ಲಾಸ್ ಏಂಜಲೀಸ್ ಸಮೀಪದ ಕ್ಯಾಲಿಫೋರ್ನಿಯಾದ ಇಂಗಲ್‌ವುಡ್‌ನಲ್ಲಿ ನಡೆದ ವಿಶ್ವಕಪ್ ಗ್ರೂಪ್ ಡಿ ಫುಟ್‌ಬಾಲ್ ಪಂದ್ಯದಲ್ಲಿ ಪರಾಗ್ವೆಯ ಆಟಗಾರ ಡಾಮಿಯನ್ ಬೊಬಡಿಲ್ಲಾ ಅವರ ಗೋಲು ಕಿತ್ತ ಬಳಿಕ ಅಮೆರಿಕ ತಂಡದ ಆಟಗಾರರು ಸಂಭ್ರಮಿಸಿದರು. 
ಕ್ರೀಡೆ

FIFA World Cup 2026 Day 2: ಪರಾಗ್ವೆ ವಿರುದ್ಧ ಅಮೆರಿಕ ಐತಿಹಾಸಿಕ ಜಯ; ಗೋಲು ಬರ ಅಂತ್ಯಗೊಳಿಸಿದ ಕೆನಡಾ

ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಪಂದ್ಯ ಆರಂಭವಾಗಿ ಏಳು ನಿಮಿಷಗಳಲ್ಲೇ ಪರಾಗ್ವೆಯ ಡಾಮಿಯನ್ ಬೊಬಡಿಲ್ಲಾ ಗೋಲು ಬಾರಿಸಿದ ಪರಿಣಾಮ ಅಮೆರಿಕ ಮುನ್ನಡೆ ಸಾಧಿಸಿತು.

2026 ಫಿಫಾ ವಿಶ್ವಕಪ್‌ನ ಎರಡನೇ ಪಂದ್ಯದ ದಿನ (Matchday 2) ಆತಿಥೇಯ ರಾಷ್ಟ್ರಗಳಾದ ಅಮೆರಿಕ ಮತ್ತು ಕೆನಡಾ ಉತ್ತಮ ಆರಂಭ ಕಂಡಿವೆ. ಅಮೆರಿಕ ತನ್ನ ಮೊದಲ ಪಂದ್ಯದಲ್ಲೇ ಪರಾಗ್ವೆಯನ್ನು 4-1 ಗೋಲುಗಳಿಂದ ಮಣಿಸಿದರೆ, ಕೆನಡಾ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ 1-1 ಗೋಲುಗಳ ಸಮಬಲ ಸಾಧಿಸಿದೆ.

ಗ್ರೂಪ್ ಡಿ: ಅಮೆರಿಕ 4-1 ಪರಾಗ್ವೆ

ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಪಂದ್ಯ ಆರಂಭವಾಗಿ ಏಳು ನಿಮಿಷಗಳಲ್ಲೇ ಪರಾಗ್ವೆಯ ಡಾಮಿಯನ್ ಬೊಬಡಿಲ್ಲಾ ಗೋಲು ಬಾರಿಸಿದ ಪರಿಣಾಮ ಅಮೆರಿಕ ಮುನ್ನಡೆ ಸಾಧಿಸಿತು.

31ನೇ ನಿಮಿಷದಲ್ಲಿ ಕ್ರಿಶ್ಚಿಯನ್ ಪುಲಿಸಿಕ್ ನೀಡಿದ ಅದ್ಭುತ ಪಾಸ್ ನ್ನು ಫೊಲರಿನ್ ಬಲಾಗುನ್ ಗೋಲಾಗಿ ಪರಿವರ್ತಿಸಿದರು. ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಮಲಿಕ್ ಟಿಲ್‌ಮನ್ ನೀಡಿದ ದೀರ್ಘ ಪಾಸ್ ನ್ನು ಬಲಾಗುನ್ ಅದ್ಭುತವಾಗಿ ಗೋಲಾಗಿ ಪರಿವರ್ತಿಸಿ ಅಮೆರಿಕದ ಮುನ್ನಡೆಯನ್ನು 3-0ಕ್ಕೆ ಹೆಚ್ಚಿಸಿದರು.

ಇದು ವಿಶ್ವಕಪ್‌ನಲ್ಲಿ ಬಲಾಗುನ್ ಅವರ ಚೊಚ್ಚಲ ಪಂದ್ಯವಾಗಿದ್ದು, ಎರಡು ಗೋಲು ಬಾರಿಸಿದ ಮೊದಲ ಅಮೆರಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1930ರ ನಂತರ ವಿಶ್ವಕಪ್‌ನಲ್ಲಿ ಅಮೆರಿಕ ಆಟಗಾರನೊಬ್ಬ ಎರಡು ಗೋಲು ಗಳಿಸಿದ ಮೊದಲ ಸಾಧನೆಯೂ ಇದಾಗಿದೆ.

ದ್ವಿತೀಯಾರ್ಧದಲ್ಲಿ ಪರಾಗ್ವೆಯ ಮೌರಿಸಿಯೊ ಒಂದು ಗೋಲು ಬಾರಿಸಿ ಅಂತರ ಕಡಿಮೆ ಮಾಡಿದರೂ, ಗಾಯದ ಸಮಯದ ಕೊನೆಯ ಕ್ಷಣಗಳಲ್ಲಿ ಜಿಯೋ ರೇನಾ ಗೋಲು ಬಾರಿಸಿ ಅಮೆರಿಕದ ಜಯವನ್ನು ಮತ್ತಷ್ಟು ಭರ್ಜರಿಗೊಳಿಸಿದರು. ಇದರೊಂದಿಗೆ ವಿಶ್ವಕಪ್ ಪಂದ್ಯವೊಂದರಲ್ಲಿ ಅಮೆರಿಕ ಮೊದಲ ಬಾರಿಗೆ ನಾಲ್ಕು ಗೋಲುಗಳನ್ನು ದಾಖಲಿಸಿತು.

ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕ್ರಿಶ್ಚಿಯನ್ ಪುಲಿಸಿಕ್ ಅವರನ್ನು ಎಡಗಾಲಿಗೆ ಸಣ್ಣ ಪೆಟ್ಟು ಬಿದ್ದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ವಿರಾಮದ ವೇಳೆ ಬದಲಾಯಿಸಲಾಯಿತು.

ಗ್ರೂಪ್ ಬಿ: ಕೆನಡಾ 1-1 ಬೋಸ್ನಿಯಾ ಮತ್ತು ಹರ್ಜೆಗೋವಿನಾ

ಟೊರೊಂಟೊದಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆದರೆ ತವರಿನ ಅಭಿಮಾನಿಗಳ ಪ್ರೋತ್ಸಾಹದ ನಡುವೆ ತಂಡ ಹೋರಾಟ ಮುಂದುವರಿಸಿತು.

ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಸೈಲ್ ಲಾರಿನ್, ಎರಡು ನಿಮಿಷಗಳಲ್ಲೇ ಪ್ರಾಮಿಸ್ ಡೇವಿಡ್ ನೀಡಿದ ಪಾಸ್ ನ್ನು ಗೋಲಾಗಿ ಪರಿವರ್ತಿಸಿ ಕೆನಡಾಗೆ ಸಮಬಲ ತಂದುಕೊಟ್ಟರು. ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಕೆನಡಾ ತನ್ನ ಏಳನೇ ಪಂದ್ಯದಲ್ಲಿ ಮೊದಲ ಅಂಕವನ್ನು ಗಳಿಸಿತು.

1986ರ ವಿಶ್ವಕಪ್‌ನಲ್ಲಿ ಹಾಗೂ 2022ರ ಕತಾರ್ ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳನ್ನೂ ಸೋತಿದ್ದ ಕೆನಡಾ, ಇದೀಗ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂಕ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!