ಸಾಪ್ತಾಹಿಕಪ್ರಭ

ಅಟ್ಟಿನಳಗೆ ಅರಳಿದ ಹವ್ಯಕ ನುಡಿ

ಹವ್ಯಕ ಬ್ರಾಹ್ಮಣ ಸಮುದಾಯ ಸಾಮಾನ್ಯವಾಗಿ ನೆಲೆಸಿರುವುದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರಗಳಲ್ಲಿ. ಪ್ರಾದೇಶಿಕವಾಗಿ ಹವ್ಯಕ ಭಾಷೆಯಲ್ಲಿ ಬಹಳಷ್ಟು ಭಿನ್ನತೆಗಳಿವೆ. 'ಅಟ್ಟಿನಳಗೆ- ಇದು ಅಡುಗೆ ಪುಸ್ತಕ ಅಲ್ಲ...' ಕೃತಿಯಲ್ಲಿ ಬರೆಯಲಾಗಿರುವ ಲೇಖನದಲ್ಲಿ ಢಿಢಿಢಿ.್ಟಠಠಛಟಿಟಿಛ.್ಛ್ಟಟ ಎಂಬ ಹವ್ಯಕ ಬ್ಲಾಗ್‌ನಲ್ಲಿ ಬರೆದ ಲೇಖನಗಳು, ಲಘು ಪ್ರಬಂಧ, ಆರೋಗ್ಯ ವಿಚಾರ, ಪ್ರವಾಸ, ಹಳೆಯ ದಶಕಗಳಲ್ಲಿದ್ದ ಜೀವನ ಕ್ರಮ ಮತ್ತು ಹೊಸ ದಿನಮಾನಗಳಲ್ಲಿನ ಮೌಲ್ಯಗಳ ಸಂಘರ್ಷಗಳ ಬಗೆಯನ್ನು ಆತ್ಮೀಯವಾಗಿ ವಿವರಿಸಲಾಗಿದೆ. ಈ ಮೂಲಕ ಸಾಮುದಾಯಿಕ ಭಾಷೆಗಳಲ್ಲೂ ಸಾಹಿತ್ಯಾಸಕ್ತಿ ಬೆಳೆಸುವ ಯತ್ನ ಇದಾಗಿದೆ.
'ಅಟ್ಟಿನಳಗೆ' ಪುಸ್ತಕದಲ್ಲಿ ಒಟ್ಟು 19 ಶೀರ್ಷಿಕೆಗಳಲ್ಲಿ ಜೀವನದ ವಿವಿಧ ಅಂಶಗಳ ಬಗ್ಗೆ ಲೇಖಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೊಡ್ಡಮಾಣಿ ರಾಮಭಟ್ಟರು ಬರೆದ 'ತಾಳಮದ್ದಳೆ, ಮತ್ತೆ ಬೇರೆ ಶುದ್ಧಿಗೊ' ಎಂಬ ಲೇಖನದಲ್ಲಿ ಊರಿನವರೆಲ್ಲ ಸೇರಿಕೊಂಡು ಯಾವ ರೀತಿ ಯಕ್ಷಗಾನ ತಾಳಮದ್ದಳೆ ಮಾಡಲು ಉತ್ಸಾಹದಿಂದ ಮುಂದೆ ಬರುತ್ತಾರೆ, ವಿಶೇಷವಾಗಿ ನವರಾತ್ರಿಯಂಥ ಹಬ್ಬಹರಿದಿನಗಳ ಸಂದರ್ಭಗಳಲ್ಲಿ ಮನರಂಜನೆಯ ಜತೆಗೆ ಪೌರಾಣಿಕ ಕಥೆಗಳಿಂದ ಆಯ್ದ ಭಾಗಗಳನ್ನು ವೇದಿಕೆಗೆ ತರುತ್ತಾರೆ. ಅದಕ್ಕಾಗಿ ಹಗಲಿನ ವೇಳೆ ಅಭ್ಯಾಸ, ಆ ಸಮಯದಲ್ಲಿನ ವಿನೋದಗಳ ಬಗ್ಗೆ ನವಿರಾಗಿ ವಿವರಿಸಿದ್ದಾರೆ. ಡಾ. ಶಾಮರಾಜ್ ಕಿದೂರು ಅವರ ಬರವಣಿಗೆ ಬಗೆಗಿನ ಲೇಖನದಲ್ಲಿ ಮಗುವೊಂದು ಪೆನ್/ಪೆನ್ಸಿಲ್ ಸಿಕ್ಕಿದರೆ ಮನೆಯ ಗೋಡೆ, ನೆಲದಲ್ಲಿ ಗೀಚುವ ಬಗೆಯನ್ನು ಆಕರ್ಷಕವಾಗಿ ವಿವರಿಸಿದ್ದಾರೆ. ಶಾಲೆಗಳಲ್ಲಿ ಕಲಿಯುವ ವೇಳೆ ಮಕ್ಕಳಿಗೆ ಬಾಲ್ ಪೆನ್‌ನಲ್ಲಿ ಬರಯಲೇ ಬಾರದು. ಬದಲಾಗಿ ಶಾಯಿ ಪೆನ್‌ನಲ್ಲಿ ಬರೆಯತಕ್ಕದ್ದು ಎಂಬ ದಿನಗಳ ಬಗೆಯನ್ನು ಮನಸ್ಸಿಗೆ ಮುದವಾಗುವಂತೆ ವಿವರಿಸಿದ್ದಾರೆ.
ಯಾವುದೇ ಕುಟುಂಬವಿರಲಿ, ಉಳಿತಾಯ ಎಂಬ ವಿಚಾರ ಅಗತ್ಯವಾಗಿ ಪಾಲನೆ ಮಾಡಿಕೊಂಡು ಬರಬೇಕಾದ ವಿಚಾರ. ಅದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ತೆಕ್ಕುಂಜ ಹವ್ಯಕ ಭಾಷೆಯಲ್ಲಿ ಬರೆದ ಕುಟುಂಬದ ಕತೆ ನಿಜಕ್ಕೂ ಈಗಿನ ಯುವ ದಂಪತಿಗೆ ಬದುಕಿನ ಕನ್ನಡಿ.
ಮುಂಬೈ, ಚೆನ್ನೈನಂಥ ದೂರದ ಊರುಗಳಲ್ಲಿನ ಬದುಕು ಎಷ್ಟು ಕಷ್ಟ, ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತು ಯಾವ ರೀತಿ ಜೀವನ ಸಾಗಿಸಬೇಕೆಂಬ ಬಗ್ಗೆ ರಘುರಾಮ ಮುಳಿಯ 'ದಾದರ್ ಸೇ ದೊಂಬಿವಿಲೀ ತಕ್‌' ಎಂಬ ಶಿರೋನಾಮೆಯಲ್ಲಿರುವ ಬರಹದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.
ಈ ಪುಸ್ತಕದಲ್ಲಿ ಮತ್ತೊಂದು ಇಷ್ಟವಾಗುವ ಅಂಶವೆಂದರೆ, ಲೇಖಕರನ್ನು ಅಡ್ಡ ಹೆಸರಿನಿಂದ ಗುರುತಿಸಿರುವುದು. ಏಕೆಂದರೆ, ಹವ್ಯಕರಲ್ಲಿ ಇದೇ ಪದ್ಧತಿ ಚಾಲ್ತಿಯಲ್ಲಿದೆ. ಉದಾಹರಣೆಯಾಗಿ ದೊಡ್ಡಮಾಣಿ ರಾಮಭಟ್ಟ ಎಂಬ ಹೆಸರನ್ನು ಇಲ್ಲಿ 'ದೊಡ್ಡ ಬಾವ' ಎಂದೇ ಉಲ್ಲೇಖಿಸಲಾಗಿದೆ. ಈ ರೀತಿ ಪ್ರೀತಿಯಿಂದ ಕರೆಯುವಿಕೆ ಇತರೆ ಸಮುದಾಯದಲ್ಲೂ ಇದೆ. ಅದೇ ರೀತಿಯ ಅಡ್ಡಹೆಸರನ್ನೇ ಲೇಖನದ ಆರಂಭದಲ್ಲಿ ಕೊಡಲಾಗಿದೆ.
ಪುಸ್ತಕದ ಶೀರ್ಷಿಕೆ ಬಗ್ಗೆ
'ಅಟ್ಟಿನಳಗೆ' ಎಂದರೆ ಹವಕ್ಯ ಬ್ರಾಹ್ಮಣರ ಮನೆಗಳಲ್ಲಿ, ಕಡುಬು, ಅಕ್ಕಿ ಉಂಡೆ ಮೊದಲಾದ ಖಾದ್ಯ ತಯಾರಿಸುವ ಪಾತ್ರೆ. 'ಅಟ್ಟಿನ' ಅಂದರೆ ಅಡುಗೆಯ, 'ಅಳಗೆ' ಅಂದರೆ ಪಾತ್ರೆಯ ಎಂಬರ್ಥ. ಮೇಲ್ನೋಟಕ್ಕೆ ಇದು ಒಂದು ಸಮುದಾಯಕ್ಕೆ ಸೇರಿದ ಪುಸ್ತಕ ಎನಿಸಿದರೂ ಎಲ್ಲರೂ ಓದಿ ತಿಳಿದುಕೊಳ್ಳಬಹುದಾದ, ವೈವಿಧ್ಯಮಯ ಬರಹಗಳನ್ನು ಒಳಗೊಂಡ ಪುಸ್ತಕ. ಮಾತ್ರವಲ್ಲದೆ, ಹವ್ಯಕರ ಆಡು ನುಡಿಯನ್ನು ಸಾಹಿತ್ಯಾತ್ಮಕವಾಗಿ ಪ್ರಸ್ತುತಪಡಿಸುವ ಪ್ರಯತ್ನ ಇಲ್ಲಿದೆ.
ಕೃತಿ ಹೆಸರು: ಅಟ್ಟಿನಳಗೆ- ಇದು ಅಡುಗೆ ಪುಸ್ತಕ ಅಲ್ಲ...
ಪ್ರ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
ಅನುಗ್ರಹ, ಶಿವಗಿರಿನಗರ, ಕುಳಾಯಿ- ಹೊಸಬೆಟ್ಟು,
ಮಂಗಳೂರು-575 019
ಬೆಲೆ: ರು. 80
ಯಾಕೆ ಓದಬೇಕು?: ಸಮುದಾಯವೊಂದರ
ಭಾಷಾ ಪ್ರಯೋಗದ ಸೊಗಡು ಅರಿಯಲು....


-ಸದಾಶಿವ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್