ನೀರಜ್ ಚೋಪ್ರಾ-ಅರ್ಷದ್ ನದೀಮ್ 
ಕ್ರೀಡೆ

World Athletics 2025: ಕಳಪೆ ಪ್ರದರ್ಶನ; ನೀರಜ್ ಚೋಪ್ರಾ, Pak ನದೀಮ್ ಹೊರಕ್ಕೆ; ಭಾರತಕ್ಕೆ ಸಚಿನ್ ಭರವಸೆ!

ಸಚಿನ್ ಯಾದವ್ 86.27 ಮೀಟರ್ ಎಸೆಯುವ ಮೂಲಕ ಆರನೇ ಸುತ್ತಿಗೆ ಅರ್ಹತೆ ಪಡೆದು ಭಾರತದ ಪದಕದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಕಳಪೆ ಪ್ರದರ್ಶನದಿಂದಾಗಿ ಭಾರತೀಯ ನೀರಜ್ ಚೋಪ್ರಾ (Neeraj Chopra) ತಮ್ಮ ಚಿನ್ನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರೆ ಏತನ್ಮಧ್ಯೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಪದಕವನ್ನು ವಂಚಿತರಾದರು. ಆದಾಗ್ಯೂ, ನೀರಜ್ 8ನೇ ಸ್ಥಾನ ಪಡೆದರೇ, ಅರ್ಷದ್ ನದೀಮ್ ಅಂತಿಮ ಸುತ್ತಿನಲ್ಲಿ 10ನೇ ಸ್ಥಾನ ಪಡೆದರು.

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಮತ್ತು ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಇಬ್ಬರೂ ಕಳಪೆ ಪ್ರದರ್ಶನ ನೀಡಿದ್ದಾರೆ. ನೀರಜ್ 83.65 ಮೀಟರ್ ಎಸೆಯುವ ಮೂಲಕ ಟಾಪ್ -10 ಸ್ಥಾನ ಪಡೆದಿದ್ದರು.

ಆದರೆ ನಂತರ ಅವರು 84.03 ಮೀಟರ್ ಎಸೆದರು. ಅವರ ಮೂರನೇ ಪ್ರಯತ್ನ ವಿಫಲವಾಯಿತು. ನಾಲ್ಕನೇ ಪ್ರಯತ್ನದಲ್ಲಿ ಅವರು 82.86 ಮೀಟರ್ ಎಸೆದು ಹೇಗೋ ಅಗ್ರ 8 ರಲ್ಲಿ 8 ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಇದಾದ ನಂತರ ಅವರು ತಮ್ಮ ಐದನೇ ಪ್ರಯತ್ನದಲ್ಲಿ ಫೌಲ್ ಮಾಡಿದ್ದು ಫೈನಲ್‌ ಸ್ಪರ್ಧೆಯಿಂದ ಹೊರಗುಳಿದರು.

ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ (Pakistan) ಅರ್ಷದ್ ನದೀಮ್ ಕೂಡ ಟೂರ್ನಿಯಿಂದ ಹೊರಬಿದ್ದಾರೆ. 82.73 ಮೀಟರ್ ಎಸೆಯುವ ಮೂಲಕ ಹತ್ತನೇ ಸ್ಥಾನ ಪಡೆದರು. ಆದಾಗ್ಯೂ ಸಚಿನ್ ಯಾದವ್ (Sachin Yadav) 86.27 ಮೀಟರ್ ಎಸೆಯುವ ಮೂಲಕ ಆರನೇ ಸುತ್ತಿಗೆ ಅರ್ಹತೆ ಪಡೆದು ಭಾರತದ ಪದಕದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಗಲಕೋಟೆ: ರೈತರ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚುತ್ತಿರುವ Video ವೈರಲ್; ಮೂರು FIR ದಾಖಲು

ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

Cricket: ಭಾರತ vs ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, 3 ದಾಖಲೆಗಳ ನಿರ್ಮಾಣ

Bihar: 'ಅಂದು ಇದೇ ಕೊಳಕು ಕಿಡ್ನಿ ನಿಮ್ಮ ಪ್ರಾಣ ಉಳಿಸಿತು, ಇಂದು ಚಪ್ಪಲಿಯಲ್ಲಿ ಥಳಿಸುತ್ತಿದ್ದಾರೆ'..: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ

India vs South Africa: 93 ವರ್ಷಗಳ ಇತಿಹಾಸದಲ್ಲೇ ಹೀನಾಯ ದಾಖಲೆ ಬರೆದ ಭಾರತ!

SCROLL FOR NEXT