ಕೀರ್ತಿ ಎಂ ಎಸ್  
ಕ್ರೀಡೆ

CBSE ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌: ಬೆಂಗಳೂರಿನ ವಿದ್ಯಾರ್ಥಿನಿ ಕೀರ್ತಿ ಎಂ.ಎಸ್ ಗೆ ಚಿನ್ನದ ಪದಕ

ಮುಂದಿನ ನವೆಂಬರ್‌ನಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಟೂರ್ನಮೆಂಟ್‌ನಲ್ಲಿ ಸಿಬಿಎಸ್‌ಇ ಮಂಡಳಿಯನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಸ್ಪರ್ಧಿ ಕೀರ್ತಿಯಾಗಿದ್ದಾರೆ.

ಬೆಂಗಳೂರಿನ ವಿದ್ಯಾ ಸಂಸ್ಕಾರ್ ಇಂಟನ್ಯಾಷನಲ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹದಿನೈದು ವರ್ಷದ ಕೀರ್ತಿ ಎಂ.ಎಸ್. ಇತ್ತೀಚೆಗೆ ಉತ್ತರ ಪ್ರದೇಶದ ಇಟಾವಾದ ಅಮ್ನೀವ್ ವಿಷನ್ ಶಾಲೆಯಲ್ಲಿ ನಡೆದ ಸಿಬಿಎಸ್‌ಇ ರಾಷ್ಟಿಯ ಟೇಕ್ವಾಂಡೋ (TAEKWONDO) ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಈ ಗೆಲುವು ಮೂಲಕ, ಮುಂದಿನ ನವೆಂಬರ್‌ನಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಟೂರ್ನಮೆಂಟ್‌ನಲ್ಲಿ ಸಿಬಿಎಸ್‌ಇ ಮಂಡಳಿಯನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಸ್ಪರ್ಧಿ ಕೀರ್ತಿಯಾಗಿದ್ದಾರೆ.

ಟೇಕ್ವಾಂಡೋದ ಉದಯೋನ್ಮುಖ ತಾರೆ

ಕೀರ್ತಿ ತನ್ನ ಎಂಟನೇ ವಯಸ್ಸಿನಲ್ಲಿ ಮಾಸ್ಟರ್ ಜ್ಯೋತಿಮಣಿ ಮಾರ್ಕಂಡನ್ ಮತ್ತು ಸಹಾಯಕ ತರಬೇತುದಾರ ಹರ್ಷ ಆರ್ ಅವರ ಮಾರ್ಗದರ್ಶನದಲ್ಲಿ ತನ್ನ ಟೇಕ್ವಾಂಡೋ ಪಯಣ ಪ್ರಾರಂಭಿಸಿದರು. ಅವರ ಸಮರ್ಪಣೆ ಮತ್ತು ಶಿಸ್ತಿನ ಅಭ್ಯಾಸದಿಂದ ರಾಜ್ಯ ಮತ್ತು ರಾಷ್ಟಿಯ ಮಟ್ಟದಲ್ಲಿ ಜಯ ಸಾಧಿಸುತ್ತಾ ಹೋದರು.

ವರ್ಷಗಳು ಕಳೆದಂತೆ, ಅವರು ಸಿಬಿಎಸ್‌ಇ ದಕ್ಷಿಣ ವಲಯ 2 ಚಾಂಪಿಯನ್‌ಶಿಪ್‌ಗಳಲ್ಲಿ 2022 ಮತ್ತು 2023) ಚಿನ್ನದ ಪದಕಗಳು; 2025 ರ ಸಿಬಿಎಸ್‌ಇ ದಕ್ಷಿಣ ವಲಯದಲ್ಲಿ ಬೆಳ್ಳಿ ಪದಕ ಗಳಿಸಿದರು. ಇದರಿಂದ ರಾಷ್ಟಿಯ ಪಂದ್ಯಗಳಿಗೆ ಪ್ರವೇಶ ಪಡೆಯಲು ಸಹಾಯವಾಯಿತು;

೪೦ ನೇ ಕರ್ನಾಟಕ ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ; ಮತ್ತು ಖೇಲೋ ಇಂಡಿಯಾ ಮಹಿಳಾ ಲೀಗ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ವಿಜೇತರು ಸೇರಿದಂತೆ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: ಈವರೆಗೂ ಶೇ. 13.13 ರಷ್ಟು ಮತದಾನ, ನ. 14 ರಂದು ಹೊಸ ಸರ್ಕಾರ ರಚನೆ ಎಂದ ತೇಜಸ್ವಿ ಯಾದವ್

ಇಂದು 8ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ: ಸರ್ಕಾರಕ್ಕೆ ಡೆಡ್ ಲೈನ್, ಸಚಿವ ಪಾಟೀಲ್ ಸಂಧಾನ ಸಭೆ ವಿಫಲ-Video

ಒತ್ತಡ, ಹಣದುಬ್ಬರಕ್ಕೆ ಕುಸಿಯುತ್ತಿದೆ ಜನನ ಪ್ರಮಾಣ! (ಹಣಕ್ಲಾಸು)

ಮೊದಲ ಹಂತದ ಮತದಾನಕ್ಕೂ ಮುನ್ನವೇ ಪ್ರಶಾಂತ್ ಕಿಶೋರ್ ಗೆ ಭಾರೀ ಹಿನ್ನಡೆ: BJP ಸೇರಿದ ಜನ್ ಸುರಾಜ್ ಪಕ್ಷದ ಅಭ್ಯರ್ಥಿ

ಜ್ಯೋತಿಷ್ಯದಲ್ಲಿ ಆರೋಗ್ಯ ಕಂಡುಕೊಳ್ಳುವುದು ಹೇಗೆ: ದೇಹದ ಅನಾರೋಗ್ಯ ನಿರ್ಧರಿಸುವ ಗ್ರಹಗಳು ಯಾವುವು? 'ತ್ರಿದೋಷ' ಎಂದರೇನು?

SCROLL FOR NEXT