಂತ ಹೆಚ್ಚು ಚಿನ್ನ ಸಿಕ್ಕಿದ್ದರೆ ಅಚ್ಚರಿಯ ಸಂತೋಷವಾಗುತ್ತಿತ್ತು. ಆದರೂ ನನಗೆ ಈಗ ಸಂತೋಷವಿದೆ ಎಂದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಮೊದಲು ತರಬೇತುದಾರ ಜೆರೆಮಿ ಫಿಶರ್, ಒಲಿಂಪಿಕ್ ಪದಕ ವಿಜೇತ ವಿಲ್ ಕ್ಲೇ ಅವರ ತರಬೇತುದಾರರ ಅಡಿಯಲ್ಲಿ ಯುಎಸ್‌ಎಯಲ್ಲಿ ತರಬೇತಿ ಪಡೆದಿದ್ದರು.

ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕುಮಾರ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಮೂಲತಃ ಹಿಮಾಚಲ ಪ್ರದೇಶದ ಅಂಬ್ ಬಳಿಯ ಬದೌನ್ ಗ್ರಾಮದ ಕುಮಾರ್, ಪದಕ ಗೆದ್ದ ನಂತರ ತನ್ನ ತಾಯಿಗೆ ಕರೆ ಮಾಡಿದ್ದಾರೆ.

6-ಅಡಿ-4-ಇಂಚು ಎತ್ತರ ಹೊಂದಿರುವ ನಿಶಾದ್ ಕುಮಾರ್, ತನ್ನ ಯಶಸ್ಸನ್ನು ತನ್ನ ತರಬೇತುದಾರರಿಗೆ ಮಾತ್ರವಲ್ಲದೆ ಅವನ ತಾಯಿಗೆ ಅರ್ಪಿಸುತ್ತಿದ್ದಾರೆ. 2007 ರಲ್ಲಿ ಪ್ರಾಣಿಗಳಿಗೆ ಮೇವು ಕೊಯ್ಲು ಕತ್ತರಿಸುವ ಯಂತ್ರದ ಅಪಘಾತದಲ್ಲಿ ತನ್ನ ಬಲಗೈಯನ್ನು ಕಳೆದುಕೊಂಡ ನಂತರ ಜೀವನ ಇಲ್ಲಿಗೇ ಮುಗಿದುಹೋಯಿತು ಎಂದು ಕುಗ್ಗದೆ ತನ್ನ ಛಲ, ಹಠ ಬಿಡದೆ ಸಾಧಿಸಲು ಮುಂದಾದರು. ಚಿಕ್ಕ ಮಗುವಾಗಿದ್ದಾಗ, ಕುಮಾರ್ ಯಾವಾಗಲೂ ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸಿ ಭಾರತ ಸೇನೆಗೆ ಸೇರಲು ನೋಡುತ್ತಿದ್ದರಂತೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಭವ್ಯ ಸ್ವಾಗತಕ್ಕಾಗಿ ಭಾರತಕ್ಕೆ ಹಿಂದಿರುಗುವ ಮೊದಲು ಸೆಪ್ಟೆಂಬರ್ 9 ರವರೆಗೆ ಪ್ಯಾರಿಸ್‌ನಲ್ಲಿ ಉಳಿಯಲು ಕುಮಾರ್ ಯೋಜಿಸಿದ್ದಾರೆ. ಭಾರತಕ್ಕೆ ಬಂದು ಮೊದಲು ನಾನು ನನ್ನ ತಾಯಿಯನ್ನು ಭೇಟಿಯಾಗಬೇಕು. ಆದರೆ ಅದಕ್ಕೂ ಮುನ್ನ ಐಫೆಲ್ ಟವರ್ ಏರಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT