ಫಿಫಾ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ 3 ರೆಡ್ ಕಾರ್ಡ್ 
ಕ್ರೀಡೆ

Fifa World Cup 2026: ಕೈಕೈ ಮಿಲಾಯಿಸಿದ ಆಟಗಾರರು, ಮುಖಕ್ಕೆ ಪಂಚ್, ಉದ್ಘಾಟನಾ ಪಂದ್ಯದಲ್ಲೇ 3 Red Card, ಹೀನಾಯ ದಾಖಲೆ

ಈ ಪಂದ್ಯದಲ್ಲಿ ರೆಫರಿಗಳು ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಮೆಕ್ಸಿಕೋದ ಓರ್ವ ಆಟಗಾರನನ್ನು ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಅಟ್ಟಿದರು.

ಮೆಕ್ಸಿಕೋ ಸಿಟಿ: ತೀವ್ರ ಕುತೂಹಲ ಕೆರಳಿಸಿದ್ದ ಫಿಫಾ ವಿಶ್ವಕಪ್ 2026 ಟೂರ್ನಿ ಆರಂಭವಾಗಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯವೇ ಹೀನಾಯ ದಾಖಲೆಗೆ ಪಾತ್ರವಾಗಿದೆ.

ಹೌದು.. ಜೂನ್ 11ರ ಗುರುವಾರದಂದು ಮೆಕ್ಸಿಕೋ ಸಿಟಿಯ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ಪಂದ್ಯ ಸಾಕಷ್ಟು ವಿವಾದಗಳಿಂದ ಕೂಡಿತ್ತು.

ಒಂದೆಡೆ ಮೈದಾನದ ಹೊರಗೆ ಪ್ರತಿಭಟನೆಗಳು ನಡೆಯುತ್ತಿದ್ದರೆ. ಇತ್ತ ಮೈದಾನದ ಒಳಗೆ ಆಟಗಾರರು ಅಕ್ಷರಶಃ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.

ಪರಿಣಾಮ ಪಂದ್ಯದ ವಿವಿಧ ಸಮಯದಲ್ಲಿ ಒಂದಲ್ಲಾ ಎರಡಲ್ಲಾ ಬರೊಬ್ಬರಿ ಮೂರು ರೆಡ್ ಕಾರ್ಡ್ ಗಳನ್ನು ರೆಫರಿಗಳು ಪ್ರದರ್ಶಿಸಬೇಕಾಯಿತು. ಇದರೊಂದಿಗೆ ವಿಶ್ವಕಪ್ ಉದ್ಘಾಟನಾ ಪಂದ್ಯವೊಂದರಲ್ಲಿ ಅತಿ ಹೆಚ್ಚು ಕೆಂಪು ಕಾರ್ಡ್‌ಗಳು ದಾಖಲಾಗಿರುವ ಹೊಸ ಹೀನಾಯ ದಾಖಲೆ ನಿರ್ಮಾಣವಾಯಿತು.

3 ಬಾರಿ ರೆಡ್ ಕಾರ್ಡ್ ಏಕೆ?

ಈ ಪಂದ್ಯದಲ್ಲಿ ರೆಫರಿಗಳು ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಮೆಕ್ಸಿಕೋದ ಓರ್ವ ಆಟಗಾರನನ್ನು ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಅಟ್ಟಿದರು. ಮೊದಲಿಗೆ ದಕ್ಷಿಣ ಆಫ್ರಿಕಾದ ಆಟಗಾರ ಸ್ಫೆಫೆಲೊ ಸಿಥೋಲೆ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಮೆಕ್ಸಿಕೋದ ಫಾರ್ವರ್ಡ್ ಬ್ರಿಯಾನ್ ಗುಟಿಯೆರೆಸ್ ಗೋಲು ಅವಕಾಶದತ್ತ ಸಾಗುತ್ತಿದ್ದ ವೇಳೆ ಅವರನ್ನು ಉದ್ದೇಶಪೂರ್ವಕವಾಗಿ ಅಪಾಯಕಾರಿಯಾಗಿ ತಡೆದ ಕಾರಣ ಸಿಥೋಲೆ ಅವರನ್ನು ಮೈದಾನದಿಂದ ಹೊರ ಕಳುಹಿಸಲಾಯಿತು.

ಅಂತೆಯೇ ವಿಎಆರ್ ಪರಿಶೀಲನೆಯ ಬಳಿಕ ಮೆಕ್ಸಿಕೋದ ರಾಬರ್ಟೊ ಅಲ್ವಾರಾಡೊ ಅವರ ಮುಖಕ್ಕೆ ದಕ್ಷಿಣ ಆಫ್ರಿಕಾ ಆಟಗಾರ ಥೆಂಬಾ ಜ್ವಾನೆ ಹೊಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ನೇರ ಕೆಂಪು ಕಾರ್ಡ್ ನೀಡಲಾಯಿತು. ಇತ್ತ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಕಠಿಣ ಟ್ಯಾಕಲ್ ಮಾಡಿದ ಕಾರಣ ಮೆಕ್ಸಿಕೋದ ಸೀಸರ್ ಮಾಂಟೆಸ್ ಅವರಿಗೆ ಕೆಂಪು ಕಾರ್ಡ್ ತೋರಿಸಲಾಯಿತು.

ಐತಿಹಾಸಿಕ ಹೀನಾಯ ದಾಖಲೆ

ಇನ್ನು ಈ ಮೂರು ರೆಡ್ ಕಾರ್ಡ್ ಗಳೊಂದಿಗೆ ಫಿಫಾ ವಿಶ್ವಕಪ್ 2026 ಉದ್ಘಾಟನಾ ಪಂದ್ಯ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ವಿಶ್ವಕಪ್ ಉದ್ಘಾಟನಾ ಪಂದ್ಯವೊಂದರಲ್ಲಿ ಮೂರು ಕೆಂಪು ಕಾರ್ಡ್‌ಗಳು ತೋರಿಸಲ್ಪಟ್ಟಿದ್ದು ಇದೇ ಮೊದಲ ಬಾರಿ. ಈ ಹಿಂದೆ 2022ರ ಫಿಫಾ ವಿಶ್ವಕಪ್‌ನ 64 ಪಂದ್ಯಗಳಲ್ಲಿ ಒಟ್ಟು ನಾಲ್ಕು ಕೆಂಪು ಕಾರ್ಡ್‌ಗಳು ಮಾತ್ರ ತೋರಿಸಲ್ಪಟ್ಟಿದ್ದವು.

ಇದೇ ಮೊದಲೇನಲ್ಲ

ಇದಕ್ಕೂ ಮೊದಲು ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಕೆಂಪು ಕಾರ್ಡ್‌ಗಳು ತೋರಿಸಲ್ಪಟ್ಟ ದಾಖಲೆ ಇನ್ನೂ 2006ರ ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದ್ದೇ ಆಗಿದೆ.

ಪಂದ್ಯದ ಫಲಿತಾಂಶ

ಅಂದಹಾಗೆ ಮೆಕ್ಸಿಕೋ ಸಿಟಿಯ ಪ್ರಸಿದ್ಧ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ತಂಡ 2-0 ಗೋಲುಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಮೆಕ್ಸಿಕೋ ಪರವಾಗಿ ಜುಲಿಯನ್ ಕ್ವಿನೋನ್ಸ್ ಮತ್ತು ರೌಲ್ ಜಿಮೆನೆಸ್ ಗೋಲುಗಳನ್ನು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ ವಿವಾದಾತ್ಮಕ ವಿಎಆರ್ ತೀರ್ಪುಗಳು ಹಾಗೂ ರೆಫರಿ ವಿಲ್ಟನ್ ಸಂಪಾಯೊ ಅವರ ಘೋಷಣೆಗಳು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಿಶ್ವಕಪ್ 2026ರ ಮೊದಲ ವೈರಲ್ ಕ್ಷಣಗಳಲ್ಲಿ ಒಂದಾಗಿ ಪರಿಣಮಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಹಣ ನೀಡಿದ್ದೇವೆ ಎಂದಲ್ಲ': ಇರಾನ್ ಮಾತುಕತೆ ಕುರಿತು ಅಮೆರಿಕ ಉಪಾಧ್ಯಕ್ಷ JD Vance ಸ್ಪಷ್ಟನೆ

ಭಾರತೀಯ ಹಡಗುಗಳ ಮೇಲೆ ನಡೆದಿದ್ದು 'ಇರಾನ್ ದಾಳಿ- ಟ್ರಂಪ್; ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ಆವೃತ್ತಿ ಅಲ್ಲಗಳೆದ US ಅಧ್ಯಕ್ಷ!

ಭಾರತೀಯ ಹಡಗಿನ ಮೇಲೆ ಅಮೆರಿಕ ದಾಳಿ ಖಂಡಿಸಿದ ಇರಾನ್

ಅಮಿತ್ ಶಾ ಭೇಟಿ ಮಾಡಿದ ಸಿಎಂ ಡಿಕೆಶಿ; ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗುವಂತೆ ಮನವಿ

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!

SCROLL FOR NEXT