ನವೋದಯದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರ. ಅವರ ನೆನಪಿನಲ್ಲಿ, ಸೃಜನ ಸಾಂಸ್ಕೃತಿಕ ವೇದಿಕೆಯು ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು. 122 ವರ್ಷಗಳ ಹಿಂದೆ ಮೃತರಾದ ವಿದ್ಯಾಸಾಗರರ ಸಾಮಾಜಿಕ ಕೊಡುಗೆಯನ್ನು ಅತಿಥಿಗಳು ಶ್ಲಾಘಿಸಿದರು. ಆಧುನಿಕ ಶಿಕ್ಷಣ, ಹೆಣ್ಣುಮಕ್ಕಳ ಶಿಕ್ಷಣ, ವಿಧವಾ ವಿವಾಹ ಮುಂತಾದ ಜನತಾಂತ್ರಿಕ ಕಲ್ಪನೆಗಳ ಸಾಕಾರಕ್ಕಾಗಿ ಆ ಕಾಲದಲ್ಲೇ ದುಡಿದಿದ್ದರು. ಪ್ರಖರ ವೈಚಾರಿಕ ಮನೋಭಾವನೆ ತಳೆದಿದ್ದರು ಎಂದು ನೆನಪಿಸಿಕೊಂಡರು. ಸೃಜನ ಕಲಾವಿದರು 'ಅಮೂಲ್ಯ ವಿದ್ಯೆ' ಎಂಬ ವಿಡಂಬನಾತ್ಮಕ ನಾಟಕ ಪ್ರಸ್ತುತಪಡಿಸಿದರು. ಅರ್ಥವಿಲ್ಲದ ಶಿಕ್ಷಣ ನೀತಿಯ ವಿಡಂಬನೆ ಇದರ ವಸ್ತು. ಸುಪ್ರಸಿದ್ಧ ಜನಪದ ಕಥನಗೀತೆಯಾದ 'ಕೆರೆಗೆ ಹಾರ' ನಾಟಕವನ್ನು ಕಿಶೋರವಾಹಿನಿಯ ಕಲಾವಿದರು ಪ್ರದರ್ಶಿಸಿದರು.