ಬೈಟುಕಾಫಿ

ನಗರ ಜೀವನದ ಜಂಜಾಟ

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಅಥವಾ ನಾನಾ ಕಾರಣಗಳಿಂದ ಯುವಕರು ತಮ್ಮ ಹಳ್ಳಿಗಳನ್ನು ತೊರೆದು ನಗರಗಳತ್ತ ..

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಅಥವಾ ನಾನಾ ಕಾರಣಗಳಿಂದ ಯುವಕರು ತಮ್ಮ ಹಳ್ಳಿಗಳನ್ನು ತೊರೆದು ನಗರಗಳತ್ತ ಮುಖಮಾಡುತ್ತಿದ್ದಾರೆ. ಹೀಗೆ ಗುಳೆ ಹೋದ ಯುವಕರು ಸಣ್ಣ ಪುಟ್ಟ ಉದ್ಯೋಗ ಮಾಡುತ್ತಾರೆ. ಬೆಲೆ ಏರಿಕೆಯ ಬಿಸಿಯನ್ನು ಹೊಟ್ಟೆಗೆ ಹಾಕಿಕೊಂಡು ನಗರ ಜೀವನಕ್ಕೆ ಹೊಂದಿಕೊಂಡು ಹ್ಯಾಗ್ಯಾಗೋ ಬದುಕು ಕಟ್ಟಿಕೊಂಡಿರುತ್ತಾರೆ. ಹೀಗಿರುವಾಗ ಹೆತ್ತವರನ್ನು ತಾವಿದ್ದಲ್ಲಿಗೆ ಕರೆಸಿಕೊಳ್ಳುವುದನ್ನು ಅವರು ಕಲ್ಪಿಸಿಕೊಳ್ಳದ ಸ್ಥಿತಿಯಲ್ಲಿರುತ್ತಾರೆ. ಮುಂದೆ ಕರೆಸಿಕೊಂಡರಾಯಿತು ಎಂದುಕೊಳ್ಳುತ್ತಾರೆ. ಈ ಎಣಿಕೆ ಸಾಗುತ್ತಲೆ ಇರುತ್ತದೆ. ಆದರೆ, ಬದುಕಿನ ಓಟದಲ್ಲಿ ಅವರಿಗೆ ಇದು ಸಾಧ್ಯವಾಗುವುದೆ ಇಲ್ಲ. ಹೆತ್ತವರೂ ಕೂಡ ನಗರ ಶೈಲಿಯ ಜೀವನ ಜಂಜಾಟವನ್ನು ಬಯಸದೆ ತಮ್ಮ ಬೇರಲ್ಲೇ ಇರಲು ಬಯಸುತ್ತಾರೆ. ಹೀಗೆ ಕಾರಣಗಳು ಬೇರೆ ಬೇರೆಯಾಗಿರಬಹುದು. ಆದರೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದಂತೂ ವಾಸ್ತವ.
- ರಾಮಕೃಷ್ಣ ಜೋಷಿ, ಉಡುಪಿ

ಪ್ರಶಾಂತ ವಾತಾವರಣದ ಪ್ರಭಾವ

ಎಲ್ಲಾ ಪೋಷಕರು ತಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಮಕ್ಕಳನ್ನು ಚೆನ್ನಾಗಿ ಓದಿಸುತ್ತಾರೆ. ನಂತರ ಅವರಿಗೆ ಒಳ್ಳೆಯ ನೌಕರಿಯೂ ದೊರೆಯುತ್ತದೆ. ಆಗ ಅವರು ಹಳ್ಳಿಯಲ್ಲಿಯೇ ಇರುವ ಅವಕಾಶವಿದ್ದರೂ ಸಹ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು. ತಮ್ಮ ತಂದೆ-ತಾಯಿಯನ್ನು ಹಳ್ಳಿಯಲ್ಲಿಯೇ ಬಿಟ್ಟು ಹೋಗಬೇಕೆಂದು ಅಲ್ಲ. ಎಷ್ಟೋ ಸಂಪ್ರದಾಯಸ್ಥ ತಂದೆ-ತಾಯಿಗಳಿಗೆ ತಾವುಗಳು ಗಳಿಸಿದ ಅಲ್ಪ ಸ್ವಲ್ಪ ಆಸ್ತಿಯನ್ನು ಬಿಟ್ಟು ನಗರ ಸೇರುವ ಮನಸ್ಸಿರುವುದಿಲ್ಲ. ಹಳ್ಳಿಯ ಪ್ರಶಾಂತವಾದ ವಾತಾವರಣಕ್ಕೆ ಅವರು ಒಗ್ಗಿಕೊಂಡು ಹಳ್ಳಿಯಲ್ಲಿಯೆ ಉಳಿಯುತ್ತಾರೆ. ಇವೆಲ್ಲಾ ಕಾರಣಗಳಿಂದಾಗಿ ಹಳ್ಳಿಗಳು ವೃದ್ಧರಿಂದ ಕೂಡಿದೆಯೇ ವಿನಃ ಬೇರೆ ಯಾವುದೇ ಉದ್ದೇಶವಲ್ಲ. ವೃದ್ಧಾಶ್ರಮವೆಂಬುದು ತಪ್ಪು ಕಲ್ಪನೆಯಾಗಿದೆ.
- ವೀರೇಶ್.ಕೆ.ಟಿ, ಮಾಡ್ಲಾಕನಹಳ್ಳಿ

ಕಳಚಿಕೊಳ್ಳುತ್ತಿದೆ ಮಾನವೀಯ ಮೌಲ್ಯ
ಜಾಗತೀಕರಣದ ಪ್ರಭಾವದಿಂದಾಗಿ ಅವಿಭಕ್ತ ಕುಟುಂಬಗಳು ನಶಿಸಿ, ವಿಭಕ್ತ ಕುಟುಂಬಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕಾರಣಾಂತರಗಳಿಂದ ನಗರ ಪ್ರದೇಶಕ್ಕೆ ವಲಸೆ ಬರುವವರೂ ಹೆಚ್ಚಾಗಿದ್ದಾರೆ. ಹಳ್ಳಿಗಳು ನಗರಗಳಾಗಿ ಪರಿವರ್ತನೆ ಹೊಂದುತ್ತಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನು ಭಾವನೆಗಳಿಗೆ ಬೆಲೆಕೊಡದೆ ಕೇವಲ ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ. ನಗರ ಜೀವನದಲ್ಲಿ ಮನುಷ್ಯ ತನ್ನನ್ನು ತಾನು ಸ್ಪರ್ಧೆಗೆ ತೆರೆದಿಟ್ಟುಕೊಂಡಿದ್ದಾನೆ. ಯುವ ಪೀಳಿಗೆಯ ಮುಖ್ಯ ಉದ್ಧೇಶವೆಂದರೆ ಹೆಸರು, ಹಣಗಳಿಕೆ, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವುದಷ್ಟೇ ಆಗಿದೆ. ಇದರಿಂದ ಮಾನವೀಯ ಸಂಬಂಧಗಳು ಕಳಚಿಕೊಳ್ಳುತ್ತಿದೆ. ತಮ್ಮ ತಂದೆ-ತಾಯಿಯರನ್ನು ತಮ್ಮ ಮಕ್ಕಳನ್ನು ಪೋಷಿಸುವ ಪೋಷಕರನ್ನಾಗಿ, ಮನೆಗೆಲಸದವರವಂತೆ ನಡೆಸಿಕೊಳ್ಳುತ್ತಿದ್ದಾರೆ.
- ಅಂಕುಶ್.ಬಿ, ಬೆಂಗಳೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಗೆ ಬೆಂಬಲ ನೀಡಲ್ಲ- ಎಡಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್; ನಾವು ಇನ್ನೂ ನಿರ್ಧರಿಸಿಲ್ಲ- ವಿಸಿಕೆ

ತಮಿಳುನಾಡು: TVK ಗೆ ಬಹುಮತದ ಕೊರತೆ; ಇಕ್ಕಟ್ಟಿನಲ್ಲಿ ವಿಜಯ್; ರಾಜ್ಯಪಾಲರ ನಡೆ ಏನು?

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!

'ಇರಾನ್ ಡೀಲ್ ತಿರಸ್ಕರಿಸಿದರೆ ಬಾಂಬ್ ದಾಳಿ ಆರಂಭ, ಇದು ಅತ್ಯಂತ ಭೀಕರವಾಗಿರುತ್ತದೆ': ಟ್ರಂಪ್ ಎಚ್ಚರಿಕೆ

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್; ನಾಳೆಯೇ ಪ್ರಮಾಣವಚನ ಸಾಧ್ಯತೆ

SCROLL FOR NEXT