ಮಗನ ಹುಟ್ಟುಹಬ್ಬ ವಿಜೃಂಭಣೆಯಿಂದ ನಡೆಯುತ್ತಿತ್ತು. ಮಗ ತಂದೆಯನ್ನು ಕೇಳಿದ, ನೀನ್ಯಾಕೆ ನನ್ನ ಹುಟ್ಟುಹಬ್ಬದಂದು ಹಳೆ ಬಟ್ಟೆ ಹಾಕಿಕೊಂಡಿದ್ದೀಯಾ?
ತಂದೆ: ನನ್ನ ಬಳಿ ನಾನು ಅತೀ ಪ್ರೀತಿಸುವ ಒಬ್ಬರಿಗೆ ಒಳ್ಳೆ ಬಟ್ಟೆ ತೆಗೆದುಕೊಡುವಷ್ಟು ಮಾತ್ರ ಹಣವಿತ್ತು.
18 ವರ್ಷಗಳ ನಂತರ ಅಪ್ಪ ಮಗನನ್ನು ಕೇಳಿದ, 'ಹಳೆ ಬಟ್ಟೆಗಳನ್ನು ತೊಟ್ಟು ಹಣ ಉಳಿಸುವಂಥದ್ದೇನಿದೆ? ಹೊಸ ಬಟ್ಟೆಗಳನ್ನು ತೊಡಬಾರದೇ?'. ಮಗ ಉತ್ತರಿಸಿದ, 'ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದವನಿಗೊಂದು ಅರಮನೆ ಕಟ್ಟಿಕೊಡಬೇಕಿದೆ. ಹೀಗಾಗಿ ಹಣ ಉಳಿಸಲೇಬೇಕಾಗಿದೆ.'!