ಅವನು: ಪ್ರಾಣಿಗಳಿಗೆ ದೃಷ್ಟಿ ದೋಷದ ಸಮಸ್ಯೆ ಕಂಡು ಬರುವುದಿಲ್ಲ ಅಲ್ವಾ?
ಇವನು: ಇರಬಹುದು ಅನ್ನಿಸುತ್ತೆ. ಯಾಕೆಂದರೆ, ಕನ್ನಡಕ ಧರಿಸಿದ ಯಾವ ಪ್ರಾಣಿಯನ್ನೂ ನಾನು ಈವರೆಗೆ ಕಂಡಿಲ್ಲ..!!
----
ಹೆಂಡತಿ: ಓ ನನ್ನ ಪತಿದೇವರೇ, ನೀವು ಸತ್ತರೆ ನಾನು ಹುಚ್ಚಿಯಾಗಿಬಿಡುತ್ತೇನೆ..
ಗಂಡ: ಹೌದಾ, ಇನ್ನೊಂದು ಮದುವೆಯಾಗುವುದಿಲ್ಲವಾ?
ಹೆಂಡತಿ: ಹುಚ್ಚಿಯಾದಾಗ ಏನು ಬೇಕಾದರೂ ಆಗಬಹುದು!
----
ಸಂತಾ: ಬಂತಾ, ನಾನು ಇನ್ಮುಂದೆ ಏನಿದ್ರೂ ಫಸ್ಟ್ಷೋ ಫಿಲ್ಮ್ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.
ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು!
ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕಂದ್ರೆ ಅವ್ನಿಗೆ ಫಸ್ಟ್ ಷೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ.
ಸಂತಾ: ಅಡುಗೆ ಮಾಡೋದು.. ಬಟ್ಟೆ ಒಗೆಯೋದು.. ಇವೆಲ್ಲವುಗಳಿಂದ ಮುಕ್ತಿ ಪಡೆಯಲು ನಾನು ಮದುವೆಯಾದೆ..
ಬಂತಾ: ಹೌದಾ..?! ನಾನು ಅದರಿಂದೆಲ್ಲ ಮುಕ್ತಿ ಪಡೆಯಲು ಡೈವೋರ್ಸ್ ಕೊಟ್ಟೆ!
---
ಸಂತಾ: ಏನಯ್ಯಾ, ವಿಸ್ಕೀನ ಪೈಪ್ ಹಾಕ್ಕೊಂಡು ಕುಡೀತಾ ಇದ್ದೀಯಲ್ಲ ಯಾಕೆ?
ಬಂತಾ: ಹೌದು ಕಣೋ. ವಿಸ್ಕೀನ ಕೈಯಿಂದ ಮುಟ್ಟೋದಿಲ್ಲ ಅಂತ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೇನೆ.
---
ಗುಂಡ ಮತ್ತು ಗುಂಡಿಯ ನಡುವೆ ಯಾವುದೋ ವಾದವಿವಾದ ಬೆಳೆದು ಗುಂಡ ತನ್ನ ಪತ್ನಿ ಗುಂಡಿ ಕೆನ್ನೆಗೆ ಎರಡು ಹೊಡೀತಾನೆ. ಇದರಿಂದ ನೊಂದ ಗುಂಡಿ ಕಣ್ಣೀರಿಡುತ್ತಿದ್ದಾಗ..
ಗುಂಡ: ಬೇಜಾರ್ ಮಾಡಿಕೊಳ್ಳಬೇಡ.. ಕೆನ್ನೆಗೆ ಹೊಡೆಯೋದು ಪ್ರೀತಿಯ ಸಂಕೇತ..
ಈ ಮಾತು ಕೇಳಿದ ತಕ್ಷಣ ಎದ್ದ ಗುಂಡಿ.. ತನ್ನ ಪತಿ ಗುಂಡನ ಕೆನ್ನೆಗೆ ಹೊಡೆದು ಹೀಗೆಂದಳು.
ನನಗೇನು ನಿಮ್ಮ ಮೇಲೆ ಪ್ರೀತಿ ಇಲ್ಲಾ ಅನ್ಕೊಂಡ್ರಾ..